ತಿರುವನಂತಪುರಂ: ಕೇರಳ ರಾಜ್ಯಪಾಲ ಮತ್ತು ಎಲ್‌ಡಿಎಫ್ ಸರ್ಕಾರದ ನಡುವೆ ನಡೆಯುತ್ತಿರುವ ಗಲಾಟೆಯ ಮಧ್ಯೆ, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅಚ್ಚರಿಯ ಬೆಳವಣಿಗೆಯೊಂದರಲ್ಲಿ 2019 ರಲ್ಲಿ ಕಣ್ಣೂರು ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ತಮ್ಮನ್ನು ತಳ್ಳಾಡಿದ ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ಪೊಲೀಸರ ಕರ್ತವ್ಯಕ್ಕೆ ಸಿಎಂಒ ಅಧಿಕಾರಿ ಅಡ್ಡಿ: ವಿಡಿಯೋ ಬಿಡುಗಡೆ ಮಾಡಿದ ಕೇರಳ ರಾಜ್ಯಪಾಲ - ವಿಡಿಯೋ ಬಿಡುಗಡೆ ಮಾಡಿದ ಕೇರಳ ರಾಜ್ಯಪಾಲ
ಕೇರಳ ರಾಜ್ಯಪಾಲರು ಮತ್ತು ಅಲ್ಲಿನ ಎಡರಂಗ ಸರ್ಕಾರದ ಮಧ್ಯದ ಬಿಕ್ಕಟ್ಟು ತಾರಕಕ್ಕೇರಿದೆ. ಸಮಾರಂಭವೊಂದರಲ್ಲಿ ಕೆಲವರು ತಮ್ಮನ್ನು ತಳ್ಳಾಡುತ್ತಿರುವುದು ಮತ್ತು ಅದನ್ನು ತಡೆಯಲು ಬಂದ ಪೊಲೀಸರಿಗೆ ಅಡ್ಡಿಪಡಿಸಿದ ವಿಡಿಯೋಗಳನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ರಾಜಭವನದ ಸಭಾಂಗಣದಲ್ಲಿಂದು ಸ್ಥಾಪಿಸಲಾದ ಎರಡು ವೈಡ್‌ಸ್ಕ್ರೀನ್‌ಗಳಲ್ಲಿ ಘಟನೆಯ ವಿಡಿಯೋಗಳನ್ನು ಪ್ರದರ್ಶಿಸಿದ ಖಾನ್, ಮುಖ್ಯಮಂತ್ರಿಗಳ ಕಚೇರಿಯಲ್ಲಿ ಸದ್ಯ ಕೆಲಸ ಮಾಡುತ್ತಿರುವ ಹಿರಿಯ ಕಾರ್ಯಕಾರಿಯೊಬ್ಬರು ಪೊಲೀಸರು ತಮ್ಮ ಕಾರ್ಯಗಳನ್ನು ನಿರ್ವಹಿಸದಂತೆ ತಡೆಯುತ್ತಿರುವುದನ್ನು ಮಾಧ್ಯಮ ಪ್ರತಿನಿಧಿಗಳ ಎದುರು ಪ್ರದರ್ಶಿಸಿದರು.
ಕಪ್ಪು ಅಂಗಿ ಧರಿಸಿದ ಮಾತ್ರಕ್ಕೆ ಜನರನ್ನು ಬಂಧಿಸುವ ರಾಜ್ಯದಲ್ಲಿ ಇಂಥ ಘಟನೆಗಳು ನಡೆಯುತ್ತವೆ. ಪೊಲೀಸ್ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು ಮತ್ತು ಜನರು ನನ್ನ ಬಳಿಗೆ ಬರದಂತೆ ತಡೆದರು. ಆದರೆ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಕಚೇರಿಯಲ್ಲಿರುವ ಹಿರಿಯ ಅಧಿಕಾರಿಯೊಬ್ಬರು ಪೊಲೀಸರನ್ನು ತಡೆಯುತ್ತಿರುವುದು ವಿಡಿಯೋದಲ್ಲಿದೆ ನೋಡಿ ಎಂದು ರಾಜ್ಯಪಾಲರು ಹೇಳಿದರು.