ಕರ್ನಾಟಕ

karnataka

ETV Bharat / bharat

Double Murder: ಇಬ್ಬರು ವೃದ್ಧ ವ್ಯಕ್ತಿಗಳನ್ನು ಹೊಡೆದು ಕೊಂದ ಮಾನಸಿಕ ಅಸ್ವಸ್ಥ; ಹೆದ್ದಾರಿಯಲ್ಲಿ ಶವ ಎಳೆದೊಯ್ದು ಕ್ರೌರ್ಯ! - ಮಾನಸಿಕ ಅಸ್ವಸ್ಥನಿಂದ ಜೋಡಿ ಕೊಲೆ

Double Murder: ಬಿಹಾರದ ಬಾಗಲ್ಪುರ ಜಿಲ್ಲೆಯಲ್ಲಿ ಮಾನಸಿಕ ಅಸ್ವಸ್ಥನೋರ್ವ ನಡುರಸ್ತೆಯಲ್ಲೇ ವೃದ್ಧ ಮತ್ತು ವೃದ್ಧೆಯನ್ನು ಹೊಡೆದು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

crime: 'Mentally deranged' youth kills two elderly persons in Bihar's Bhagalpur
ಇಬ್ಬರ ವೃದ್ಧರ ಹೊಡೆದು ಕೊಂದ ಮಾನಸಿಕ ಅಸ್ವಸ್ಥ: ಹೆದ್ದಾರಿಯಲ್ಲಿ ಶವ ಎಳೆದೊಯ್ದ ಹಂತಕ

By

Published : Aug 17, 2023, 9:32 PM IST

ಬಾಗಲ್ಪುರ (ಬಿಹಾರ): ಮಾನಸಿಕ ಅಸ್ವಸ್ಥನೋರ್ವ ಇಬ್ಬರು ವೃದ್ಧರನ್ನು ಥಳಿಸಿ ಕೊಲೆಗೈದ ಘಟನೆ ಬಿಹಾರದ ಬಾಗಲ್ಪುರ ಜಿಲ್ಲೆಯಲ್ಲಿ ಬುಧವಾರ ನಡೆಯಿತು. ಒಬ್ಬರ ಮೃತದೇಹವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ 500 ಮೀಟರ್‌ ದೂರ ಎಳೆದೊಯ್ದಿದ್ದು, ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಘಟನೆ ಜನತೆಯನ್ನು ಬೆಚ್ಚಿಬೀಳಿಸಿದೆ.

ಮೊಹಮ್ಮದ್ ಆಜಾದ್ ಎಂಬಾತ ಜೋಡಿ ಕೊಲೆ ಮಾಡಿದ್ದಾನೆ. ಕೈಗಾರಿಕಾ ಪ್ರದೇಶದ ಪೊಲೀಸ್ ಠಾಣೆ ವ್ಯಾಪ್ತಿಯ ರಾಣಿ ತಾಲಾಬ್ ಪ್ರದೇಶದಲ್ಲಿ ಆಗಸ್ಟ್​ 15ರ ಸ್ವಾತಂತ್ರ್ಯ ದಿನ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮತ್ತು ವೃದ್ಧೆಯ ಮೇಲೆ ಇಟ್ಟಿಗೆ, ಕಬ್ಬಿಣದ ರಾಡ್ ಮತ್ತು ಸರಪಳಿಯಿಂದ ಮನಸೋ ಇಚ್ಛೆ ದಾಳಿ ಮಾಡಿದ್ದಾನೆ.

ಇದನ್ನೂ ಓದಿ:Murder: ಅಘೋರಿ ಪೂಜೆಯಲ್ಲಿ ಹಣದ ಮಳೆ ಸುರಿಸುವುದಾಗಿ ಹೇಳಿ ವಂಚನೆ; ಅಮರಾವತಿಯಲ್ಲಿ ಮಾಂತ್ರಿಕನ ಹತ್ಯೆ

ಇಬ್ಬರ ಮೇಲೆ ಸುಮಾರು ಅರ್ಧ ಗಂಟೆಯಷ್ಟು ಕಾಲ ನಿರಂತರವಾಗಿ ಆರೋಪಿ ಹಲ್ಲೆ ಮಾಡಿದ್ದಾನೆ. ಇದನ್ನು ದಾರಿಹೋಕರು ಕಣ್ಣಾರೆ ಕಂಡರೂ ಮೂಕಪ್ರೇಕ್ಷಕರಂತೆ ನಿಂತಿದ್ದರು. ವೃದ್ಧ ಸ್ಥಳದಲ್ಲೇ ಮೃತಪಟ್ಟರೆ, ಮಹಿಳೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಮೃತರ ಗುರುತು ಸದ್ಯಕ್ಕೆ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹೆದ್ದಾರಿಯಲ್ಲಿ ಶವ ಎಳೆದೊಯ್ದ ಹಂತಕ: ಅಮಾನುಷವಾಗಿ ದಾಳಿ ಮಾಡಿದ ಆರೋಪಿಯು ಒಬ್ಬರ ಮೃತದೇಹವನ್ನು ರಾಷ್ಟ್ರೀಯ ಹೆದ್ದಾರಿ 80ರಲ್ಲಿ ಎಳೆದುಕೊಂಡು ಬಂದಿದ್ದಾನೆ. ಘಟನೆಯ ಎರಡು ದಿನಗಳ ನಂತರ ದೃಶ್ಯಾವಳಿಗಳು ಮುನ್ನೆಲೆಗೆ ಬಂದಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್​ ಆಗಿದೆ. ಮೃತದೇಹವನ್ನು ರಸ್ತೆಯುದ್ದಕ್ಕೂ ಎಳೆದುಕೊಂಡು ಹೋಗುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

ಪರಾರಿಯಾಗಿ ಮತ್ತೆ ಸ್ಥಳಕ್ಕೆ ಬಂದ ಆರೋಪಿ: ಹೆದ್ದಾರಿಯಲ್ಲಿ ಸುಮಾರು 500 ಮೀಟರ್‌ವರೆಗೆ ಶವ ಎಳೆದುಕೊಂಡು ಬಂದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಆದರೆ, ಸ್ವಲ್ಪ ಸಮಯದ ನಂತರ ಮತ್ತೆ ಘಟನಾ ಸ್ಥಳಕ್ಕೆ ಬಂದು ತನಗೆ ಏನೋ ಗೊತ್ತೇ ಇಲ್ಲ ಎಂಬಂತೆ ಬಂದುನಿಂತಿದ್ದ. ಅಲ್ಲದೇ, ಜನರೊಂದಿಗೆ ಮಾತನಾಡತೊಡಗಿದ್ದ. ಆಗ ಸ್ಥಳೀಯರು ಆರೋಪಿಯನ್ನು ಹಿಡಿದು ತೀವ್ರವಾಗಿ ಥಳಿಸಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ:ಜೋಡಿ ಕೊಲೆ ಆರೋಪಿ ಮೊಹಮ್ಮದ್ ಆಜಾದ್ ಫತೇಪುರ ಗ್ರಾಮದ ನಿವಾಸಿ ಎನ್ನಲಾಗಿದೆ. ಮಾನಸಿಕ ಅಸ್ವಸ್ಥನಾಗಿರುವ ಕಾರಣಕ್ಕೆ ಈತನನ್ನು ಹಲವು ದಿನಗಳಿಂದ ಮನೆಯವರು ಕಟ್ಟಿ ಹಾಕಿದ್ದರು. ಆದರೆ, ಮೂರು ದಿನಗಳ ಹಿಂದೆಯಷ್ಟೇ ಮನೆಯಿಂದ ತಪ್ಪಿಕೊಂಡು ಓಡಿ ಬಂದಿರುವ ಮಾಹಿತಿ ಇದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:Bengaluru crime: ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ; ಗಂಡನಿಂದ ಗಾರೆ ಮೇಸ್ತ್ರಿ ಕೊಲೆ

ABOUT THE AUTHOR

...view details