ಕರ್ನಾಟಕ

karnataka

By

Published : Jul 10, 2021, 4:29 PM IST

ETV Bharat / bharat

ಈಶಾನ್ಯ ರಾಜ್ಯಗಳಲ್ಲಿ ಮೊದಲ ಬಾರಿಗೆ ಡೆಲ್ಟಾ ಪ್ಲಸ್ ವೇರಿಯಂಟ್ ಪತ್ತೆ

ತ್ರಿಪುರಾದ ಎಲ್ಲಾ ಎಂಟು ಜಿಲ್ಲೆಗಳಲ್ಲಿ ಡೆಲ್ಟಾ ವೇರಿಯಂಟ್ ಕಂಡು ಬಂದಿದೆ ಎಂದು ತಪನ್ ಮಜುಂದಾರ್ ಸ್ಪಷ್ಟನೆ ನೀಡಿದ್ದು, ಡೆಲ್ಟಾ ಪ್ಲಸ್ ಕೋವಿಡ್ ಲಸಿಕೆಯ ಸಾಮರ್ಥ್ಯವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ. ಇದೇ ವೇಳೆ ಜನರು ಆದಷ್ಟು ಜಾಗರೂಕರಾಗಿರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ..

Covid's Delta plus variant detected in Tripura, 1st time in NE
ಈಶಾನ್ಯ ರಾಜ್ಯಗಳಲ್ಲಿ ಮೊದಲ ಬಾರಿಗೆ ಡೆಲ್ಟಾ ಪ್ಲಸ್ ವೇರಿಯಂಟ್ ಪತ್ತೆ

ನವದೆಹಲಿ : ಈಗಾಗಲೇ ದೇಶದ ಈಶಾನ್ಯ ಭಾಗದ ಮೂರು ರಾಜ್ಯಗಳಲ್ಲಿ ಕೋವಿಡ್​ನ ರೂಪಾಂತರಿಯಾದ ಡೆಲ್ಟಾ ವೈರಸ್ ಇದೇ ಮೊದಲ ಬಾರಿಗೆ ಕಾಣಿಸಿದೆ ಎಂದು ವೈದ್ಯರು ಶನಿವಾರ ಮಾಹಿತಿ ನೀಡಿದ್ದಾರೆ. ತ್ರಿಪುರಾದಲ್ಲಿ ಡೆಲ್ಟಾ ಪ್ಲಸ್ ವೈರಸ್​ ಸಂಬಂಧಿ ಸೋಂಕು ಕಾಣಿಸಿಕೊಂಡಿದೆ ಎಂದು ಅಗರ್ತಲಾ ಸರ್ಕಾರಿ ವೈದ್ಯಕೀಯ ಕಾಲೇಜು (ಎಜಿಎಂಸಿ) ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥ ತಪನ್ ಮಜುಂದಾರ್ ಸ್ಪಷ್ಟನೆ ನೀಡಿದ್ದಾರೆ.

ಈ ಮೊದಲು ಮಿಜೋರಾಂ, ಮಣಿಪುರ, ಅಸ್ಸೋಂನಲ್ಲಿ ಡೆಲ್ಟಾ ವೈರಸ್ ಕಂಡು ಬಂದಿತ್ತು. ಪಶ್ಚಿಮ ಬಂಗಾಳದ ಕಲ್ಯಾಣಿಯಲ್ಲಿರುವ ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ಬಯೋ ಮೆಡಿಕಲ್ ಜಿನೋಮಿಕ್ಸ್ (ಎನ್​ಐಬಿಎಂಜಿ)ಯಲ್ಲಿ ತ್ರಿಪುರಾದ ಸ್ಯಾಂಪಲ್​ಗಳಲ್ಲಿ ವೈರಸ್​ಗಳ ಮ್ಯೂಟೆಂಟ್​ಗಳನ್ನು ಪರೀಕ್ಷೆ ಮಾಡಲಾಗಿದೆ. ಈ ವೇಳೆ 138 ಡೆಲ್ಟಾ ಪ್ಲಸ್, 10 ಡೆಲ್ಟಾ ಮತ್ತು ಮೂರು ಯುಕೆ ವೇರಿಯಂಟ್​ಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಅಫ್ಘನ್ನರೇ ಅವರ ದೇಶವನ್ನು ಕಟ್ಟಿಕೊಳ್ಳಬೇಕು, ಅದು ನಮ್ಮ ಜವಾಬ್ದಾರಿ ಅಲ್ಲ : ಜೋ ಬೈಡನ್

ತ್ರಿಪುರಾದ ಎಲ್ಲಾ ಎಂಟು ಜಿಲ್ಲೆಗಳಲ್ಲಿ ಡೆಲ್ಟಾ ವೇರಿಯಂಟ್ ಕಂಡು ಬಂದಿದೆ ಎಂದು ತಪನ್ ಮಜುಂದಾರ್ ಸ್ಪಷ್ಟನೆ ನೀಡಿದ್ದು, ಡೆಲ್ಟಾ ಪ್ಲಸ್ ಕೋವಿಡ್ ಲಸಿಕೆಯ ಸಾಮರ್ಥ್ಯವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ. ಇದೇ ವೇಳೆ ಜನರು ಆದಷ್ಟು ಜಾಗರೂಕರಾಗಿರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ABOUT THE AUTHOR

...view details