ಕರ್ನಾಟಕ

karnataka

ETV Bharat / bharat

ಉತ್ತರಾಖಂಡ್​ ಪೊಲೀಸರಿಂದ ಉಡುಪಿ ಮೂಲದ ಕ್ರಿಪ್ಟೋ ಕರೆನ್ಸಿ ವಂಚಕ ಅರೆಸ್ಟ್​..!

ಮ್ಯೂಚುವಲ್ ಫಂಡ್​ಗಳಲ್ಲಿ ಹಣ ತೊಡಗಿಸಿ ಭಾರಿ ಲಾಭದ ಆಸೆ ಹುಟ್ಟಿಸಿ ಖಾತೆಯಲ್ಲಿನ ಹಣ ಖಾಲಿ ಮಾಡುತ್ತಿದ್ದ ಸೈಬರ್ ಕಳ್ಳನನ್ನು ಉತ್ತರಾಖಂಡ ಎಸ್​ಟಿಎಫ್ ಬಂಧಿಸಿದೆ. ಸೈಬರ್ ಖದೀಮ ನಕಲಿ ವೆಬ್‌ಸೈಟ್ ಮೂಲಕ ಹಣ ಪಡೆಯುತ್ತಿದ್ದ. ಕರ್ನಾಟಕದ ಉಡುಪಿ ಮೂಲದ ನಿವಾಸಿ ಮಹಮೀದ್ ಎಂಬ ಸೈಬರ್ ಕಳ್ಳನನ್ನು ಬಂಧಿಸಲಾಗಿದೆ.

Cyber Thug Arrest
ಉಡುಪಿ ಮೂಲದ ನಿವಾಸಿ ಮಹಮೀದ್ ಎಂಬ ಸೈಬರ್ ಕಳ್ಳನ ಬಂಧನ.

By

Published : Feb 11, 2023, 5:42 PM IST

ಡೆಹರಾಡೂನ್(ಉತ್ತರಾಖಂಡ): ಹೆಚ್ಚು ಲಾಭ ಗಳಿಸಲು ನಕಲಿ ವೆಬ್‌ಸೈಟ್‌ನಲ್ಲಿ ಹಣದ ಆಮಿಷಯೊಡ್ಡಿ 1 ಕೋಟಿ ರೂ ವಂಚನೆ ಗ್ಯಾಂಗ್‌ನ ನಾಯಕನನ್ನು ಎಸ್‌ಟಿಎಫ್ ತಂಡವು ಬಂಧಿಸಿದೆ. ಕಿಂಗ್‌ಪಿನ್‌ನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಆರೋಪಿ ವಿರುದ್ಧ ಬೆಂಗಳೂರಿನಲ್ಲಿ ಈ ಹಿಂದೆಯೂ ಸೈಬರ್ ಕ್ರೈಂ ಪ್ರಕರಣ ದಾಖಲಾಗಿತ್ತು.

ಕ್ರಿಪ್ಟೋ ಕರೆನ್ಸಿಯಿಂದ ಕೋಟ್ಯಂತರ ರೂ. ವಂಚನೆ:ಆರೋಪಿಗೆ ಕ್ರಿಮಿನಲ್ ಇತಿಹಾಸವಿದೆ. ಬೆಂಗಳೂರು ಪೊಲೀಸರು ಕೂಡ ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಈ ವಂಚನೆಯ ಆರೋಪಿಗಳಿಂದ ಕ್ರಿಪ್ಟೋ ಕರೆನ್ಸಿ ಕನಿಷ್ಠ ಎಂದರೂ 10 ಕೋಟಿ ರೂಪಾಯಿ ಭಾರತದಿಂದ ಹೊರಕ್ಕೆ ರವಾನೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಮೊಬೈಲ್ ಸಂಖ್ಯೆ +447878602954 ಮತ್ತು ಇತರ ಸಂಖ್ಯೆಗಳೊಂದಿಗೆ ಸಂತ್ರಸ್ತೆಯನ್ನು ವಾಟ್​ಆ್ಯಪ್ ಮೂಲಕ ಸಂಪರ್ಕಿಸಿ, ಅಪರಿಚಿತ ವ್ಯಕ್ತಿ ತನ್ನನ್ನು ಲಿಸಾ ಎಂದು ಕರೆದುಕೊಂಡು https://in createwealth2.com ವೆಬ್‌ಸೈಟ್‌ನಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹಣವನ್ನು ಜಮಾ ಮಾಡಿದ್ದಾರೆ ಎಂದು ಉತ್ತರಾಖಂಡ್​ ಸೈಬರ್ ಕ್ರೈಂ ಪೊಲೀಸ್ ಠಾಣೆ ದೂರು ಸ್ವೀಕರಿಸಿದೆ. ಹೂಡಿಕೆ ಮಾಡಿ ಲಾಭ ಗಳಿಸುವ ದುರಾಸೆಯಿಂದ 1 ಕೋಟಿ ರೂ. ವಂಚಿಸಲಾಗಿದೆ.

ಬೆಂಗಳೂರಿನಲ್ಲಿ ಸೈಬರ್ ಖದೀಮ ಪತ್ತೆ:ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಂಡವನ್ನು ರಚಿಸಿ ಘಟನೆಗೆ ಬಳಸಲಾದ ಮೊಬೈಲ್ ಸಂಖ್ಯೆ ಮತ್ತು ಸಂತ್ರಸ್ತ ಮಹಿಳೆಯಿಂದ ಆರೋಪಿಗಳು ಪಡೆದ ಮೊತ್ತದ ಬಗ್ಗೆ ಪೊಲೀಸರು ಮಾಹಿತಿ ಪಡೆದರು. ದೂರುದಾರರಿಂದ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುವ ಹೆಸರಿನಲ್ಲಿ ಸಂತ್ರಸ್ತೆಯನ್ನು ಆರೋಪಿಗಳು ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಮೊಬೈಲ್ ಸಂಖ್ಯೆ ಮತ್ತು ಖಾತೆಗಳ ಮಾಹಿತಿಯಿಂದ ಆರೋಪಿಗಳಿಗೆ ಉತ್ತರಾಖಂಡದಿಂದ ಕರ್ನಾಟಕದ ಜತೆ ಸಂಪರ್ಕವಿರುವುದು ಪತ್ತೆಯಾಗಿದೆ.

ಸೈಬರ್ ಕಳ್ಳನ ಬಂಧನ: ಇದಾದ ಬಳಿಕ ತಂಡವನ್ನು ಆಯಾ ಸ್ಥಳಗಳಿಗೆ ಕಳುಹಿಸಲಾಗಿದೆ. ಸಂತ್ರಸ್ತೆ ಆರೋಪಿಗೆ ನೀಡಿರುವ ಖಾತೆ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಕುರಿತು ಮಾಹಿತಿ ಪಡೆದ ಪೊಲೀಸ್ ತಂಡ, ನಕಲಿ ಐಡಿಯಲ್ಲಿ ತೆರೆದಿರುವ ಬ್ಯಾಂಕ್ ಖಾತೆಗಳಲ್ಲಿ ವಂಚನೆಯಿಂದ ಪಡೆದ ಮೊತ್ತವನ್ನು ಜಮಾ ಮಾಡಲಾಗಿದೆ. ಖಾತೆದಾರರ ಮಾಹಿತಿಯನ್ನು ಸ್ವೀಕರಿಸಲಾಗಿದೆ. ಖಾತೆದಾರನ ಕುರಿತು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿರುವಾಗ, ಆರೋಪಿಗಳಲ್ಲಿ ಒಬ್ಬನಾದ ಕರ್ನಾಟಕದ ಉಡುಪಿಯ ನಿವಾಸಿ ಮಹ್ಮೀದ್ ಷರೀಫ್ ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಆರೋಪಿಯಿಂದ 1 ಲ್ಯಾಪ್‌ಟಾಪ್, 3 ಮೊಬೈಲ್ ಫೋನ್, 11 ಡೆಬಿಟ್ ಕಾರ್ಡ್, 3 ಕ್ರೆಡಿಟ್ ಕಾರ್ಡ್, ಪಾಸ್​ಬುಕ್ ಮತ್ತು ವಿವಿಧ ಬ್ಯಾಂಕ್‌ಗಳ ಚೆಕ್ ಬುಕ್ ಮತ್ತು ಆಧಾರ್, ಪ್ಯಾನ್, ಡ್ರೈವಿಂಗ್ ಲೈಸೆನ್ಸ್, ಟ್ರಾವೆಲ್ ಕಾರ್ಡ್‌ಗಳನ್ನು ತಂಡ ವಶಪಡಿಸಿಕೊಂಡಿದೆ.

ಮಲೇಷ್ಯಾದಿಂದ ವಾಟ್​ಆ್ಯಪ್ ಸಂದೇಶ:ಆರೋಪಿಗಳು ಮಲೇಷ್ಯಾದಿಂದ ಸಂತ್ರಸ್ತೆಯ ಮೊಬೈಲ್ ಸಂಖ್ಯೆಗೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶವನ್ನು ಕಳುಹಿಸಿದ್ದಾರೆ. ಉತ್ತಮ ಆದಾಯವನ್ನು ಪಡೆಯಲು https://in createwealth2.com ನಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಸಲಹೆ ನೀಡಿದರು. ಆರೋಪಿಗಳು ಮೊದಲಿಗೆ ಸಂತ್ರಸ್ತೆಯನ್ನು ಸೆಳೆಯಲು ಪೇಟಿಎಂ ಮೂಲಕ 10,000 ರೂ. ಹಾಕಿದ್ದಾರೆ. ಈ ಮೂಲಕ ಆರೋಪಿಗಳು ಭಾರತೀಯ ಬ್ಯಾಂಕ್‌ಗಳನ್ನು ಬಳಸುತ್ತಿದ್ದರು ಎಂಬುದು ತಿಳಿದು ಬಂದಿದೆ.

ಭಾರಿ ಲಾಭದ ಆಮಿಷ:ಇದಾದ ನಂತರ ಕ್ರಮೇಣ ಸಂತ್ರಸ್ತರಿಗೆ ಸಮಂಜಸವಾದ ಆದಾಯ ಬರಲಾರಂಭಿಸಿದಾಗ ಅವರು, ಭಾರತೀಯ ಬ್ಯಾಂಕ್‌ಗಳಲ್ಲಿ ಹಣ ತೊಡಗಿಸಿ ತಮ್ಮ ಮೊತ್ತವನ್ನು ಸುಮಾರು 30 ಲಕ್ಷ ರೂ.ಗೆ ಹೆಚ್ಚಿಸಿಕೊಂಡರು. ಅದೇ ರೀತಿ ಸಂತ್ರಸ್ತೆಯನ್ನು ಆರೋಪಿಗಳು ಭಾರತೀಯ ಬ್ಯಾಂಕ್​ಗಳ ಮೂಲಕ ಸುಮಾರು 1 ಕೋಟಿ ರೂ.ವರೆಗೆ ವಂಚಿಸಿದ್ದಾರೆ. ಈ ಜನರು ವಿವಿಧ ಬ್ಯಾಂಕ್ ಖಾತೆಗಳಲ್ಲಿ ವಂಚನೆ ಮಾಡಿದ ಹಣವನ್ನೇ ಬಳಸುತ್ತಿದ್ದರು. ನಕಲಿ ಸಿಮ್, ಗುರುತಿನ ಚೀಟಿಗಳನ್ನು ಆರೋಪಿಗಳು ಕೆಲಸಕ್ಕೆ ಬಳಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಗೂಗಲ್​​ ಸಹಾಯದಿಂದ ರೋಗಿಗಳಿಗೆ ಔಷಧ ನೀಡುತ್ತಿದ್ದ ನಕಲಿ ವೈದ್ಯನ ಬಂಧನ.. ಇತಿಹಾಸ ಕೇಳಿದರೆ ಬೆಚ್ಚಿ ಬೀಳೋದು ಗ್ಯಾರಂಟಿ!

ABOUT THE AUTHOR

...view details