ಚೆನ್ನೈ: ಡಿಫೆನ್ಸ್ ಸಿವಿಲಿಯನ್ ರಿಕ್ರೂಟ್‌ಮೆಂಟ್ ಗ್ರೂಪ್ ಸಿ ಪರೀಕ್ಷೆಯು ನಿನ್ನೆ (ಅಕ್ಟೋಬರ್ 9) ಚೆನ್ನೈನ ನುಂಗಂಬಾಕ್ಕಂನಲ್ಲಿರುವ ಸೇನಾ ಪಬ್ಲಿಕ್ ಸ್ಕೂಲ್‌ನಲ್ಲಿ ಮಿಲಿಟರಿ ಕಂಟೋನ್ಮೆಂಟ್ ಉದ್ಯೋಗಗಳಿಗಾಗಿ ನಡೆದಿತ್ತು. ಈ ಪರೀಕ್ಷೆಗೆ ತಮಿಳುನಾಡು ರಾಜ್ಯದವರು ಸೇರಿದಂತೆ ಇತರ ರಾಜ್ಯದ 1,728 ಮಂದಿ ಹಾಜರಾಗಿದ್ದರು. ಏತನ್ಮಧ್ಯೆ, ಹರಿಯಾಣದ 28 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡಲು ಬ್ಲೂಟೂತ್ ಸಾಧನವನ್ನು ಬಳಸಿರುವ ಬಗ್ಗೆ ಶಂಕೆಗಳು ವ್ಯಕ್ತವಾಗಿವೆ.
ಸೇನಾ ಪ್ರವೇಶ ಪರೀಕ್ಷೆ ವೇಳೆ ಅಕ್ರಮ ಎಸಗಲು ಯತ್ನಿಸಿದ 28 ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಚೆನ್ನೈನ ನಂದಂಬಾಕ್ಕಂ ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತಿದ್ದ ವೇಳೆ ಇವರು ಬ್ಲೂಟೂತ್ ಬಳಸಿ ನಕಲು ಮಾಡಲು ಯತ್ನಿಸಿದ್ದರು.