ಕರ್ನಾಟಕ

karnataka

ETV Bharat / bharat

ದೇಶದಲ್ಲಿ 2 ಲಕ್ಷ ಗಡಿ ದಾಟಿದ ಕೋವಿಡ್ ಸೋಂಕಿತ ಮೃತರ ಸಂಖ್ಯೆ - ಭಾರತದ ಕೋವಿಡ್ ಅಂಕಿ ಅಂಶಗಳು

ಭಾರತದಲ್ಲಿ 24 ಗಂಟೆಯಲ್ಲಿ 3,293 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಾವಿನ ಸಂಖ್ಯೆ ಎರಡು ಲಕ್ಷ ಗಡಿ ದಾಟಿದೆ.

COVID-19 India tracker: State-wise report
ದೇಶದಲ್ಲಿ 2 ಲಕ್ಷದ ಗಡಿ ದಾಟಿದ ಕೋವಿಡ್ ಮೃತರ ಸಂಖ್ಯೆ

By

Published : Apr 28, 2021, 10:55 AM IST

ನವದೆಹಲಿ:ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,60,960 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 3,293 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 2,61,162 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈವರೆಗಿನ ಅಂಕಿ-ಅಂಶ:

ದೇಶದಲ್ಲಿ ಈವರೆಗೆ ಒಟ್ಟು 1,79,97,267 ಕೊರೊನಾ ಪ್ರಕರಣಗಳು ದಾಖಲಾಗಿವೆ. 1,48,17,371 ಸೋಂಕಿತರು ಗುಣಮುಖರಾಗಿದ್ದಾರೆ. ಸುಮಾರು 2,01,187 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಪ್ರಸ್ತುತ ದೇಶದಲ್ಲಿ 29,78,709 ಸಕ್ರಿಯ ಕೋವಿಡ್​ ಪ್ರಕರಣಗಳಿವೆ.

ಕೋವಿಡ್ ಪರೀಕ್ಷೆ:

ಏಪ್ರಿಲ್​ 27ರವರೆಗೆ 28,27,03,789 ಮಂದಿಗೆ ಕೊರೊನಾ ಟೆಸ್ಟ್​ ಮಾಡಲಾಗಿದೆ. ನಿನ್ನೆ ಒಂದೇ ದಿನ 17,23,912 ಜನರ ಸ್ಯಾಂಪಲ್​​​ಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್​ ತಿಳಿಸಿದೆ.

ABOUT THE AUTHOR

...view details