ಕರ್ನಾಟಕ

karnataka

ETV Bharat / bharat

ಕೇವಲ 43 ದಿನಗಳಲ್ಲಿ 8415 ಚದರ ಅಡಿಯ ಕಟ್ಟಡ ಕಾಮಗಾರಿ ಪೂರ್ಣ... ಹೊಸ ದಾಖಲೆ

ಮಹಾರಾಷ್ಟ್ರದ ನಾಸಿಕ್​ನಲ್ಲಿ ಅತ್ಯಂತ ಕಡಿಮೆ ದಿನಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯು ಪೂರ್ಣಗೊಳಿಸಲಾಗಿದೆ. 8,415 ಚದರ ಅಡಿಯ ಈ ಕಟ್ಟಡವನ್ನು ಕೇವಲ 43 ದಿನಗಳಲ್ಲಿ ನಿರ್ಮಿಸಿ ಹೊಸ ದಾಖಲೆ ಬರೆಯಲಾಗಿದೆ.

construction-work-completed-in-just-43-days-a-record-in-construction-sector
ಕೇವಲ 43 ದಿನಗಳಲ್ಲಿ 8415 ಚದರ ಅಡಿಯ ಕಟ್ಟಡ ಕಾಮಗಾರಿ ಪೂರ್ಣ... ಹೊಸ ದಾಖಲೆ

By

Published : Jan 11, 2023, 4:23 PM IST

ನಾಸಿಕ್ (ಮಹಾರಾಷ್ಟ್ರ): ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಜನಪ್ರಿಯ ಮಾತಿದೆ. ಅಂದರೆ ಮನೆ ಕಟ್ಟುವುದು ಅಷ್ಟು ಸುಲಭವಲ್ಲ... ಹಾಗೆ ಮದುವೆ ಮಾಡುವುದು ಸಹ ಅಷ್ಟು ಸರಳವಲ್ಲ ಎಂಬುವುದು ಈ ನಾಣ್ಣುಡಿಯ ಸಾರ. ಆದರೆ, ಇದೀಗ ಬೆಳೆಯುತ್ತಿರುವ ತಂತ್ರಜ್ಞಾನವು ಮನೆ ಅಥವಾ ಯಾವುದೇ ಕಟ್ಟಡ ನಿರ್ಮಾಣದ ಕೆಲಸವನ್ನು ಸರಳವನ್ನಾಗಿಸಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಯೇ ಮಹಾರಾಷ್ಟ್ರದ ನಾಸಿಕ್​ನಲ್ಲಿ 8 ಸಾವಿರ 415 ಚದರ ಅಡಿಯ ಕಟ್ಟಡ ನಿರ್ಮಾಣ ಕಾರ್ಯವನ್ನು ಕೇವಲ 43 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ. ಈ ಮೂಲಕ ನಿರ್ಮಾಣ ವಲಯದಲ್ಲಿ ಹೊಸ ದಾಖಲೆ ಬರೆಯಲಾಗಿದೆ.

ಹೌದು, ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ಒಂದಾಗಿರುವ ನಾಸಿಕ್ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಇದರಿಂದಾಗಿ ಯುವ ಜನರಿಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತಿದೆ. ನಾಸಿಕ್‌ನ ಯುವ ಸಿವಿಲ್ ಇಂಜಿನಿಯರ್ ಮಯೂರ್ ಜೈನ್ ಎಂಬುವವರು ನಿರ್ಮಾಣ ವಲಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿ ದೇಶದ ಗಮನ ಸೆಳೆದಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಬಹು ವಿಸ್ತಾರವಾದ ಸಂಕೀರ್ಣವೊಂದರ ನಿರ್ಮಾಣ ಕಾಮಗಾರಿಯನ್ನು ಅತ್ಯಂತ ಕಡಿಮೆ ದಿನಗಳಲ್ಲಿ ಮುಗಿಸುವ ಮೂಲಕ ಈ ಯುವ ಇಂಜಿನಿಯರ್​ ಸೈ ಎನಿಸಿಕೊಂಡಿದ್ದಾರೆ.

105 ದಿನಗಳ ಕಾಲ ಕಾಮಗಾರಿ 43 ದಿನಗಳಲ್ಲೇ ಪೂರ್ಣ:8,415 ಚದರ ಅಡಿಯ ಈ ಕಟ್ಟಡ ನಿರ್ಮಾಣ ಕಾಮಗಾರಿಯು ಪೂರ್ಣಗೊಳ್ಳಲು ಅಂದಾಜು ಲೆಕ್ಕಾಚಾರದ ಪ್ರಕಾರ 105 ದಿನಗಳಾದರೂ ಬೇಕಾಗಿತ್ತು. ಆದರೆ, ಅಡಿಪಾಯಯಿಂದ ಪ್ಲೀತ್, ಬೀಮ್, ಸ್ಲ್ಯಾಬ್ ಸೇರಿದಂತೆ ಎಲ್ಲ ರೀತಿಯ ಸಿಮೆಂಟ್ ಕಾಂಕ್ರೀಟ್​ ಕೆಲಸವನ್ನು ಕೇವಲ 43 ದಿನಗಳಲ್ಲೇ ಸಂಪೂರ್ಣಗೊಳಿಸಲಾಗಿದೆ. ಕಡಿಮೆ ಅವಧಿಯಲ್ಲಿನ ನಿರ್ಮಾಣ ಸಾಧನೆಯು ವರ್ಲ್ಡ್ ರೆಕಾರ್ಡ್ ಆಫ್ ಇಂಡಿಯಾಯಲ್ಲಿ ದಾಖಲಾಗುವಂತೆ ಮಾಡಿದೆ.

ಎಲ್ಲ ಗುಣಮಟ್ಟದ ಕಾಮಗಾರಿ:ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕೇವಲ 43 ದಿನಗಳಲ್ಲಿ ಪೂರ್ಣಗೊಳಿಸಿರುವ ಈ ಕಾಮಗಾರಿಯು ಎಲ್ಲ ರೀತಿಯಿಂದಲೂ ಗುಣಮಟ್ಟದ ಮಾಡಲಾಗಿದೆ. ವಿಶೇಷ ರಾಸಾಯನಿಕಯನ್ನು ಹೊಂದಿರುವ ಗುಣಮಟ್ಟದ ಸಿಮೆಂಟ್​ ಸಹ ಬಳಕೆ ಮಾಡಿದೆ. 43 ದಿನಗಳಲ್ಲಿ ಈ ಕಾಮಗಾರಿ ಪೂರ್ಣಗೊಂಡ ನಂತರ ಸ್ಲ್ಯಾಬ್​ ಕೇವಲ 7 ದಿನಗಳಲ್ಲಿ ತೆಗೆಯಲಾಗಿತ್ತು. ಸಾಮಾನ್ಯವಾಗಿ ಸ್ಲ್ಯಾಬ್​ ತೆಗೆಯಲು 25 ದಿನಗಳು ಬೇಕಾಗುತ್ತದೆ. ವಿಶೇಷವಾದ ಸಿಮೆಂಟ್​ ಕಾಂಕ್ರೀಟ್​ನಿಂದ ಇದು ಸಾಧ್ಯವಾಗಿದೆ ಎಂದು ಮಯೂರ್ ಜೈನ್ ತಿಳಿಸಿದ್ದಾರೆ.

ಗುಣಮಟ್ಟ ತಿಳಿಯಲು ಸೆನ್ಸಾರ್ ಅಳವಡಿಕೆ: ಕಟ್ಟಡ ನಿರ್ಮಾಣದ ಕಾಂಕ್ರೀಟ್​ ಗುಣಮಟ್ಟ ಮತ್ತು ಅದರ ಸಾಮರ್ಥ್ಯ ತಿಳಿಯಲು ತಂತ್ರಜ್ಞಾನ ಬಳಕೆ ಮಾಡಿ ಸೆನ್ಸಾರ್ ಉಪಕರಣ ಸಹ ಅವಳಡಿಕೆ ಮಾಡಲಾಗಿದೆ. ಇದರ ಮೂಲಕ ಕಾಂಕ್ರೀಟ್​ ನೈಜವಾದ ಸಾಮರ್ಥ್ಯವನ್ನು ಮೊಬೈಲ್​ ಆ್ಯಪ್​ ಮೂಲಕವೂ ತಿಳಿಯಬಹುದಾಗಿದೆ. ಈ ಕಾಮಗಾರಿಯನ್ನು ಸರಿಯಾಗಿ ಮತ್ತು ತ್ವರಿತವಾಗಿ ಪೂರ್ಣಗೊಳಿಸಲು ವಿಶೇಷ ಸೆಂಟ್ರಿಂಗ್​ ವಿನ್ಯಾಸಗೊಳಿಸಲಾಗಿದೆ. ಈ ನಿರ್ಮಾಣ ಕಾಮಗಾರಿಯಲ್ಲಿ 50 ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಯುವ ಇಂಜಿನಿಯರ್ ಮಾಹಿತಿ ನೀಡಿದ್ದಾರೆ.

ಈ ಸಾಧಕ ಯುವ ಇಂಜಿನಿಯರ್ ಮಯೂರ್ ಜೈನ್ ತಂದೆ ಮುಖೇಶ್ ಜೈನ್ ಕಾಲೇಜು ಕ್ಯಾಂಟೀನ್‌ನೊಂದರಲ್ಲಿ ಚಹಾ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು. ಬಾಲ್ಯದಲ್ಲಿ ಮಯೂರ್ ಜೈನ್ ಸಹ ತಮ್ಮ ತಂದೆಯ ಕೆಲಸದಲ್ಲಿ ನೆರವಾಗುತ್ತಿದ್ದರು. ಜೊತೆಗೆ ಜೀವನ ಕಠಿಣ ಪರಿಸ್ಥಿತಿಗಳಲ್ಲೂ ಸಿವಿಲ್ ಇಂಜಿನಿಯರ್ ಮತ್ತು ಚಾರ್ಟರ್ಡ್ ಇಂಜಿನಿಯರ್ ಆಗಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ:105 ಗಂಟೆಯಲ್ಲಿ 75 ಕಿ.ಮೀ ರಸ್ತೆ ನಿರ್ಮಿಸಿ ದಾಖಲೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಗಡ್ಕರಿ ಶಹಬ್ಬಾಸ್​ಗಿರಿ

ABOUT THE AUTHOR

...view details