ರಾಜ್‌ಕೋಟ್ (ಗುಜರಾತ್):ಬಾಂಗ್ಲಾದೇಶದ ಹ್ಯಾಂಡ್ಲರ್‌ಗಾಗಿ ಕೆಲಸ ಮಾಡುತ್ತಿದ್ದ ಹಾಗೂ ಅಲ್ಖೈದಾ ನಂಟು ಹೊಂದಿರುವ ಆರೋಪದ ಮೇಲೆ ರಾಜ್ಕೋಟ್ನಲ್ಲಿ ಮೂವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ. ಈ ಆರೋಪಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆಗೆ ಇತರರನ್ನು ನೇಮಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರು.
ಶುಕ್ರ ಅಲಿ, ಶೈಫ್ ನವಾಜ್ ಮತ್ತು ಅಮನ್ ಮಲಿಕ್ ಎಂಬುವವರೇ ಬಂಧಿತರು ಎಂದು ಗುರುತಿಸಲಾಗಿದೆ. ಈ ಮೂವರು ಪಶ್ಚಿಮ ಬಂಗಾಳ ಮೂಲದವರಾಗಿದ್ದು, ರಾಜ್‌ಕೋಟ್‌ನ ಚಿನ್ನದ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ಚಟುವಟಿಕೆಗಳ ಬಗ್ಗೆ ಎಟಿಎಸ್ ತಂಡಕ್ಕೆ ಸುಳಿವು ಸಿಕ್ಕಿದ್ದರಿಂದ ಕಳೆದ ಮೂರ್ನಾಲ್ಕು ದಿನಗಳಿಂದ ಶಂಕಿತರ ಮೇಲೆ ತೀವ್ರ ನಿಗಾ ಇರಿಸಲಾಗಿತ್ತು. ಸೋಮವಾರ ರಾತ್ರಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಎಟಿಎಸ್ ಪೊಲೀಸ್ ವರಿಷ್ಠಾಧಿಕಾರಿ ಓಂಪ್ರಕಾಶ್ ಜಾಟ್ ತಿಳಿಸಿದ್ದಾರೆ.
ಈ ಆರೋಪಿಗಳಿಂದ ನಾಡ ಪಿಸ್ತೂಲ್, ಕಾರ್ಟ್ರಿಡ್ಜ್‌ಗಳು, ಮೂಲಭೂತವಾದದ ಸಾಹಿತ್ಯ ಪುಸ್ತಕಗಳು, ವಿಡಿಯೋಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಾಂಗ್ಲಾದೇಶ ಮೂಲದ ತಮ್ಮ ಹ್ಯಾಂಡ್ಲರ್‌ನೊಂದಿಗೆ ಸಂಪರ್ಕದಲ್ಲಿರಲು ಹೆಚ್ಚು ಗೂಢಲಿಪಿ ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರು. ಶೈಫ್ ನವಾಜ್ ಕಳೆದ ಎರಡು ವರ್ಷಗಳಿಂದ ರಾಜ್‌ಕೋಟ್‌ನಲ್ಲಿದ್ದರೆ, ಉಳಿದ ಇಬ್ಬರು ಕಳೆದ ಏಳೆಂಟು ತಿಂಗಳಿಂದ ಇಲ್ಲಿ ನೆಲೆಸಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:Fake ADGP: ಕ್ರಿಕೆಟಿಗ ರಿಷಬ್ ಪಂತ್, ಟ್ರಾವೆಲ್ ಏಜೆಂಟ್ಗೆ ವಂಚನೆ: ನಕಲಿ ಎಡಿಜಿಪಿ ಅರೆಸ್ಟ್
ಶುಕ್ರ ಅಲಿ, ಶೈಫ್ ನವಾಜ್ ಇಬ್ಬರೂ ಬರ್ಧಮಾನ್ ಜಿಲ್ಲೆಯವರಾಗಿದ್ದರೆ, ಅಮನ್ ಮಲಿಕ್ ಹೂಗ್ಲಿ ಜಿಲ್ಲೆಯವನಾಗಿದ್ದಾನೆ. ಬಾಂಗ್ಲಾದೇಶದ ಅಲ್ ಖೈದಾ ಮುಖ್ಯಸ್ಥರಾಗಿದ್ದ ವಿದೇಶಿ ಹ್ಯಾಂಡ್ಲರ್‌ನೊಂದಿಗೆ ಸಂಪರ್ಕದಲ್ಲಿರಲು ಮಲಿಕ್ ಕಳೆದ ಒಂದು ವರ್ಷದಿಂದ ಟೆಲಿಗ್ರಾಮ್ ಅಪ್ಲಿಕೇಶನ್ ಬಳಸುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಎಟಿಎಸ್ ಎಸ್ಪಿ ಜಾಟ್ ವಿವರಿಸಿದ್ದಾರೆ.
ಭಯೋತ್ಪಾದಕ ಸಂಘಟನೆಗೆ ಸೇರಲು ಇತರರನ್ನು ಪ್ರೇರೇಪಿಸುವ ಕಾರ್ಯವನ್ನು ಮಲಿಕ್‌ಗೆ ವಹಿಸಲಾಗಿತ್ತು. ಮೂಲಭೂತವಾದದ ಸಾಹಿತ್ಯ, ವೀಡಿಯೊಗಳು ಮತ್ತು ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ತರಬೇತಿ ಪಡೆಯಲು ಎರಡು ಅಪ್ಲಿಕೇಶನ್‌ಗಳನ್ನು ಬಳಕೆ ಮಾಡುತ್ತಿದ್ದ. ಬಾಂಗ್ಲಾದೇಶದ ಹ್ಯಾಂಡ್ಲರ್ ಜಿಹಾದ್ ಮತ್ತು ಹಿಜ್ರತ್ ಕಾರಣಕ್ಕಾಗಿ ಮಲಿಕ್ನನ್ನು ಪ್ರೇರೇಪಿಸಲಾಗಿತ್ತು. ಈತ ಬಳಿ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಶುಕ್ರ ಅಲಿ ಮತ್ತು ಶೈಫ್ ನವಾಜ್ ಸಹ ಮಲಿಕ್ನ ಸಂಪರ್ಕದಲ್ಲಿದ್ದು, ಇವರು ಕೂಡ ಅದೇ ಮೂಲಭೂತವಾದಿ ಮನಸ್ಥಿತಿಯನ್ನು ಹಂಚಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಮೂವರ ಮೊಬೈಲ್ ಫೋನ್‌ಗಳಲ್ಲೂ ವಿಡಿಯೋಗಳು, ಫೋಟೋಗಳು ಮತ್ತು ಮೂಲಭೂತ ಸಾಹಿತ್ಯಗಳು ಕಂಡುಬಂದಿವೆ. ಈ ವಸ್ತುಗಳನ್ನು ಸ್ವೀಕರಿಸಲು ನಿಖರವಾದ ಉದ್ದೇಶ ಮತ್ತು ಅಳಿಸಲಾದ ಡೇಟಾವನ್ನು ಫೋರೆನ್ಸಿಕ್ ವಿಶ್ಲೇಷಣೆಯ ಮೂಲಕ ತನಿಖೆ ಮಾಡಲಾಗುತ್ತಿದೆ. ಜೊತೆಗೆ ಹಣಕಾಸಿನ ವಹಿವಾಟುಗಳ ಬಗ್ಗೆಯೂ ತನಿಖೆ ಮಾಡಲಾಗುತ್ತದೆ. ಈ ಮೂವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 121ಎ (ಅಪರಾಧ ಬಲದ ಮೂಲಕ ಅಥವಾ ಅಪರಾಧ ಬಲದ ಪ್ರದರ್ಶನ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಎಟಿಎಸ್ ಎಸ್ಪಿ ಜಾಟ್ ಹೇಳಿದ್ದಾರೆ.
ಇದನ್ನೂ ಓದಿ:ಭಯೋತ್ಪಾದನೆ ಗುಂಪುಗಳಿಗೆ ಯುವಕರ ಸೇರ್ಪಡೆ: ಪುಲ್ವಾಮಾದ ಹಲವು ಕಡೆಗಳಲ್ಲಿ ಎನ್ಐಎ ದಾಳಿ, ಶೋಧ