ಸಲ್ಮಾನ್ ಖಾನ್ 'ಬೀಯಿಂಗ್ ಹ್ಯೂಮನ್' ಹೆಸರಿನ ಎನ್‌ಜಿಒ ನಡೆಸುತ್ತಿದ್ದು, ಇದೇ ಬ್ರ್ಯಾಂಡ್ ಅಡಿಯಲ್ಲಿ ಉತ್ಪನ್ನಗಳ ಮಾರಾಟವನ್ನೂ ಮಾಡುತ್ತಿದ್ದಾರೆ. ಬೀಯಿಂಗ್ ಹ್ಯೂಮನ್ ಸಂಸ್ಥೆಯಡಿಯಲ್ಲಿ ಅರುಣ್ ಕುಮಾರ್ ಆಭರಣದ ಅಂಗಡಿಯೊಂದನ್ನು ತೆರೆದಿದ್ದು, ಸುಮಾರು 2-3 ಕೋಟಿ ರೂಪಾಯಿ ವ್ಯಯಿಸಿದ್ದರಂತೆ.
ವಂಚನೆ ಪ್ರಕರಣ: ಸಲ್ಮಾನ್ ಖಾನ್, ಸಹೋದರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಮತ್ತು ಅವರ ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಸೇರಿ ಒಟ್ಟು ಎಂಟು ಜನರಿಗೆ ಚಂಡೀಗಢ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಈ ಸಂಸ್ಥೆಯ ಕೆಲವು ಸಿಬ್ಬಂದಿ ನನಗೆ ಫ್ರ್ಯಾಂಚೈಸಿ ತೆರೆಯುವಂತೆ ಹೇಳಿದರು. ಅದರಂತೆ ನಾನು ಕೋಟ್ಯಂತರ ರೂ ಬಂಡವಾಳ ಹೂಡಿ ಜ್ಯುವೆಲ್ಲರಿ ಶಾಪ್ ತೆರೆದಿದ್ದೆ. ದಾಸ್ತಾನಿಗಾಗಿ ಹಣ ಸಹ ಪಾವತಿಸಿದೆ. ಆದರೆ ಯಾವುದೇ ದಾಸ್ತಾನನ್ನು ಬೀಯಿಂಗ್ ಹ್ಯೂಮನ್ ಅವರು ನೀಡದೇ ಮೋಸ ಮಾಡಿದ್ದಾರೆ ಎಂದು ಅರುಣ್ ಗುಪ್ತಾ ದೂರಿನಲ್ಲಿ ತಿಳಿಸಿದ್ದಾರೆ.
ಅಂಗಡಿಯ ಉದ್ಘಾಟನೆಗೆ ಸಲ್ಮಾನ್ ಖಾನ್ ಬರುತ್ತಾರೆ ಎಂದು ಭರವಸೆ ನೀಡಲಾಗಿತ್ತು. ಆದ್ರೆ ಅವರ ಸೋದರ ಮಾವ ಆಯುಷ್ ಶರ್ಮಾ ಹೇಳಿದಂತೆ ನಡೆದುಕೊಳ್ಳಲಿಲ್ಲ. ಈ ಕುರಿತಾಗಿ ದೂರು ದಾಖಲಿಸಿಕೊಂಡಿರುವ ಚಂಡೀಗಢ ಪೊಲೀಸರು, ಸಲ್ಮಾನ್ ಖಾನ್, ಸಹೋದರಿ ಅಲ್ವಿರಾ ಹಾಗೂ ಇನ್ನೂ ಕೆಲವು ಸಂಸ್ಥೆಯ ಸಿಬ್ಬಂದಿಗೆ ಸಮನ್ಸ್ ಜಾರಿ ಮಾಡಿದ್ದು, ಜುಲೈ 13ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.