ಜಮುಯಿ(ಬಿಹಾರ):ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ಜಾರಿಯಲ್ಲಿದೆ. ಮದ್ಯವನ್ನು ಕುಡಿಯಲು ಅಥವಾ ಮಾರಾಟ ಮಾಡಲು ಅವಕಾಶವಿಲ್ಲ. ಆದರೆ, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ವೈರಲ್ ಆಗುವ ಅನೇಕ ಫೋಟೋ ವಿಡಿಯೋಗಳು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಅಕ್ರಮ ಮದ್ಯ ಸಾಗಣೆ, ಸ್ಥಳೀಯ ಮದ್ಯ ಉತ್ಪಾದನೆಯ ಶಂಕೆ ಇದೆ. ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಮದ್ಯದ ಅಮಲಿನಲ್ಲಿ ಕುಡುಕನ ಪರದಾಟದ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಬಿಹಾರ ಜಮುಯಿ ಪ್ರದೇಶದಲ್ಲಿ ಕುಡುಕನೊಬ್ಬ ಮದ್ಯದ ಅಮಲಿನಲ್ಲಿ ನೃತ್ಯ ಮಾಡುತ್ತಿರುವ, ತನ್ನ ಸೈಕಲ್ ಅನ್ನು ಚಲಾಯಿಸಲು ಯತ್ನಿಸಿ ಪರದಾಟ ನಡೆಸುತ್ತಿರುವ ಜೊತೆಗೆ ಕೆಲ ಹೊತ್ತು ಅಲ್ಲೇ ಮಲಗಿ ಮತ್ತೆ ಎದ್ದು ಅಮಲಿನಲ್ಲೇ ವಾಲಾಡುತ್ತಿರುವ ವಿಡಿಯೋ ವೈರಲ್ ಆಗಿದೆ.