ಮೋತಿಹಾರಿ(ಬಿಹಾರ) ಪೂರ್ವ ಚಂಪಾರಣ್ ಜಿಲ್ಲೆಯ ಜರೋಖರ್ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ತಂಡದ ಮೇಲೆ ಗ್ರಾಮಸ್ಥರು ದಾಳಿ ಮಾಡಿ ತೀವ್ರವಾಗಿ ಹಲ್ಲೆ ಮಾಡಿದ್ದು, ಇದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗೃಹರಕ್ಷಕ ದಳದ ಒಬ್ಬ ಯೋಧ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಜರೋಖರ್ ಪೊಲೀಸ್ ಠಾಣೆಯಿಂದ ಕೇವಲ 500 ಮೀಟರ್ ದೂರದಲ್ಲಿ ಇರುವ ಪ್ರದೇಶದಲ್ಲಿ ಅಬಕಾರಿ ಪೊಲೀಸರು ಮದ್ಯ ಸೇವಿಸುವವರನ್ನು ಪರಿಶೀಲಿಸುತ್ತಿದ್ದರು. ಈ ವೇಳೆ, ಬ್ರೀತ್ ಅನಲೈಸರ್ ಪರೀಕ್ಷೆಯಲ್ಲಿ ವ್ಯಕ್ತಿಯೊಬ್ಬನು ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಬಳಿಕ ಆತನು ಗಲಾಟೆ ಶುರು ಮಾಡಿದ್ದಾನೆ. ಈ ವೇಳೆ, ಒಬ್ಬರಿಗೊಬ್ಬರು ಸೇರಿ ಅಬಕಾರಿ ಅಧಿಕಾರಿಗಳ ಜತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ. ತಕ್ಷಣ ರೊಚ್ಚಿಗೆದ್ದ ಗ್ರಾಮಸ್ಥರು ಅಬಕಾರಿ ಅಧಿಕಾರಿಗಳ ದಿಢೀರ್ ದಾಳಿ ತೀವ್ರವಾಗಿ ಹಲ್ಲೆ ಮಾಡಿದ್ದಾರೆ.
ಜವಾನನ ಜೀವ ತೆಗೆದ ಜನ: ಜರೋಖರ್ ಸೇತುವೆ ಬಳಿ ಅಬಕಾರಿ ಇಲಾಖೆಯ ಇಬ್ಬರು ಎಎಸ್‌ಐ ಹಾಗೂ ಆರು ಮಂದಿ ಗೃಹರಕ್ಷಕ ದಳದ ಸಿಬ್ಬಂದಿ ಬ್ರೀತ್ ಅನಲೈಸರ್ ಮೂಲಕ ಮದ್ಯ ವ್ಯಸನಿಗಳನ್ನು ಪತ್ತೆ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು. ಪರೀಕ್ಷೆ ವೇಳೆ ವ್ಯಕ್ತಿಯೊಬ್ಬ ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಆತನನ್ನು ಬಂಧಿಸಿ ಬಳಿಕ ಕಾರಿನಲ್ಲಿ ಕೂರಿಸಿದ್ದಾರೆ. ಆ ವೇಳೆ, ಆತನು ಗಲಾಟೆ ಶುರು ಮಾಡತೊಡಗಿದ್ದಾನೆ. ನಂತರ ಒಬ್ಬರಿಗೊಬ್ಬರು ಸೇರಿದ ಗ್ರಾಮಸ್ಥರು ಅಬಕಾರಿ ತಂಡದ ಮೇಲೆ ದಾಳಿ ಮಾಡಿ ತೀವ್ರ ಹಲ್ಲೆಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.