ಕರ್ನಾಟಕ

karnataka

ETV Bharat / bharat

ಲವರ್​ಗೋಸ್ಕರ ಹೆತ್ತ ತಾಯಿ ಕೊಲೆ ಮಾಡಿದ ಮಗಳು.. ಚಾಲಾಕಿ ಪ್ಲಾನ್​ ಹೇಗಿತ್ತು ಗೊತ್ತಾ? - ಆಂಧ್ರಪ್ರದೇಶ ಕ್ರೈಂ ನ್ಯೂಸ್​

ಪ್ರೇಮ ವಿವಾಹಕ್ಕೆ ಪೋಷಕರು ಅಡ್ಡಪಡಿಸಿದ್ದಾರೆಂಬ ಆಕ್ರೋಶದಲ್ಲಿ ಯುವತಿಯೊಬ್ಬಳು ಹೆತ್ತಮ್ಮನ ಕೊಲೆ ಮಾಡಿರುವ ಘಟನೆ ಆಂಧ್ರದಲ್ಲಿ ನಡೆದಿದೆ.

Daughter murder mother
Daughter murder mother

By

Published : May 12, 2021, 9:45 PM IST

ವಿಜಯನಗರಂ(ಆಂಧ್ರಪ್ರದೇಶ): ಪ್ರೇಮಿಗೋಸ್ಕರ ಯುವತಿಯೊಬ್ಬಳು ಹೆತ್ತಮ್ಮನ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆ ಭೋಗಪುರಂದಲ್ಲಿ ನಡೆದಿದೆ.

ಲಕ್ಷ್ಮೀ ಮತ್ತು ಶ್ರೀನಿವಾಸ್​ ರಾವ್​ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಈಗಾಗಲೇ ಕಿರಿಯ ಮಗಳು ತನ್ನ ಗೆಳೆಯನೊಂದಿಗೆ ಮನೆ ಬಿಟ್ಟು ಪರಾರಿಯಾಗಿದ್ದಾಳೆ. ಇದರ ಮಧ್ಯೆ ಹಿರಿಯ ಮಗಳು ರೂಪಶ್ರೀ ಬಿ - ಫಾರ್ಮಸಿ ಓದುತ್ತಿದ್ದು, ಈ ವೇಳೆ ವರುಣ್ ಸಾಯಿ ಎಂಬ ಯುವಕನ ಪರಿಚಯವಾಗಿ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಇಬ್ಬರು ಮದುವೆ ಮಾಡಿಕೊಳ್ಳಲು ನಿರ್ಧರಿಸಿ,ಪೋಷಕರಿಗೆ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ: ಮೋದಿಗೆ ದೀದಿ ಪತ್ರ: ಕೋವಿಡ್​ ಲಸಿಕೆ ಉತ್ಪಾದನೆಗೆ ಭೂಮಿ ನೀಡಲು ಸಿದ್ಧ ಎಂದ ಮಮತಾ

ಆದರೆ, ಕಿರಿಯ ಮಗಳ ಘಟನೆಯಿಂದ ಮನನೊಂದ ಪೋಷಕರು ಪ್ರೇಮ ವಿವಾಹ ಪ್ರಸ್ತಾಪ ತಿರಸ್ಕರಿಸಿದ್ದಾರೆ. ಜತೆಗೆ ರೂಪಶ್ರೀಯನ್ನ ಮನೆಯಲ್ಲಿ ಕೂಡಿ ಹಾಕಿದ್ದಾರೆ. ಈ ವೇಳೆ, ತಾಯಿ ಕೊಲೆ ಮಾಡಲು ನಿರ್ಧರಿಸಿದ್ದಾಳೆ. ತನ್ನ ಪ್ರೀಯಕರನಿಗೆ ಫೋನ್ ಮಾಡಿ ಮಾಹಿತಿ ಪಡೆದುಕೊಂಡಿದ್ದು, ಆಕೆ ಮಲಗಿದ್ದ ವೇಳೆ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

ಈ ವೇಳೆ ತಾಯಿ ಪ್ರಜ್ಞಾಹೀನಳಾಗಿದ್ದಾಳೆಂದು ತಂದೆಗೆ ತಿಳಿಸಿದ್ದಾಳೆ. ತಕ್ಷಣವೇ ಆಕೆಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಪೊಲೀಸರು ಆರಂಭದಲ್ಲಿ ಶಂಕಿತ ಸಾವು ಎಂದು ಪ್ರಕರಣ ದಾಖಲು ಮಾಡಿದ್ದಾರೆ. ಆದರೆ, ಸಾವಿನ ಬಗ್ಗೆ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದರಿಂದ ಮಗಳ ವಿಚಾರಣೆ ನಡೆಸಿದಾಗ ನಿಜಾಂಶ ಹೊರಬಿದ್ದಿದೆ. ಇದೀಗ ವರುಣ್ ಹಾಗೂ ರೂಪಶ್ರೀಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ABOUT THE AUTHOR

...view details