ಹೈದರಾಬಾದ್: ಆಂಧ್ರಪ್ರದೇಶ ಹಾಗೂ ಒಡಿಶಾ ಗಡಿ ವಿವಾದಕ್ಕೆ ತಾರಕಕ್ಕೇರಿದ್ದು, ವಿಜಯನಗರ ಜಿಲ್ಲೆಯ ಸಾಲೂರು ವಲಯದಲ್ಲಿರುವ ವಿವಾದಿತ ಪಗುಲುಚೆನ್ನೂರು, ಕೋಥಿಯಾ ಗ್ರಾಮಕ್ಕೆ ಇಂದು ಆಂಧ್ರ ಮತ್ತು ಒಡಿಶಾ ಅಧಿಕಾರಿಗಳು, ಜನಪ್ರತಿನಿಧಿಗಳ ಏಕಕಾಲಕ್ಕೆ ಭೇಟಿ ನೀಡಿ ವಾಗ್ವಾದ ನಡೆಸಿದ್ದಾರೆ.
ಆಂಧ್ರ - ಒಡಿಶಾ ಗಡಿ ವಿವಾದ- ವಾಗ್ವಾದ: ಕೋಥಿಯಾ ಗ್ರಾಮದಲ್ಲಿ ಗೋ ಬ್ಯಾಕ್ ಘೋಷಣೆ..! - ಆಂಧ್ರ-ಒಡಿಶಾ ಗಡಿ ವಿವಾದ
ಆಂಧ್ರ ಹಾಗೂ ಒಡಿಶಾ ಗಡಿ ವಿವಾದ ಸಂಬಂಧ ಇಂದು ವಿಜಯನಗರ ಜಿಲ್ಲೆಯ ಸಾಲೂರು ವಲಯದಲ್ಲಿರುವ ವಿವಾದಿತ ಪಗುಲುಚೆನ್ನೂರು, ಕೋಥಿಯಾ ಗ್ರಾಮಕ್ಕೆ ಎರಡೂ ರಾಜ್ಯಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಚೆನ್ನೂರು ಮತ್ತು ಪಟ್ಟುಚೆನ್ನೂರು ಜನರು ಮುಂಬರುವ ಒಡಿಶಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಈ ಕುರಿತು ಪಾರ್ವತಿಪುರಂನ ಐಟಿಡಿಒ ಪಿಒ ಕೂರ್ಮನಾತ್ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ. ಇದೇ ವೇಳೆ ಒಡಿಶಾದ ಪೊಟ್ಟಂಗಿ ಶಾಸಕ ಪ್ರೀತಮ್ ಪಾಂಡೆ ಅವರು ಸ್ಥಳಕ್ಕೆ ಬಂದಿದ್ದು, ಸಭೆ ಮಾಡಿದ ಬಗ್ಗೆ ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಇದು ಒಡಿಶಾ ಪ್ರದೇಶವಲ್ಲ ವಿವಾದಿತ ಪ್ರದೇಶ ಎಂದು ಆಂಧ್ರದ ಅಧಿಕಾರಿ ಉತ್ತರಿಸಿದ್ದಾರೆ.
ಈ ವೇಳೆ, ಸ್ಥಳೀಯ ಶಾಸಕರು ಹಾಗೂ ಆಂಧ್ರದ ಅಧಿಕಾರಿಗಳು ನಡುವೆ ವಾಗ್ವಾದ ನಡೆದಿದ್ದು, ಶಾಸಕ ಪ್ರೀತಮ್ ಪಾಂಡೆ ಮತ್ತವರ ಬೆಂಬಲಿಗರು ಗೋ ಬ್ಯಾಕ್... ಗೋ ಬ್ಯಾಕ್ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಬಳಿಕ ಪಾರ್ವತಿಪುರಂನ ಐಟಿಡಿಒ ಪಿಒ ಕೂರ್ಮನಾಥತ್ ಅಲ್ಲಿಂದ ತೆರಳಿದ್ದಾರೆ.