ಕೊಲ್ಲಾಪುರ (ಮಹಾರಾಷ್ಟ್ರ): ಇಲ್ಲಿನ ಯುವಕನೊಬ್ಬ ದುಬಾರಿ ದ್ವಿಚಕ್ರ ವಾಹನ ಖರೀದಿಸಿದ್ದು ಅದನ್ನು ಡೋಲಿನ ಮೂಲಕ ಮೆರವಣಿಗೆ ಮಾಡಿದ್ದಾನೆ. ಕವಾಸಕಿ ನಿಂಜಾ ಝಡ್ ಎಕ್ಸ್ 10 ಆರ್ ಬೈಕ್ ಅನ್ನು ಈತ 21 ಲಕ್ಷ ರೂಪಾಯಿಗೆ ಖರೀದಿಸಿದ್ದಾನೆ.
21 ಲಕ್ಷ ರೂಪಾಯಿಯ ಬೈಕ್ ಖರೀದಿಸಿ ಅದ್ಧೂರಿ ಮೆರವಣಿಗೆ ಮಾಡಿದ ಯುವಕ - bike
ಮಹಾರಾಷ್ಟ್ರದ ಕೊಲ್ಲಾಪುರದ ಯುವಕನೊಬ್ಬ 21 ಲಕ್ಷ ರೂಪಾಯಿಯ ಬೈಕ್ಖರೀದಿಸಿದ್ದಾನೆ. ಬಳಿಕ ಆ ಬೈಕ್ ಜೊತೆ ಅದ್ಧೂರಿ ಮೆರವಣಿಗೆ ಮಾಡಿದ್ದಾನೆ.
21 ಲಕ್ಷ ಬೆಲೆಯ ಬೈಕ್ ಖರೀದಿಸಿದ ಯುವಕ
ದೀಪಾವಳಿಯ ಸಂದರ್ಭದಲ್ಲಿ ಜನರು ಹೊಸ ಕಾರು, ಟಿವಿ ಇತ್ಯಾದಿಗಳನ್ನು ಕೊಂಡುಕೊಳ್ಳುವುದು ಸಾಮಾನ್ಯ. ಕೊಲ್ಹಾಪುರದ ಕಲಾಂಬದಲ್ಲಿ ವಾಸವಾಗಿರುವ ರಾಜೇಶ್ ಚೌಗ್ಲೆ ಎಂಬಾತ ದುಬಾರಿ ಬೈಕ್ ಖರೀದಿಸಿದ್ದಾನೆ. ಅಷ್ಟೇ ಅಲ್ಲದೇ, ಅದನ್ನು ಅದ್ಧೂರಿ ಮೆರವಣಿಗೆಯಲ್ಲಿ ಮನೆಗೆ ತಂದಿದ್ದಾನೆ.
ರಾಜೇಶ್ ಚೌಗ್ಲೆ ಷೇರು ಮಾರುಕಟ್ಟೆ ವ್ಯವಹಾರ ಮಾಡುತ್ತಿದ್ದಾನೆ. ಈಗಾಗಲೇ ರಾಯಲ್ ಎನ್‌ಫೀಲ್ಡ್ ಬೈಕ್ ಮತ್ತು ಇತರ ಸ್ಪೋರ್ಟ್ಸ್ ಬೈಕ್‌ಗಳು ಹಾಗೂ ಕಾರುಗಳು ಈತನಲ್ಲಿವೆ.