ಕೋಯಿಕ್ಕೋಡ್: ನೀವು ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ನಲ್ಲಿ ಈ ವ್ಯಕ್ತಿ ನೋಡೇ ಇರ್ತೀರ. ಅಷ್ಟರಮಟ್ಟಿಗೆ ಇವರು ಸಾಮಾಜಿಕ ಜಾಲತಾಣವನ್ನು ಆಕ್ರಮಿಸಿಕೊಂಡು ಬಿಟ್ಟಿದ್ದಾರೆ. ಪರಿಣಾಮ ಸಿನಿಮಾ ಶೈಲಿಯಲ್ಲಿ ಇವರ ಜೀವನವೇ ಬದಲಾಗಿ ಬಿಟ್ಟಿದೆ.
ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಮಮ್ಮಿಕ್ಕಾ ಎಂಬುವರು ಈಗ ಎಲ್ಲರ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದಾರೆ. ಅದಕ್ಕೆ ಕಾರಣವಾಗಿದ್ದು ಒಂದು ಫೋಟೋ.
ಹಾಟ್ ಲುಕಿಂಗ್ನಲ್ಲಿ ಸೂಪರ್ ಮಾಡೆಲ್ ಆಗಿ ಪೋಸ್ ನೀಡಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ದಿನಗೂಲಿ ಕಾರ್ಮಿಕನ ಮೇಕ್ ಓವರ್ ಶೂಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೊಡುವಳ್ಳಿಯ ವೆನ್ನಕ್ಕೋಡ್ ಮೂಲದ ಮಮ್ಮಿಕ್ಕ ಅವರು ಜಾಹೀರಾತು ಚಿತ್ರೀಕರಣಕ್ಕೆ ಆಯ್ಕೆಯಾಗಿದ್ದು, ಇದೀಗ ಅವರ ಜೀವನವೇ ಬದಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇವರು ಅಪಾರ ಅಭಿಮಾನಿಗಳನ್ನು ಈ ಮೂಲಕ ಗಳಿಸಿಕೊಂಡಿದ್ದಾರೆ.
ಸೂಪರ್ ಮಾಡೆಲ್ ಆದ ದಿನಗೂಲಿ ಕಾರ್ಮಿಕ ಇದನ್ನೂ ಓದಿ: ಮಂಗಳೂರಿನಲ್ಲಿ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಹಾರುವ ಮೀನು
ಮೇಕ್ ಓವರ್ ಚಿತ್ರೀಕರಣಕ್ಕೆ ಶಫೀಕ್ ವಯೊಲಿನ್ ಮಮ್ಮಿಕ್ಕರನ್ನು ಆಯ್ಕೆ ಮಾಡಿದ್ದರು. ನಾನು ಈ ಹಿಂದೆ ಮಮ್ಮಿಕ್ಕನ ಚಿತ್ರವನ್ನು ತೆಗೆದಿದ್ದೆ. ಅದಕ್ಕೆ ಉತ್ತಮ ಕಾಮೆಂಟ್‌ಗಳನ್ನು ಪಡೆದಿದ್ದೆ.
ಹಾಗಾಗಿ, ಅವರನ್ನು ಜಾಹೀರಾತಿಗೆ ಮಾಡೆಲಿಂಗ್ ಮಾಡಲು ನಿರ್ಧರಿಸಿ, ಚಿತ್ರೀಕರಣದ ತಯಾರಿಗಾಗಿ ಕೆಲವು ತಿಂಗಳುಗಳ ಹಿಂದೆ ಗಡ್ಡ ಮತ್ತು ಕೂದಲನ್ನು ಕತ್ತರಿಸದಂತೆ ಸೂಚಿಸಿದ್ದೆ ಎನ್ನುತ್ತಾರೆ ಶಫೀಕ್.
ಏನೇ ಇರಲಿ ಸುಮ್ಮನೆ ತಾನಾಯ್ತು ತನ್ನ ಕೆಲಸವಾಯ್ತು ಎಂಬಂತೆ ದಿನಗೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ವ್ಯಕ್ತಿಯೋರ್ವ ಇಂದು ಎಲ್ಲರ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದಾನೆ.
ಜೊತೆಗೆ ವಯಸ್ಸು ಎಷ್ಟಾದರೇನು ಸಾಧನೆಗೆ ಎಂಬಂತೆ ಇವರ ಫೋಟೋಗೆ ಕಮೆಂಟ್ಗಳ ಮಹಾಪೂರವೇ ಹರಿದು ಬರುತ್ತಿದೆ. ಇವರ ಜೀವನ ಬದಲಿಸಿದ ಹಾಗೂ ಇಂಥವರನ್ನೂ ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತಂದ ಶಫೀಕ್‌ಗೂ ಈ ಕ್ರೆಡಿಟ್ ಸಲ್ಲಬೇಕಿದೆ.