ಕರ್ನಾಟಕ

karnataka

ETV Bharat / bharat

ಸುರ್ಜೇವಾಲಾ, ದಿಗ್ವಿಜಯ್‌ ಸಿಂಗ್, ಹರ್‌ಸಿಮ್ರತ್ ಕೌರ್‌ಗೆ ಕೊರೊನಾ ಸೋಂಕು

ಕೊರೊನಾ ಆರ್ಭಟ ದೇಶದಲ್ಲಿ ಹೆಚ್ಚುತ್ತಿರುವ ಬೆನ್ನಲ್ಲೇ ಇಬ್ಬರು ಕಾಂಗ್ರೆಸ್‌ ನಾಯಕರು ಹಾಗೂ ಓರ್ವ ಮಾಜಿ ಕೇಂದ್ರ ಸಚಿವೆಗೆ ಕೊರೊನಾ ಸೋಂಕು ದೃಢಪಟ್ಟಿದೆ.

Congress leaders test positive for covid
ಇಬ್ಬರು ಕೈ ನಾಯಕರು, ಓರ್ವ ಮಾಜಿ ಕೇಂದ್ರ ಸಚಿವೆಗೆ ಕೊರೊನಾ ದೃಢ

By

Published : Apr 16, 2021, 10:51 AM IST

Updated : Apr 16, 2021, 11:33 AM IST

ನವದೆಹಲಿ: ಕೊರೊನಾ ಎರಡನೇ ಅಲೆ ದೇಶಾದ್ಯಂತ ಆತಂಕ ಸೃಷ್ಟಿಸಿರುವ ನಡುವೆ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಹಾಗೂ ಕರ್ನಾಟಕ ಉಸ್ತುವಾರಿ ರಂದೀಪ್​ ಸಿಂಗ್​ ಸುರ್ಜೇವಾಲಾ ಅವರು ಕೋವಿಡ್​ ಸೋಂಕಿಗೆ ತುತ್ತಾಗಿದ್ದಾರೆ.

ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಕೊರೊನಾ ಪರೀಕ್ಷಾ ವರದಿ ಸಹ ಪಾಸಿಟಿವ್ ಬಂದಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ದೆಹಲಿಯ ತಮ್ಮ ನಿವಾಸದಲ್ಲಿ ಕ್ವಾರಂಟೈನ್ ಆಗಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಪಿಎಂ-ಕೇರ್ಸ್ ಫಂಡ್ ಅಡಿ 100 ಹೊಸ ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕ ಸ್ಥಾಪನೆ

ಶಿರೋಮಣಿ ಅಕಾಲಿ ದಳದ ನಾಯಕಿ ಹಾಗೂ ಮಾಜಿ ಕೇಂದ್ರ ಸಚಿವೆ ಹರ್​​ಸಿಮ್ರತ್​​ ಕೌರ್ ಬಾದಲ್ ಸಹ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದು, ಮನೆಯಲ್ಲಿ ಪ್ರತ್ಯೇಕ ವಾಸದಲ್ಲಿರುವುದಾಗಿ ಟ್ವೀಟ್ ಮಾಡಿದ್ದಾರೆ.

Last Updated : Apr 16, 2021, 11:33 AM IST

ABOUT THE AUTHOR

...view details