ಕರ್ನಾಟಕ

karnataka

ETV Bharat / bharat

ದೆಹಲಿ-ತಮಿಳುನಾಡಿನಲ್ಲಿ ಮತ್ತೆ ಮಾಸ್ಕ್​​ ಕಡ್ಡಾಯ: ₹500 ದಂಡ ಎಚ್ಚರಿಕೆ

ಕೋವಿಡ್​ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದ ಬೆನ್ನಲ್ಲೇ ದೆಹಲಿ ಮತ್ತು ತಮಿಳುನಾಡಿನಲ್ಲಿ ಮಾಸ್ಕ್​ ಕಡ್ಡಾಯ ಮಾಡಲಾಗಿದೆ. ಮಾಸ್ಕ್​​​ ಧರಿಸದೇ ಇದ್ದರೆ 500 ರೂ. ದಂಡ ವಿಧಿಸಲಾಗುವುದು ಎಂದು ಎರಡೂ ರಾಜ್ಯಗಳಲ್ಲಿ ಆದೇಶ ಹೊರಡಿಸಲಾಗಿದೆ.

ದೆಹಲಿ-ತಮಿಳುನಾಡಿನಲ್ಲಿ ಮಾಸ್ಕ್​ ಧರಿಸುವಿಕೆ ಕಡ್ಡಾಯ
ದೆಹಲಿ-ತಮಿಳುನಾಡಿನಲ್ಲಿ ಮಾಸ್ಕ್​ ಧರಿಸುವಿಕೆ ಕಡ್ಡಾಯ

By

Published : Apr 22, 2022, 6:56 PM IST

ನವದೆಹಲಿ: ದೇಶದಲ್ಲಿ ಕೋವಿಡ್​ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತಿದ್ದು, ಮತ್ತೆ ಮಾಸ್ಕ್​​ ಕಡ್ಡಾಯದ ಮೊರೆ ಹೋಗಿವೆ. ಶುಕ್ರವಾರದಿಂದ ದೆಹಲಿ ಮತ್ತು ತಮಿಳುನಾಡಿನಲ್ಲಿ ಮಾಸ್ಕ್​​​ ಧರಿಸದಿದ್ದರೆ ದಂಡ ವಿಧಿಸುವ ನಿಯಮ ಜಾರಿಗೆ ಬಂದಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್​ ಸೋಂಕು ಹೆಚ್ಚಳ ಕುರಿತಂತೆ ಲೆಫ್ಟಿನೆಂಟ್​ ಗವರ್ನರ್​​ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯ ನಂತರ ಮಾಸ್ಕ್​​​ ಧರಿಸದವರಿಗೆ 500 ರೂ. ದಂಡ ವಿಧಿಸುವ ಆದೇಶ ಜಾರಿ ಮಾಡಲಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್​​ ಧಾರಣೆ ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಧರಿಸದೇ ಇದ್ದರೆ, ಅದು ಅಪರಾಧವಾಗಲಿದೆ. ಇದಕ್ಕಾಗಿ 500 ರೂ. ದಂಡ ವಿಧಿಸಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಆದೇಶದಲ್ಲಿ ತಿಳಿಸಿದೆ.

ತಮಿಳುನಾಡು ಸರ್ಕಾರ ಕೂಡ ಮಾಸ್ಕ್​​ ಧರಿಸದವರಿಗೆ 500 ರೂ. ದಂಡ ವಿಧಿಸಲು ತೀರ್ಮಾನಿಸಿದೆ. ಕೋವಿಡ್​ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾರ್ಸ್​ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಾಸ್ಕ್​​ ಹಾಕಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

110 ಕೋಟಿ ರೂ. ದಂಡ ವಸೂಲಿ: ತಮಿಳುನಾಡಿನಲ್ಲಿ ಇದುವರೆಗೆ ಮಾಸ್ಕ್​ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 110 ಕೋಟಿ ರೂ.ಗೂ ಅಧಿಕ ದಂಡವನ್ನು ರಾಜ್ಯ ಸರ್ಕಾರ ವಸೂಲಿ ಮಾಡಿದೆ. ಅಂದಾಜು 66 ಲಕ್ಷ ಜನರಿಂದ ಇಷ್ಟೊಂದು ಮೊತ್ತದ ದಂಡ ಸಂಗ್ರಹವಾಗಿದೆ. ಆದರೆ, ಇತ್ತೀಚಿಗೆ ಸೋಂಕಿನ ಪ್ರಮಾಣ ಕಡಿಮೆಯಾದ ಕಾರಣ ಮಾಸ್ಕ್​ ಅಗತ್ಯವಿರಲಿಲ್ಲ. ಈಗ ಮತ್ತೆ ಮಾಸ್ಕ್​​ ಕಡ್ಡಾಯ ಮಾಡಿದ್ದೇವೆ ಎಂದು ಆರೋಗ್ಯ ಇಲಾಖೆಯ ಕಾರ್ಯದರ್ಶಿ ಜೆ.ರಾಧಾಕೃಷ್ಣನ್​ ಮಾಹಿತಿ ನೀಡಿದರು.

ಇದನ್ನೂ ಓದಿ:ನನ್ನ ತೋಳಿಗೆ ಭಾರತದ ಕೋವಿಡ್‌ ಲಸಿಕೆ ಹಾಕಲಾಗಿದೆ, ಭಾರತಕ್ಕೆ ಧನ್ಯವಾದ: ಬ್ರಿಟನ್ ಪ್ರಧಾನಿ

ABOUT THE AUTHOR

...view details