ಕರ್ನಾಟಕ

karnataka

ETV Bharat / bharat

ಜೋಡಿ ಕೊಲೆ: 12 ದಿನ 1200 ಕಿಮೀ ಹುಡುಕಾಡಿ ಆರೋಪಿ ಬಂಧಿಸಿದ ಮುಂಬೈ ಪೊಲೀಸರು - ಆಸ್ತಿ ವಿವಾದ

1200 ಕಿಮೀ ಹುಡುಕಾಡಿದ ಬಳಿಕ ಜೋಡಿ ಕೊಲೆ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

Mumbai cops nab double murder accused after 1200 km, 12-day hunt across states
Mumbai cops nab double murder accused after 1200 km, 12-day hunt across states

By ETV Bharat Karnataka Team

Published : Jan 11, 2024, 5:02 PM IST

ಮುಂಬೈ : 12 ದಿನಗಳ ಕಾಲ ವಿವಿಧ ರಾಜ್ಯಗಳಲ್ಲಿ ಸುಮಾರು 1200 ಕಿಲೋಮೀಟರ್ ಪ್ರಯಾಣಿಸಿ ಹುಡುಕಾಡಿದ ನಂತರ ಮುಂಬೈ ಪೊಲೀಸರು ಕೊನೆಗೂ ಪತ್ನಿ ಮತ್ತು ಸಹೋದರನನ್ನು ಥಳಿಸಿ ಕೊಂದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಅಧಿಕಾರಿಯೊಬ್ಬರು ಗುರುವಾರ ಮಾಹಿತಿ ನೀಡಿದ್ದಾರೆ. ಆರೋಪಿ ಡ್ರೈಸನ್ ಎಂ.ಡಿ'ಸಾ (40) ಮಲಾಡ್ ಪಶ್ಚಿಮದಲ್ಲಿರುವ ತನ್ನ ಮನೆಯಲ್ಲಿ ಜಗಳವಾಡಿ ಡಿಸೆಂಬರ್ 29 ರಂದು ಪತ್ನಿ ಚಿತ್ರಾ (35) ಮತ್ತು ಹಿರಿಯ ಸಹೋದರ ಡಾಮಿಯನ್ ಎಂ.ಡಿ'ಸಾ ಅವರನ್ನು ಕೊಂದು ಅಲ್ಲಿಂದ ಪರಾರಿಯಾಗಿದ್ದ.

ಘಟನೆ ಬಗ್ಗೆ ಆರೋಪಿಯ ಅತ್ತಿಗೆ ಬಿಂದು ಡಾಮಿಯನ್ ಡಿ'ಸಾ ಪೊಲೀಸರಿಗೆ ದೂರು ನೀಡಿದ್ದಾರೆ. ತಾನು ಕಚೇರಿಗೆ ಹೋಗಿದ್ದ ಸಮಯದಲ್ಲಿ ಡ್ರೇಸನ್ ತಮ್ಮ ಪತ್ನಿ ಚಿತ್ರಾ ಮತ್ತು ಸಹೋದರ ಡಾಮಿಯನ್ ಅವರನ್ನು ಹೂವಿನ ಮಡಕೆಯಿಂದ ಹೊಡೆದಿದ್ದಾನೆ ಮತ್ತು ಕೆಲ ಚೂಪಾದ ವಸ್ತುಗಳಿಂದ ಇರಿದಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಚಿತ್ರಾ ತಕ್ಷಣ ಸಾವನ್ನಪ್ಪಿದರೆ, ಡಾಮಿಯನ್ ಆಘಾತದ ಗಾಯಗಳಿಂದಾಗಿ ಕೋಮಾಕ್ಕೆ ಜಾರಿದ್ದ. ಐದು ದಿನಗಳ ನಂತರ (ಜನವರಿ 2) ಖಾಸಗಿ ಆಸ್ಪತ್ರೆಯಲ್ಲಿ ಆತ ಕೊನೆಯುಸಿರೆಳೆದಿದ್ದ. ಇಬ್ಬರು ಸಹೋದರರು ಮತ್ತು ಅವರ ಪತ್ನಿಯರ ನಡುವಿನ ಹಳೆಯ ಆಸ್ತಿ ವಿವಾದವೇ ಈ ಗಲಾಟೆಗೆ ಮತ್ತು ಕೊಲೆಗೆ ಕಾರಣವಾಗಿದೆ ಎಂದು ಹೇಳಲಾಗಿದ್ದು, ಇದು ಇಬ್ಬರ ಜೀವವನ್ನು ಬಲಿ ತೆಗೆದುಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಂದು ನೀಡಿದ ದೂರಿನ ಆಧಾರದ ಮೇಲೆ, ಬಂಗೂರ್ ನಗರ ಲಿಂಕ್ ರೋಡ್ ಪೊಲೀಸ್ ಠಾಣೆಯಲ್ಲಿ ಡಬಲ್ ಮರ್ಡರ್ ಎಫ್ಐಆರ್ ದಾಖಲಾಗಿದೆ.

ಪೊಲೀಸರ ಕಣ್ತಪ್ಪಿಸಲು ಆರೋಪಿ ಡ್ರೇಸನ್ ತನ್ನೊಂದಿಗೆ ಮೊಬೈಲ್ ಇಟ್ಟುಕೊಂಡಿರಲಿಲ್ಲ. ಅಲ್ಲದೇ ಆತ ಎಲ್ಲಿಯೂ ಯಾವುದೇ ಬ್ಯಾಂಕ್ ಕಾರ್ಡ್​ಗಳನ್ನು ಬಳಸಿರಲಿಲ್ಲ. ಹೀಗಾಗಿ ಆತನನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿತ್ತು. ಇಷ್ಟಾದರೂ ನಿರಂತರ ಪ್ರಯತ್ನ ಮಾಡಿದ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ಆರಂಭದಲ್ಲಿ ಒಂದು ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿ ಡ್ರೇಸನ್ ಕಾಣಿಸಿಕೊಂಡಿದ್ದ. ನಂತರ ಇನ್ನೂ ಕೆಲ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕಗಳಲ್ಲಿ ಹುಡುಕಾಡಿ ಕೊನೆಗೆ ಕೋಲ್ಕತ್ತಾದಲ್ಲಿ ಆತನನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದಿಂದ ಗಡಿ ದಾಟಿ ಬಾಂಗ್ಲಾದೇಶ ಅಥವಾ ನೇಪಾಳಕ್ಕೆ ಪರಾರಿಯಾಗಲು ಆರೋಪಿ ಪ್ರಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜೀವ್ ಜೈನ್, ಅಜಯ್ ಕುಮಾರ್ ಬನ್ಸಾಲ್, ರೇಣುಕಾ ಬಾಗ್ಡೆ, ಪ್ರಮೋದ್ ತಾವಡೆ, ಭಾಸ್ಕರ್ ಕದಮ್ ಮತ್ತು ಅವರ ತಂಡಗಳು ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು 12 ದಿನಗಳ ಕಾಲ ವಿವಿಧ ರಾಜ್ಯಗಳ ಮೂಲಕ 1200 ಕಿ.ಮೀ.ಗಿಂತ ಹೆಚ್ಚು ದೂರ ಕ್ರಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಇಸನ್ನೂ ಓದಿ : ಉದ್ಯಮದಲ್ಲಿ ಎತ್ತರಕ್ಕೆ ಬೆಳೆಯುತ್ತಿರುವ ಅಸೂಯೆ; ಮಾಲೀಕನ ಪತ್ನಿ ಕೊಲೆ ಮಾಡಿದ್ದ ಆರೋಪಿ ಬಂಧನ

ABOUT THE AUTHOR

...view details