ಹೈದರಾಬಾದ್: ಗ್ರಾಹಕನಿಗೆ ವಂಚಿಸಿದ್ದಕ್ಕಾಗಿ ಕ್ವಿಕರ್ ಆ್ಯಪ್ಗೆ ಕನ್ಸೂಮರ್ಸ್ ಕಮಿಷನ್ ಫೋರಮ್ ದಂಡ ಹಾಕಿದೆ. ಕಂಪನಿ ಗ್ರಾಹಕನಿಗೆ ದಂಡವಾಗಿ 5000 ರೂ. ಹಾಗೂ ವೆಚ್ಚಕ್ಕಾಗಿ 5000 ರೂ. ನೀಡಬೇಕಾಗಿದೆ.
ಹೈದರಾಬಾದ್ನ ಕಾಚಿಗುಡ ಖಾಸಗಿ ಹಾಸ್ಟೆಲ್ನಲ್ಲಿ ಉಳಿದುಕೊಂಡಿರುವ ಅಜಯ್ ಎಂಬುವರು ಏ. 22, 2020ರಂದು ತಮ್ಮ ಐ ಫೋನ್ ಮಾರಾಟ ಮಾಡಲು ಕ್ವಿಕರ್ನಲ್ಲಿ ಪೋಸ್ಟ್ ಹಾಕಿದ್ದರು. ಬಳಿಕ ಕಂಪನಿಯವರು ನೀವು 999 ರೂ. ಪ್ರೀಮಿಯಂ ಪಾವತಿಸಿದ ನಂತರ, ನಾವು ಮೂರು ದಿನಗಳಲ್ಲಿ ಮೊಬೈಲ್ ಮಾರಾಟವನ್ನು ಖಚಿತಪಡಿಸುತ್ತೇವೆ ಎಂದಿದ್ದರು. ಹಣ ನೀಡಿದ ಬಳಿಕ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.