ಜೈಪುರ(ರಾಜಸ್ಥಾನ್):ನೆದರ್ಲ್ಯಾಂಡ್ಸ್ನಿಂದ ಭಾರತಕ್ಕೆ ಪ್ರವಾಸ ಬಂದಿದ್ದ ಮಹಿಳೆ ಮೇಲೆ ಮಸಾಜ್ ಮಾಡುವ ನೆಪದಲ್ಲಿ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ರಾಜಸ್ಥಾನ್ ಪೊಲೀಸರು ಬಂಧಿಸಿದ್ದು, ಪ್ರಸ್ತುತ ವಿಚಾರಣೆ ನಡೆಸುತ್ತಿದ್ದಾರೆ.
ಐದು ದಿನಗಳ ಹಿಂದೆ 30 ವರ್ಷದ ಡಚ್ ಮಹಿಳೆ ಭಾರತದಲ್ಲಿ ಹೋಳಿ ಹಬ್ಬವನ್ನು ಸಂಭ್ರಮಿಸಲು ತನ್ನ ಸ್ನೇಹಿತರೊಂದಿಗೆ ರಾಜಸ್ಥಾನಕ್ಕೆ ಬಂದಿದ್ದಳು. ಸಿಂಧಿ ಕ್ಯಾಂಪ್ ಪ್ರದೇಶದಲ್ಲಿರುವ ಅವರೆಲ್ಲರೂ ತಂಗಿದ್ದರು. ಬುಧವಾರ ಸಂಜೆ ಯುವತಿಯು ಆಯುರ್ವೇದ ಮಸಾಜ್ಗಾಗಿ ಯುವಕನನ್ನು ತನ್ನ ಕೊಠಡಿಗೆ ಕರೆದಿದ್ದಾಳೆ. ಈ ವೇಳೆ ಯುವಕ ಆಕೆಯ ಮೇಲೆ ಅತ್ಯಾಚಾರವೆಸಗಿ, ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.