ಅಹಮದ್‌ಪುರ (ಪಶ್ಚಿಮ ಬಂಗಾಳ): ವಾಮಾಚಾರದ ಶಂಕೆಯಿಂದ ವಯೋವೃದ್ಧ ಬುಡಕಟ್ಟು ದಂಪತಿಯನ್ನು ಗ್ರಾಮದ ಕೆಲವರು ಹತ್ಯೆಗೈದ ಘಟನೆ ಶುಕ್ರವಾರ ಇಲ್ಲಿನ ಬಿರ್ಭೂಮ್‌ನ ನೋಪಾರಾ ಗ್ರಾಮದಲ್ಲಿ ನಡೆದಿದೆ. ದಂಪತಿಯನ್ನು ಬೋಲ್ಪುರ್ ಮುನ್ಸಿಪಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಪಾಂಡ್ರು ಹೆಂಬ್ರೋಮ್ (62) ಮತ್ತು ಪಾರ್ವತಿ ಹೆಂಬ್ರೋಮ್ (52) ಎಂದು ಗುರುತಿಸಲಾಗಿದೆ ಎಂದು ಸೈಂಥಿಯಾ ಪೊಲೀಸ್ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ನವಜಾತ ಹೆಣ್ಣು ಮಗು ಕದ್ದೊಯ್ದಿದ್ದ ಮಹಿಳೆಯ ಬಂಧನ
ಟ್ರ್ಯಾಕ್ಟರ್‌ನಲ್ಲಿ ಶವಸಂಸ್ಕಾರಕ್ಕೆ ತೆಗೆದುಕೊಂಡು ಹೋಗುವಾಗ ಘಟನೆ ಬೆಳಕಿಗೆ:ಬೆಣೆದಂಗ ಗ್ರಾಮದ ಸ್ಮಶಾನಕ್ಕೆ ಮೃತರ ಶವಗಳನ್ನು ಟ್ರ್ಯಾಕ್ಟರ್‌ನಲ್ಲಿ ಶವಸಂಸ್ಕಾರಕ್ಕೆ ಕೊಂಡೊಯ್ಯುತ್ತಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ಮುಖ್ಯಸ್ಥ ರುಬಾಯಿ ಬೆಸ್ರಾರ್ ಅವರು ಆಸ್ಪತ್ರೆಯ ಶವಾಗಾರದಿಂದ ಮೃತರ ಶವಗಳನ್ನು ಶವಸಂಸ್ಕಾರಕ್ಕಾಗಿ ತಮ್ಮ ಗ್ರಾಮಕ್ಕೆ ತರಲು ಕೆಲವು ಗ್ರಾಮಸ್ಥರನ್ನು ಕೇಳಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ :ಬೀದಿ ನಾಯಿ ಮೇಲೆ ಅತ್ಯಾಚಾರ: ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು
ಶವ ಸಂಸ್ಕಾರಕ್ಕೆ ಅವಕಾಶ ನೀಡುವಂತೆ ಪೊಲೀಸರಿಂದ ಮನವರಿಕೆ: ಘಟನೆ ಖಂಡಿಸಿ ಕೆಲ ಗ್ರಾಮಸ್ಥರು ಶವಸಂಸ್ಕಾರಕ್ಕೆ ತಡೆ ಒಡ್ಡಿದ್ದರು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸೈಂಥಿಯಾ ಮತ್ತು ಶಾಂತಿನಿಕೇತನ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಪೊಲೀಸರು ಗ್ರಾಮದ ಮುಖಂಡನನ್ನು ಬಂಧಿಸಿ, ದಂಪತಿಯ ಅಂತಿಮ ಸಂಸ್ಕಾರಕ್ಕೆ ಅವಕಾಶ ನೀಡುವಂತೆ ಗ್ರಾಮಸ್ಥರ ಮನವೊಲಿಸಿದ್ದಾರೆ. ನಂತರ ಮೃತರ ಅಂತ್ಯಕ್ರಿಯೆಗೆ ಅವಕಾಶ ನೀಡಿದ್ದಾರೆ.