ಕರ್ನಾಟಕ

karnataka

ETV Bharat / bharat

ಟೈಲರ್​ ಹತ್ಯೆ ಪ್ರಕರಣ.. ಉದಯಪುರದಲ್ಲಿ ಕರ್ಫ್ಯೂ ಸಡಿಲಿಕೆ - ಉದಯಪುರದಲ್ಲಿ ಟೈಲರ್​ ಹತ್ಯೆ ಮಾಡಿದ್ದ ಆರೋಪಿಗಳ ಬಂಧನ

ಉದಯಪುರದಲ್ಲಿ ಟೈಲರ್‌ನ ಶಿರಚ್ಛೇದನದ ನಂತರ ನಗರದಲ್ಲಿ ವಿಧಿಸಲಾಗಿದ್ದ ಕರ್ಫ್ಯೂ ಸಡಿಲಿಸಲಾಗಿದೆ.

ಕರ್ಫ್ಯೂ ಸಡಿಲ
ಕರ್ಫ್ಯೂ ಸಡಿಲ

By

Published : Jul 3, 2022, 7:03 PM IST

ಉದಯಪುರ (ರಾಜಸ್ಥಾನ): ಈ ವಾರದ ಆರಂಭದಲ್ಲಿ ಇಬ್ಬರು ವ್ಯಕ್ತಿಗಳು ಟೈಲರ್‌ನನ್ನು ಹತ್ಯೆಗೈದ ನಂತರ ಉದಯಪುರದಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಈಗ ಪರಿಸ್ಥಿತಿ ಸುಧಾರಿಸುತ್ತಿದ್ದು, ಇಂದಿನಿಂದ ಕರ್ಫ್ಯೂ ಸಡಿಲಿಸಲಾಗಿದೆ.

ಹಿಂಸಾಚಾರದ ಘಟನೆಗಳ ನಂತರ ಉದಯಪುರದ ಏಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ನಗರದಲ್ಲಿ ಪರಿಸ್ಥಿತಿ ಸಹಜವಾಗುತ್ತಿದ್ದು, ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಕರ್ಫ್ಯೂ ಸಡಿಲಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರುಕಟ್ಟೆಗಳು ತೆರೆದು ದಿನನಿತ್ಯದ ಚಟುವಟಿಕೆಗಳು ಪುನಾರಂಭಗೊಂಡಿವೆ. ಈ ಮೂಲಕ ನಗರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಸ್ಥಳೀಯ ಜನರಿಂದ ಶಾಂತಿ ಕಾಪಾಡಲಾಗಿದ್ದು, ಕರ್ಫ್ಯೂ ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ಸ್ಥಳೀಯ ನಿವಾಸಿಯೊಬ್ಬರು ಆಗ್ರಹ ಮಾಡಿದ್ದಾರೆ.

ಟೈಲರ್​ನ್ನು ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳನ್ನು ರಾಜ್‌ಸಮಂದ್‌ನಲ್ಲಿ ಬಂಧಿಸಲಾಗಿತ್ತು. ಈ ಕೊಲೆಯ ಸಂಚಿನಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳನ್ನು ಸಹ ಬಂಧಿಸಲಾಗಿದ್ದು, ಅವರು ಎನ್‌ಐಎ ವಶದಲ್ಲಿದ್ದಾರೆ.

ಇದನ್ನೂ ಓದಿ: ಸೋನು ಸೂದ್​ ನೆರವಿನಿಂದ ಮೂಡಿತು ಹೊಸ ಬೆಳಕು.. ಬಿಹಾರದ ಬಾಲಕಿ ಈಗ ಎಲ್ಲರಂತೆ ಕಿಲ ಕಿಲ

ABOUT THE AUTHOR

...view details