ಹೈದರಾಬಾದ್: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಎನ್ಸಿಬಿ ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಎನ್ಸಿಬಿ ಪರ ಎಎಸ್ಜಿ ಅನಿಲ್ ಮತ್ತು ಆರ್ಯನ್ ಪರ ವಕೀಲ ಸತೀಶ್ ಮಾನಶಿಂಧೆ ವಾದ ಮಂಡಿಸುತ್ತಿದ್ದಾರೆ.
ಅಕ್ಟೋಬರ್ 11ರವರೆಗೆ ಎನ್ಸಿಬಿ ಕಸ್ಟಡಿಗೆ ಒಪ್ಪಿಸಿ:
ಸಾಮಾಜದಲ್ಲಿ ಮಾದಕ ವಸ್ತು ಸೇವನೆ ಎಂಬುದು ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ವಿವಿಐಪಿಗಳ ಮಕ್ಕಳು ರೋಲ್ ಮಾಡೆಲ್ಗಳಾಗುತ್ತಿದ್ದಾರೆ. ಮೊದಲು ನಮ್ಮ ಕಾರ್ಯಾಚರಣೆ ಕುರಿತು ಇವರುಗಳು ಅರ್ಥಮಾಡಿಕೊಳ್ಳಬೇಕು. ಮಾದಕ ವಸ್ತು ಸೇವನೆ ತಡೆಯುವುದು ನಮ್ಮ ಗುರಿ, ಹಾಗೂ ಡ್ರಗ್ಸ್ ಪೆಡ್ಲರ್ಗಳ ಬಂಧನ ನಮ್ಮ ಗುರಿ. ಅದಕ್ಕಾಗಿ ಅಕ್ಟೋಬರ್ 11ರವರೆಗೆ ಆರೋಪಿಗಳನ್ನು ಕಸ್ಟಡಿಗೆ ನೀಡಬೆಕು ಎಂದು ಎನ್ಸಿಬಿ ಪರ ವಕೀಲು ವಾದ ಮಂಡಿಸಿದರು.
ಆರ್ಯನ್ ಬಳಿ ಯಾವುದೇ ಮಾದಕ ವಸ್ತು ಇರಲಿಲ್ಲ: ವಕೀಲರ ವಾದ
ಎನ್ಸಿಬಿ ವಕೀಲರ ವಾದವನ್ನು ಅಲ್ಲಗಳೆದಿರುವ ಆರ್ಯನ್ ಪರ ವಕೀಲರು, ಶಾರೂಖ್ ಪುತ್ರ ಯಾವುದೇ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿಲ್ಲ. ಅವರ ಸ್ನೇಹಿತನಿಂದ 6ಗ್ರಾಂ ಚರಸ್ ವಶಕ್ಕೆ ಪಡೆಯಲಾಗಿದೆ. ಶಿಪ್ನಲ್ಲಿ ಹೋಗಲು ಆರ್ಯನ್ ಒಂದು ಪೈಸೆ ಹಣವನ್ನೂ ನೀಡಿಲ್ಲ. ಬೇಕಿದ್ದರೆ ಆರ್ಯನ್ ವಾಟ್ಸ್ಆ್ಯಪ್ ಚಾಟ್ ಪರಿಶೀಲಿಸಬಹುದು ಎಂದು ವಕೀಲ ಸತೀಶ್ ಮಾನಶಿಂಧೆ ವಾದ ಮಂಡಿಸಿದರು.
ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆ - 1985ರ (ಎನ್ಡಿಪಿಎಸ್ ಕಾಯಿದೆ) ವಿವಿಧ ಸೆಕ್ಷನ್ಗಳ ಅಡಿ ನಿನ್ನೆ ಬಂಧಿಸಲಾಗಿತ್ತು. ಖಾನ್ ಮತ್ತು ಇತರ 7 ಮಂದಿಯನ್ನು ಮಾದಕ ದ್ರವ್ಯ ನಿಯಂತ್ರಣ ದಳ (ಎನ್ಸಿಬಿ) ವಶಕ್ಕೆ ಪಡೆದು ಇಂದು ಕೋರ್ಟ್ ಮುಂದೆ ಹಾಜರು ಪಡಿಸಿದ್ದು ಹೆಚ್ಚಿನ ವಿಚಾರಣೆಗೆ ಎನ್ಸಿಬಿ ವಶಕ್ಕೆ ನೀಡುವಂತೆ ನ್ಯಾಯಾಲಯವನ್ನು ಕೋರಿದೆ.
ಈ ಬಗ್ಗೆ ನಿನ್ನೆ, ಮುಂಬೈ ನ್ಯಾಯಾಲಯ ಅಕ್ಟೋಬರ್ 4ರವರೆಗೆ (ಸೋಮವಾರ) ಆರೋಪಿಗಳನ್ನು ಎನ್ಸಿಬಿ ವಶಕ್ಕೆ ನೀಡಿತ್ತು. ಕೋರ್ಟ್ನ ಆದೇಶದಂತೆ ಇವತ್ತು ಮತ್ತೆ ಆರೋಪಿಗಳನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.