ಥಾಣೆ(ಮಹಾರಾಷ್ಟ್ರ): ಪೊಲೀಸ್ ದಾಖಲೆಗಳಲ್ಲಿ ಮಂಕಿಮ್ಯಾನ್ ಎಂದೇ ಹೆಸರುವಾಸಿಯಾಗಿರುವ ದರೋಡೆಕೋರ ಜಮಿಲ್ ಅಲಿಯಾಸ್ ತಕ್ಲಾ ಖುರೇಷಿಯನ್ನು ಬಂಧಿಸಲು ಬಂದಾಗ ಆತ ನಾಲ್ಕನೇ ಮಹಡಿಯ ಕಿಟಕಿಯಿಂದ ಹಾರಿ ಮೃತಪಟ್ಟಿದ್ದಾನೆ. ಇದರಿಂದ ರೊಚ್ಚಿಗೆದ್ದ ಆತನ ಸಂಬಂಧಿಕರು ಪೊಲೀಸರಿಗೇ ಥಳಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಭಿವಾಂಡಿ ನಗರದ ನಿಜಾಂಪುರ ಕಸಾಯಿ ವಾಡಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣವೊಂದರಲ್ಲಿ ಜಮೀಲ್ನನ್ನು ಬಂಧಿಸಲು ಗುಜರಾತ್ ಪೊಲೀಸರು ಹಾಗೂ ಭಿವಾಂಡಿ ಅಪರಾಧ ವಿಭಾಗದ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಮಂಕಿಮ್ಯಾನ್ ಕಟ್ಟಡವೊಂದರ ನಾಲ್ಕನೇ ಮಹಡಿಯ ಕಿಟಕಿಯಿಂದ ಕೆಳಗೆ ಹಾರಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.