ಕರ್ನಾಟಕ

karnataka

ETV Bharat / bharat

ಇರಾನ್​ನಿಂದ ಆಮದಾದ 205 ಕೆಜಿ ಹೆರಾಯಿನ್​ ಪತ್ತೆ..1436 ಕೋಟಿ ಮೌಲ್ಯದ ವಸ್ತು ವಶ - ಇರಾನ್​ನಿಂದ ಅಕ್ರಮವಾಗಿ ಆಮದಾದ ಹೆರಾಯಿನ್​ ಜಪ್ತಿ

ಇರಾನ್​ನಿಂದ 17 ಕಂಟೇನರ್​ಗಳಲ್ಲಿ ಅಕ್ರಮವಾಗಿ ಆಮದಾಗುತ್ತಿದ್ದ 205 ಕೆಜಿ ಹೆರಾಯಿನ್​ ಅನ್ನು ಡಿಆರ್​ಒ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ಇದು 1436 ಕೋಟಿ ರೂಪಾಯಿ ಮೌಲ್ಯ ಹೊಂದಿದೆ.

DRO seized 205 kg of heroin in gujarat
ಹೆರಾಯಿನ್

By

Published : Apr 25, 2022, 3:27 PM IST

ಗಾಂಧಿನಗರ:ಗುಜರಾತ್​ನ ಕಾಂಡ್ಲಾ ಬಂದರಿನಲ್ಲಿ ಇರಾನ್​ನಿಂದ ಅಕ್ರಮವಾಗಿ ಆಮದಾದ 1436 ಕೋಟಿ ರೂಪಾಯಿ ಮೌಲ್ಯದ 205.6 ಕೆಜಿ ಹೆರಾಯಿನ್​ ಅನ್ನು ಭಯೋತ್ಪಾದನಾ ನಿಗ್ರಹ ದಳ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ.

ಇರಾನ್​ನಿಂದ ಜಿಪ್ಸಮ್​ ಪೌಡರ್​ ಆಮದಾಗುತ್ತಿದ್ದ ಹಡಗಿನಲ್ಲಿ 17 ಕಂಟೇನರ್​ಗಳಲ್ಲಿ ಈ ಹೆರಾಯಿನ್​ ಅನ್ನು ಅಡಗಿಸಿಡಲಾಗಿತ್ತು. ಹೆರಾಯಿನ್​ ಸರಬರಾಜು ಮಾಡಲಾಗುತ್ತಿದೆ ಎಂಬ ಮಾಹಿತಿ ಅರಿತ ಡಿಆರ್​ಒ ಅಧಿಕಾರಿಗಳು ದಾಳಿ ನಡೆಸಿ ಭಾರೀ ಪ್ರಮಾಣದ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.

ಉತ್ತರಾಖಂಡ ಮೂಲದ ಸಂಸ್ಥೆಯೊಂದು ಈ ಸರಕುಗಳನ್ನು ಆಮದು ಮಾಡಿಕೊಂಡಿದೆ. ಇದು ಇರಾನ್‌ನ ಅಬ್ಬಾಸ್ ಬಂದರಿನಿಂದ ಸರಬರಾಜು ಮಾಡಲಾಗಿದೆ. ದಾಳಿಯ ವೇಳೆ ಮಾದಕವಸ್ತುವನ್ನು ಆಮದು ಮಾಡಿಕೊಂಡ ವ್ಯಕ್ತಿಯು ಸ್ಥಳದಲ್ಲಿರಲಿಲ್ಲ. ತನಿಖೆಯ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ:ಪಾಟ್ನಾ ಎನ್​ಇಟಿ ಇಂಜಿನಿಯರಿಂಗ್​ ವಿದ್ಯಾರ್ಥಿಗೆ ಅಮೆಜಾನ್​ನಿಂದ 1.08 ಕೋಟಿ ರೂ. ಆಫರ್​

For All Latest Updates

ABOUT THE AUTHOR

...view details