ಅಜಮ್‌ಗಡ್ (ಉತ್ತರ ಪ್ರದೇಶ): ಕೊರೊನಾ ವ್ಯಾಕ್ಸಿನೇಷನ್ ಮಾರ್ಗಸೂಚಿಗಳ ಪ್ರಕಾರ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ವೈರಸ್ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರಿಗೆ ಮಾತ್ರ ಲಸಿಕೆ ನೀಡಬೇಕಾಗಿದೆ. ಆದರೆ ಇಲ್ಲೋರ್ವ ಸಾಮಾನ್ಯ ವ್ಯಕ್ತಿಯು ಆರೋಗ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿ ಲಸಿಕೆ ಹಾಕಿಸಿಕೊಂಡಿದ್ದಾನೆ.
ಉತ್ತರ ಪ್ರದೇಶದ ಅಜಮ್ಗಡ್ನಲ್ಲಿ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ ಸೇರಿ ಅಜಮ್‌ಗಡ್ ಜಿಲ್ಲೆಯಲ್ಲಿ ಮೊದಲ ಹಂತಕ್ಕೆ ಒಟ್ಟು 16,089 ಆರೋಗ್ಯ ಕಾರ್ಯಕರ್ತರ ಹೆಸರು ನೋಂದಾಯಿಸಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಈ ವ್ಯಕ್ತಿಯು ನಕಲಿ ದಾಖಲೆಗಳ ಮೂಲಕ ಆರೋಗ್ಯ ಕಾರ್ಯಕರ್ತನೆಂದು ಹೇಳಿಕೊಂಡು ಕೋವಿಡ್ ವ್ಯಾಕ್ಸಿನ್ ಪೋರ್ಟಲ್‌ನಲ್ಲಿ ಹೆಸರನ್ನು ನೋಂದಾಯಿಸಿಕೊಂಡಿದ್ದಾನೆ.