ಕರ್ನಾಟಕ

karnataka

ETV Bharat / bharat

'ಮೈ ಡಾಟರ್ ಜಾಯಿನ್ಡ್​​ ಎ ಕಲ್ಟ್​': ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ ರಿಲೀಸ್​.. ಏನೆಲ್ಲಾ ಇದೆ ಇದರಲ್ಲಿ!?

ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸದ್ಯ ತನ್ನದೇ ಒಂದು ದೇಶ ನಿರ್ಮಾಣ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ಈ ಮಧ್ಯೆ ನಿತ್ಯಾನಂದನ ಕುರಿತಾದ ಸಾಕ್ಷ್ಯಚಿತ್ರವೊಂದು ಬಿಡುಗಡೆಯಾಗಿದೆ.

Doc series on Swami Nithyananda
Doc series on Swami Nithyananda

By

Published : Jun 4, 2022, 12:28 PM IST

ಹೈದರಾಬಾದ್​: ಸದಾ ಒಂದಿಲ್ಲೊಂದು ವಿಷಯಗಳೊಂದಿಗೆ ಸುದ್ದಿಯಲ್ಲಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರವೊಂದು ರಿಲೀಸ್ ಆಗಿದೆ. 'My Daughter Joined a Cult' ಎಂಬ ಹೆಸರಿನಲ್ಲಿ ಈ ಚಿತ್ರ ನಿನ್ನೆ ಡಿಸ್ಕವರಿ+ ನಲ್ಲಿ ಬಿಡುಗಡೆಯಾಗಿದೆ.

ಸ್ವಯಂಘೋಷಿತ ಕೈಲಾಸ ದೇಶದ ಸಂಸ್ಥಾಪಕ ಹಾಗೂ ಬಿಡದಿ ಧ್ಯಾನಪೀಠದ ಮುಖ್ಯಸ್ಥ ನಿತ್ಯಾನಂದ ಸ್ವಾಮೀಜಿ ಕಳೆದ ಕೆಲ ದಿನಗಳ ಹಿಂದೆ ಸಮಾಧಿ ಸ್ಥಿತಿ ತಲುಪಿದ್ದು, ಮತ್ತೆ ಲೌಕಿಕ ಜಗತ್ತಿಗೆ ಹಿಂತಿರುಗುತ್ತೇನೆ ಎಂದು ಹೇಳಿಕೊಂಡಿದ್ದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಸಾಕ್ಷ್ಯಚಿತ್ರವೊಂದು ಸಿದ್ಧಗೊಂಡಿದೆ. ಜೂನ್ 2ರಿಂದ OTT ಪ್ಲಾಟ್​ಫಾರ್ಮ್​ನಲ್ಲಿ ಇದು ರಿಲೀಸ್ ಆಗಿದ್ದು, ಹಿಂದಿ, ತಮಿಳು, ತೆಲುಗು, ಇಂಗ್ಲಿಷ್​​​, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿದೆ. ಇದಕ್ಕೆ ಸಂಬಂಧಿಸಿದಂತೆ ಡಿಸ್ಕವರಿ + ಅಧಿಕೃತವಾಗಿ ಇನ್​​ಸ್ಟಾಗ್ರಾಮ್​​ನಲ್ಲಿ ಟ್ರೈಲರ್ ಹಂಚಿಕೊಂಡಿದೆ.

ಇದನ್ನೂ ಓದಿ:ನಾನು ಸದ್ಯ ಸಮಾಧಿ ಸ್ಥಿತಿ ತಲುಪಿದ್ದು, ಮತ್ತೆ ಲೌಕಿಕ ಜಗತ್ತಿಗೆ ಹಿಂತಿರುಗುತ್ತೇನೆ: ನಿತ್ಯಾನಂದ

ಮೂರು ಸಂಚಿಕೆಗಳಲ್ಲಿ ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದನ ಜೀವನ ಪ್ರಸಾರವಾಗಲಿದ್ದು, ಈ ವೇಳೆ ಭಕ್ತರು ಹಾಗೂ ಆಶ್ರಮಕ್ಕೆ ಬರುವವರಿಗೆ ಯಾವ ರೀತಿಯಾಗಿ ಆಮಿಷವೊಡ್ಡಿದ್ದರು ಎಂಬ ವಿಷಯ ಸಹ ಇದೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಅನೇಕ ಭಕ್ತರು ಮಾತನಾಡಿದ್ದಾರೆ. ಸಾಕ್ಷ್ಯಚಿತ್ರದಲ್ಲಿ ಖುದ್ದಾಗಿ ಅನೇಕರ ಸಂದರ್ಶನ ಮಾಡಲಾಗಿದ್ದು, ತಲೆಮರೆಸಿಕೊಂಡಿದ್ದ ನಿತ್ಯಾನಂದರ ಪತ್ತೆ ಹಚ್ಚಿರುವ ವಿಷಯ ಸಹ ಇದರೊಳಗೆ ಇದೆ.

ಕಳೆದ ಕೆಲ ದಿನಗಳ ಹಿಂದೆ ನಿತ್ಯಾನಂದನ ಕೈಲಾಸ ಪೀಠದ್ದು ಎನ್ನಲಾದ ಫೇಸ್‌ಬುಕ್‌ ಪೇಜ್‌ನಲ್ಲಿ ಪ್ರತಿಕ್ರಿಯಿಸಿ ಪೋಸ್ಟ್ ಹಾಕಲಾಗಿದೆ. ಅದರಲ್ಲಿ ನಿತ್ಯಾನಂದರ ಸಂದೇಶಗಳನ್ನು ಬರೆಯಲಾಗಿದ್ದು, ನಿತ್ಯಾನಂದ ಕೈ ಬರಹ ಎನ್ನಲಾದ ಫೋಟೋ ಕೂಡ ಇದೆ. ನಾನು ಸದ್ಯ ಸಮಾಧಿ ಸ್ಥಿತಿ ತಲುಪಿದ್ದು, ಮತ್ತೆ 2026ರ ವೇಳೆಗೆ ಲೌಕಿಕ ಜಗತ್ತಿನ ಚಟುವಟಿಕೆಗಳಿಗೆ ಹಿಂತಿರುಗುತ್ತೇನೆ ಎಂದು ಬರೆಯಲಾಗಿದೆ‌. ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದನ ವಿರುದ್ಧ ಅತ್ಯಾಚಾರ ಹಾಗೂ ಭಾವನೆಗಳಿಗೆ ಧಕ್ಕೆ ತಂದ ಆರೋಪವಿದೆ. ಧ್ಯಾನಪೀಠದ ಸ್ವಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮೀಜಿ ಎಲ್ಲಿದ್ದಾರೆ ಎನ್ನುವ ಪ್ರಶ್ನೆ ಬಹುತೇಕ ಮಂದಿಯಲ್ಲಿದೆ.

ಭಾರತದಿಂದ ನಿತ್ಯಾನಂದ ಪರಾರಿಯಾಗಿದ್ದು ಹೇಗೆ?: ಇನ್ನು ಆರೋಪಿ‌ ನಿತ್ಯಾನಂದನ ಮೇಲೆ ಈಗಾಗಲೇ ವಾರಂಟ್​ ಜಾರಿ ಇದೆ.‌ 2018ರಲ್ಲಿ ಭಾರತದಿಂದ ಪರಾರಿಯಾಗಲು ಯತ್ನಿಸಿ ಪಾಸ್​ಪೊರ್ಟ್ ನವೀಕರಣಕ್ಕೆ ಬಿಡದಿ ಆಶ್ರಮದಲ್ಲಿದ್ದಾಗ ರಾಮನಗರ ಪೊಲೀಸರಿಗೆ ಮನವಿ‌‌ ಮಾಡಿದ್ದ. ಈ ವೇಳೆ, ಅಂದಿನ ಎಸ್​ಪಿ ರಮೇಶ್ ಬಾನೋತ್ ಒಪ್ಪಿಗೆ ಕೊಟ್ಟಿರಲಿಲ್ಲ. ನಂತರ ಗುಜಾರಾತ್​​​​​ಗೆ ತೆರಳಿದ್ದ. ಮೂಲಗಳ ಪ್ರಕಾರ ನಿತ್ಯಾನಂದ ದೇಶದಿಂದ ಪರಾರಿಯಾಗಲು ನಕಲಿ ಪಾಸ್​ಪೋರ್ಟ್ ಅಥವಾ ಬೇರೆ ದೇಶದ ಪಾಸ್‌ಪೋರ್ಟ್ ಪಡೆದು ಭಾರತದಿಂದ ಆಚೆ ಹೋಗಿದ್ದಾನೆ.

ಮಹಿಳೆಯ ಮೇಲೆ ಅತ್ಯಾಚಾರ: ಬಿಡದಿ ಧ್ಯಾನಪೀಠದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಇದು ರಾಷ್ಟ್ರದ್ಯಾಂತ ಭಾರಿ ಸುದ್ದಿಯಾಗಿತ್ತು. ಇದೇ ವೇಳೆ, ಆಶ್ರಮಕ್ಕೆ ಬರುವ ಭಕ್ತರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಆತನ ಕಾರು ಚಾಲಕ ಲೆನಿನ್ ಎಂಬಾತ ದೂರು ದಾಖಲಿಸಿದ್ದ. ಹಾಗೆ ಮೊಬೈಲ್​ನಲ್ಲಿ ನಿತ್ಯಾನಂದನ ಖಾಸಗಿ ದೃಶ್ಯ ಕೂಡ ಸೆರೆಯಾಗಿತ್ತು. ಈ ವೇಳೆ, ತಾನು ಪುರುಷನೇ ಅಲ್ಲಾ ಎಂದು ನಿತ್ಯಾನಂದ ವಾದಿಸಿದ್ದ. ಈ ವೇಳೆ, ಪುರುಷತ್ವ ಪರೀಕ್ಷೆ, ಧ್ವನಿ ಹಾಗೂ ರಕ್ತ ಪರೀಕ್ಷೆ ಮಾಡಲಾಗಿತ್ತು‌.

ಬಿಡದಿ ಆಶ್ರಮದಲ್ಲಿ ಯುವತಿ ನಿಗೂಢ ಸಾವು: ಇನ್ನು 24 ವರ್ಷದ ಯುವತಿಯೊಬ್ಬಳು 2014 ರ ಡಿಸೆಂಬರ್ 28ರಂದು ಬಿಡದಿಯಲ್ಲಿ ನಿಗೂಡವಾಗಿ ಸಾವನ್ನಪ್ಪಿದಳು. ನಂತರ ನಿತ್ಯಾನಂದನೇ ತನ್ನ ಮಗಳ ಸಾವಿಗೆ ಕಾರಣ, ಆಶ್ರಮದೊಳಗೆ ತಮ್ಮ ಮಗಳಿಗೆ ಹಿಂಸೆ ಕೊಟ್ಟು ಆಕೆಯನ್ನ ಕೊಂದಿದ್ದಾರೆ ಎಂಬ ಆರೋಪವನ್ನ ಪೋಷಕರು ಮಾಡಿದ್ದರು.

ABOUT THE AUTHOR

...view details