ನವಸಾರಿ(ಗುಜರಾತ್): ಯುವಕನ ವಿಕೃತಿಯ ವಿಶಿಷ್ಟ ಪ್ರಕರಣವೊಂದು ನಗರದಲ್ಲಿ ಬೆಳಕಿಗೆ ಬಂದಿದೆ. ನವಸಾರಿಯ ಜಲಾಲ್‌ಪುರದಲ್ಲಿ ವಾಸವಾಗಿರುವ 28 ವರ್ಷದ ಯುವಕನೊಬ್ಬ ತಪ್ಪು ದಾರಿಯಲ್ಲಿ ಮೋಜು ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಮುನ್ನೆಲೆಗೆ ಬಂದಿದೆ. ಯುವಕನು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದನು. ಆದರೆ ಈ ವಿಧಾನವು ಸ್ವಲ್ಪ ವಿಭಿನ್ನವಾಗಿ ಇರಲಿ ಎಂದು ಬಾಟಲಿ ಮೂಲಕ ಯತ್ನಿಸಿದ್ದಾನೆ. ಕಾರಣಾಂತರಗಳಿಂದ ಆತನ ಖಾಸಗಿ ಅಂಗ ಬಾಟಲಿಯಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ಯುವಕನಿಗೆ ದಿಢೀರ್ ಅನಾಹುತವೊಂದು ಎದುರಾಗಿದೆ. ಸಿವಿಲ್ ವೈದ್ಯರ ನೆರವಿನಿಂದ ಯುವಕ ಖಾಸಗಿ ಅಂಗವನ್ನು ಬಾಟಲಿಯಿಂದ ಹೊರ ತೆಗೆಯಲಾಗಿದೆ.
ಏನಿದು ಪ್ರಕರಣ:ಸಂತ್ರಸ್ತ ಯುವಕನ ಪ್ರಕಾರ, ವಿವಿಧ ರೀತಿಯ ಆನಂದವನ್ನು ಪಡೆಯಲು ತನ್ನ ಖಾಸಗಿ ಭಾಗವನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ಹಾಕಿದ್ದಾನೆ. ನಂತರ ಆ ಯುವಕನ ಖಾಸಗಿ ಅಂಗ ಬಾಟಲಿಯೊಳಗೆ ಸಿಲುಕಿಕೊಂಡಿದೆ. ಹಲವು ಪ್ರಯತ್ನಗಳ ನಂತರವೂ ಯುವಕನ ಖಾಸಗಿ ಅಂಗ ಬಾಟಲಿಯಿಂದ ಹೊರತೆಗೆಯಲು ಸಾಧ್ಯವಾಗಲಿಲ್ಲ. ಯುವಕ ಇಡೀ ರಾತ್ರಿ ನೋವಿನಿಂದ ನರಳಿದ್ದಾನೆ. ಈ ವಿಷಯ ಕುರಿತು ಮನೆಯಲ್ಲಿ ಯಾವುದೇ ಮಾತುಗಳನ್ನಾಡದೇ ಬೆಳಗ್ಗೆ ಆ ಯುವಕ ಸಿವಿಲ್ ಆಸ್ಪತ್ರೆಗೆ ತೆರಳಿದ್ದಾನೆ. ಅಲ್ಲಿ ವೈದ್ಯರು ಯುವಕನ ನೋವನ್ನು ಆಲಿಸಿದರು ಮತ್ತು ತಕ್ಷಣವೇ ಆಪರೇಷನ್ ಮಾಡಲು ನಿರ್ಧರಿಸಿದರು. ಒಂದು ಗಂಟೆಯ ಕಠಿಣ ಪರಿಶ್ರಮದ ನಂತರ ವೈದ್ಯರು ಯುವಕನ ಖಾಸಗಿ ಅಂಗದಿಂದ ಪ್ಲಾಸ್ಟಿಕ್ ಬಾಟಲಿ ಬೇರ್ಪಡಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಐದಕ್ಕೂ ಹೆಚ್ಚು ಸಿವಿಲ್ ವೈದ್ಯರ ತಂಡ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದೆ. ಇದರೊಂದಿಗೆ ವೈದ್ಯರು ಈ ಯುವಕನಿಗೆ ಮಾನಸಿಕ ಚಿಕಿತ್ಸೆಯನ್ನೂ ನೀಡಿದ್ದಾರೆ. ನವಸಾರಿ ಸಿವಿಲ್ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ರಿಷಭ್ ಮಸುರಿಯಾ ಪ್ರಕಾರ, ಒಬ್ಬ ಯುವಕ ನಮ್ಮ ಬಳಿಗೆ ಬಂದು ತನಗೆ ಆಗಿರುವ ನೋವನ್ನು ವಿವರಿಸಿದರು. ಅಸ್ವಸ್ಥ ಸ್ಥಿತಿಯಲ್ಲಿ ಕಂಡು ಬಂದಿದ್ದು, ಆತನನ್ನು ಸಮಾಧಾನ ಪಡಿಸಿ ಮುಂದಿನ ಕ್ರಮ ಕೈಗೊಂಡೆವು ಎಂದು ಹೇಳಿದ್ದಾರೆ.