ಕರ್ನಾಟಕ

karnataka

By

Published : Feb 2, 2022, 8:51 PM IST

ETV Bharat / bharat

40 ನಿಮಿಷದಲ್ಲಿ ಈ 'ಮಸಾಲೆದೋಸೆ' ತಿಂದವರಿಗೆ ಸಿಗುತ್ತೆ ಬರೋಬ್ಬರಿ 71 ಸಾವಿರ ರೂ. ಬಹುಮಾನ!

ಮಸಾಲೆ ದೋಸೆ ಪ್ರಿಯರಿಗೆ ದೆಹಲಿಯ ಹೋಟೆಲ್​ವೊಂದು ವಿಭಿನ್ನವಾದ ಚಾಲೆಂಜ್ ಮುಂದಿಟ್ಟಿದೆ. 40 ನಿಮಿಷಗಳ ಅವಧಿಯಲ್ಲಿ 10 ಅಡಿ ಉದ್ದದ ದೋಸೆ ಸೇವನೆ ಮಾಡಿದ್ರೆ ಬರೋಬ್ಬರಿ 71 ಸಾವಿರ ರೂ. ನಗದು ನೀಡಲಿದೆ.

Doas etting offer in Delhi
Doas etting offer in Delhi

ನವದೆಹಲಿ:ದೆಹಲಿಯಲ್ಲಿನ ಹೋಟೆಲ್​​ವೊಂದರಲ್ಲಿ ಸಿದ್ಧಗೊಳ್ಳುವ ಮಸಾಲೆದೋಸೆವೊಂದನ್ನ 40 ನಿಮಿಷಗಳಲ್ಲಿ ತಿಂದು ಮುಗಿಸುವ ವ್ಯಕ್ತಿಗೆ ಬರೋಬ್ಬರಿ 71 ಸಾವಿರ ರೂಪಾಯಿ ಬಹುಮಾನವಾಗಿ ನೀಡಲಾಗುತ್ತದೆ. ರಾಷ್ಟ್ರ ರಾಜಧಾನಿಯ ಉತ್ತಮ್​ ನಗರದ ಸ್ವಾಮಿ ಶಕ್ತಿ ಸಾಗರ್​ ಹೋಟೆಲ್​ ಇಂತಹದೊಂದು ಆಫರ್​​ ಮುಂದಿಟ್ಟಿದೆ.

ಮಸಾಲೆದೋಸೆ ಪ್ರಿಯರಿಗೋಸ್ಕರ ಈ ಚಾಲೆಂಜ್​ ನೀಡಲಾಗಿದ್ದು, 10 ಅಡಿ ಉದ್ದದ ಮಸಾಲೆ ದೋಸೆ 40 ನಿಮಿಷಗಳಲ್ಲಿ ತಿಂದು ಮುಗಿಸುವ ವ್ಯಕ್ತಿಗೆ ಇಷ್ಟೊಂದು ಹಣ ಸಿಗಲಿದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

ಈ ದೋಸೆಯ ಬೆಲೆ 1,500 ರೂ. ಆಗಿದ್ದು, ಓರ್ವ ವ್ಯಕ್ತಿ ಮಾತ್ರ 40 ನಿಮಿಷದಲ್ಲಿ ಸಂಪೂರ್ಣವಾಗಿ ತಿಂದು ಮುಗಿಸಬೇಕು ಎಂದು ಹೋಟೆಲ್ ಮಾಲೀಕ ಶೇಖರ್ ಕುಮಾರ್ ತಿಳಿಸಿದ್ದಾರೆ. ಈಗಾಗಲೇ ಸುಮಾರು 25-26 ಗ್ರಾಹಕರು ಈ ಚಾಲೆಂಜ್​ನಲ್ಲಿ ಭಾಗಿಯಾಗಿದ್ದು, ಯಾರೊಬ್ಬರೂ ಕೂಡ ಇಲ್ಲಿಯವರೆಗೆ ಗೆಲುವು ಸಾಧಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ:'2021ರಲ್ಲೇ 3 ಕೋಟಿ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ'.. 'ನನ್ನ ಭಾರತದ ಬಗ್ಗೆ ಚಿಂತೆಯಾಗ್ತಿದೆ': ರಾಹುಲ್​ ಗಾಂಧಿ

ಹೋಟೆಲ್ ಆರಂಭವಾದಾಗ ನಾವು ಸಣ್ಣ ಸಣ್ಣ ದೋಸೆ ತಯಾರಿಸುದ್ದೆವು. ನಂತರ 7-8 ಅಡಿ ಉದ್ದದ ಮಸಾಲೆ ದೋಸೆ ಮಾಡಲು ಆರಂಭಿಸಿದ್ದು, ಇದೀಗ 10 ಅಡಿ ಉದ್ದದ ಮಸಾಲೆ ದೋಸೆ ತಯಾರಿಸುವ ಮೂಲಕ ಈ ವಿಭಿನ್ನ ಚಾಲೆಂಜ್​ ಆರಂಭಿಸಿದ್ದೇವೆ. ಈ ಹೊಸ ಚಾಲೆಂಜ್ ಶುರುವಾರ ಬಳಿಕ ನಮ್ಮ ಹೋಟೆಲ್​ಗೆ ಪ್ರತಿದಿನ ಅನೇಕ ಗ್ರಾಹಕರು ಭೇಟಿ ನೀಡ್ತಿದ್ದು, ಚಾಲೆಂಜ್​​ನಲ್ಲಿ ಭಾಗಿಯಾಗುತ್ತಿದ್ದಾರೆ. ಒಂದು ವೇಳೆ ಈ ಚಾಲೆಂಜ್​​ನಲ್ಲಿ ಅವರು ಫೇಲ್​ ಆದರೆ, ತಮ್ಮ ಸ್ನೇಹಿತರೊಂದಿಗೆ ಅಥವಾ ಕುಟುಂಬದೊಂದಿಗೆ ಸೇರಿಕೊಂಡು ಮಸಾಲೆ ದೋಸೆ ಸವಿಯಬಹುದು ಎಂದು ತಿಳಿಸಿದ್ದಾರೆ.

ಚಾಲೆಂಜ್​ನಲ್ಲಿ ಭಾಗಿಯಾದ ಗ್ರಾಹಕ ಸುರೇಂದ್ರ ಗುಪ್ತಾ ಮಾತನಾಡಿ, ನಾನು ಈ ಹೋಟೆಲ್​ಗೆ ಕಳೆದ 10-12 ವರ್ಷಗಳಿಂದ ಬರುತ್ತಿದ್ದೇವೆ. ಮಸಾಲೆ ದೋಸೆ ತಿನ್ನುವ ಸ್ಪರ್ಧೆಯಲ್ಲಿ ನಾನು ಭಾಗಿಯಾಗಿ ಸೋತಿದ್ದೇನೆ. ಹೀಗಾಗಿ ಕುಟುಂಬದ ಎಲ್ಲ ಸದಸ್ಯರೊಂದಿಗೆ ಸೇರಿ ಉಳಿದ ದೋಸೆ ಸೇವಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details