ಕರ್ನಾಟಕ

karnataka

ETV Bharat / bharat

ಹುಸಿ ಬಾಂಬ್‌ ಕರೆ ಮಾಡಿದ್ದವನನ್ನ ವಿಮಾನದಲ್ಲಿಯೇ ಬಂಧಿಸಿದ ಪೊಲೀಸರು

ಪೋಷಕರ ಬಳಿಯಿದ್ದ ವೈದ್ಯಕೀಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ..

ಬಾಂಬ್​ ಇದೆ ಎಂದು ಸುಳ್ಳು ಕರೆ
ಬಾಂಬ್​ ಇದೆ ಎಂದು ಸುಳ್ಳು ಕರೆ

By

Published : Jun 14, 2021, 5:21 PM IST

ನವದೆಹಲಿ :ವಿಮಾನದಲ್ಲಿ ಬಾಂಬ್​ಯಿದೆ ಎಂದು ಪೊಲೀಸರಿಗೆ ಹುಸಿ ಬಾಂಬ್‌ ಕರೆ ಮಾಡಿದ್ದಕ್ಕಾಗಿ 22 ವರ್ಷದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆತ ದೆಹಲಿ-ಪಾಟ್ನಾ ಮಾರ್ಗವಾಗಿ ತನ್ನ ತಂದೆಯೊಂದಿಗೆ ಪ್ರಯಾಣಿಸುತ್ತಿದ್ದ. ಈ ವೇಳೆ ಪಿಸಿಆರ್​ಗೆ ಕರೆ ಮಾಡಿ ಬಾಂಬ್​ಯಿದೆ ಎಂದು ಹೇಳಿದ್ದಾನೆ.

ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ವಿಮಾನವನ್ನು ಪರಿಶೀಲಿಸಿ ಯಾವುದೇ ಸ್ಫೋಟಕ ವಸ್ತು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಾಂಬ್​​ಯಿದೆ ಎಂದು ಹುಸಿ ಕರೆ ಮಾಡಿದ್ದ ಯುವಕ ಮಾನಸಿಕ ಅಸ್ವಸ್ಥನಾಗಿದ್ದು, ಆತ ಚಿಕಿತ್ಸೆಗೆಂದು ತಂದೆಯೊಂದಿಗೆ ಪಾಟ್ನಾಕ್ಕೆ ತೆರಳುತ್ತಿದ್ದ ಎಂದು ತಿಳಿದು ಬಂದಿದೆ.

ಪೋಷಕರ ಬಳಿಯಿದ್ದ ವೈದ್ಯಕೀಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದೇವೆ. ಸದ್ಯ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಮಾನದಲ್ಲಿದ್ದ 48ಕ್ಕೂ ಹೆಚ್ಚು ಪ್ರಯಾಣಿಕರನ್ನು ಬೇರೆ ಫ್ಲೈಟ್​ಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ:ISD ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತನೆ: ಮತ್ತೆ ಐವರು ಖದೀಮರ ಬಂಧನ

ABOUT THE AUTHOR

...view details