ಕರ್ನಾಟಕ

karnataka

ETV Bharat / bharat

ಕೊರೊನಾ,ಉಸಿರಾಟದ ತೊಂದರೆಯಿಂದ ಸೈನಿಕರನ್ನು ಬಚಾವ್​ ಮಾಡಲು ವಿಶಿಷ್ಟ ತಾಲೀಮು

ಮೂಗಿನ ಹೊಳ್ಳೆಗಳನ್ನು ಉಸಿರಾಡಲು ಸುಗಮಗೊಳಿಸಿ ಮತ್ತು ತೆರೆಯಲು ಈ ರೀತಿಯ ಪ್ರಯೋಗ ಮನೆಮದ್ದುಗಳಲ್ಲಿ ಒಂದಾಗಿದೆ. ಇದು ಶೀತ ಮತ್ತು ಇನ್ನಿತರೆ ಸೋಂಕಿನಿಂದ ವ್ಯಕ್ತಿಯನ್ನು ಕಾಪಾಡುತ್ತದೆ..

covid-19-bsf-camp-comes-up-with-unique-drill-to-keep-jawans-safe
ಉಸಿರಾಟದ ತೊಂದರೆಯಿಂದ ಸೈನಿಕರನ್ನು ಬಚಾವ್​ ಮಾಡಲು ವಿಶಿಷ್ಟ ತಾಲೀಮು!

By

Published : Apr 23, 2021, 9:06 PM IST

ಹಜಾರಿಬಾಗ್ (ಜಾರ್ಖಂಡ್):ದೇಶವು ಕೊರೊದಿಂದ ತತ್ತರಿಸುತ್ತಿರುವಾಗಲೂ, ಭಾರತದ ಭದ್ರತಾ ಪಡೆ ಸಿಬ್ಬಂದಿಯನ್ನು ಸಾಂಕ್ರಾಮಿಕ ರೋಗದಿಂದ ದೂರವಿರಿಸಲು, ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್) ವಿಶಿಷ್ಟವಾದ ವ್ಯಾಯಾಮ ನಡೆಸಲು ಪ್ಲಾನ್​ ಮಾಡಿದೆ.

ಉಸಿರಾಟದ ತೊಂದರೆಯಿಂದ ಸೈನಿಕರನ್ನು ಬಚಾವ್​ ಮಾಡಲು ವಿಶಿಷ್ಟ ತಾಲೀಮು!

ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿರುವ ಬಿಎಸ್‌ಎಫ್ ಕ್ಯಾಂಪ್‌ನಲ್ಲಿ ಸೈನಿಕರನ್ನು ನಿಯಮಿತವಾಗಿ ಉಸಿರಾಡುವಂತೆ ತಯಾರಿಸಲಾಗುತ್ತದೆ. ಶಿಬಿರದ ಅಧಿಕಾರಿಗಳು ಪ್ರೆಶರ್ ಕುಕ್ಕರ್‌ಗಳಿಂದ ಕಾಯಿಸಿದ ಕಬ್ಬಿಣದ ಕೊಳವೆಗಳ ಮೂಲಕ ಹಬೆಯನ್ನು ನೀಡುತ್ತಿದ್ದಾರೆ.

ಸುಮಾರು ಎಂಟು ಮಂದಿ ಸೈನಿಕರು ಒಂದೇ ಸಮಯದಲ್ಲಿ ಆವಿಯನ್ನು ತೆಗೆದುಕೊಳ್ಳಲು ಅನುವು ಮಾಡಿ ಕೊಡಲಾಗಿದೆ. ಪ್ರಯೋಗವು ಸೈನಿಕರಿಗೆ ಉಸಿರಾಟ ತೊಂದರೆಯಿಂದ ಪಾರಾಗಲು ಸಹಾಯಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಗಿನ ಹೊಳ್ಳೆಗಳನ್ನು ಉಸಿರಾಡಲು ಸುಗಮಗೊಳಿಸಿ ಮತ್ತು ತೆರೆಯಲು ಈ ರೀತಿಯ ಪ್ರಯೋಗ ಮನೆಮದ್ದುಗಳಲ್ಲಿ ಒಂದಾಗಿದೆ. ಇದು ಶೀತ ಮತ್ತು ಇನ್ನಿತರೆ ಸೋಂಕಿನಿಂದ ವ್ಯಕ್ತಿಯನ್ನು ಕಾಪಾಡುತ್ತದೆ.

ABOUT THE AUTHOR

...view details