ಕರ್ನಾಟಕ

karnataka

ETV Bharat / bharat

'ಚುನಾವಣೆ ಗೆಲ್ಲುವ ಪ್ರಯತ್ನದಲ್ಲಿ ಗೃಹ ಸಚಿವರ ಮೇಲೆ ಆರೋಪದ ಹೊರೆ': ಮಮತಾ ವಿರುದ್ಧ ಸಚಿವ ಗಿರಿರಾಜ್​ ಆಕ್ರೋಶ - ಮೀನುಗಾರಿಕೆ ಮತ್ತು ಹೈನುಗಾರಿಕೆ ಸಚಿವ ಗಿರಿರಾಜ್ ಸಿಂಗ್

ಬಂಗಾಳ ವಿಧಾನಸಭಾ ಚುನಾವಣೆ ಗೆಲ್ಲುವ ಪ್ರಯತ್ನದಲ್ಲಿ ಮಮತಾ ಬ್ಯಾನರ್ಜಿ ಗೃಹ ಸಚಿವರ ಮೇಲೆ ಆರೋಪಗಳನ್ನು ಹೊರಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಗಿರಿರಾಜ್​ ಸಿಂಗ್​ ಆರೋಪಿಸಿದ್ದಾರೆ.

Giriraj Singh
ಮಮತಾ ವಿರುದ್ಧ ಸಚಿವ ಗಿರಿರಾಜ್​ ಆಕ್ರೋಶ

By

Published : Mar 17, 2021, 7:16 AM IST

ನವದೆಹಲಿ:ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಗೆಲ್ಲುವ ಪ್ರಯತ್ನದಲ್ಲಿ ಮಮತಾ ಬ್ಯಾನರ್ಜಿ ಗೃಹ ಸಚಿವರ ಮೇಲೆ ಆರೋಪಗಳನ್ನು ಹೊರಿಸುತ್ತಿದ್ದಾರೆ ಎಂದು ಮೀನುಗಾರಿಕೆ ಮತ್ತು ಹೈನುಗಾರಿಕೆ ಸಚಿವ ಗಿರಿರಾಜ್ ಸಿಂಗ್ ಆರೋಪಿಸಿದ್ದಾರೆ.

"ಮಮತಾ ಬ್ಯಾನರ್ಜಿ ಅವರು ಚುನಾವಣೆಯಲ್ಲಿ ಸೋಲುವುದರಿಂದ ನಿರಾಸೆಗೊಂಡಿದ್ದಾರೆ. ಗೆಲ್ಲುವ ಪ್ರಯತ್ನದಲ್ಲಿ, ಅವರು ಗೃಹ ಸಚಿವರ ಮೇಲೆ ಆರೋಪಗಳನ್ನು ಹೊರಿಸುತ್ತಿದ್ದಾರೆ. ಹಲವಾರು ಬಿಜೆಪಿ ಕಾರ್ಯಕರ್ತರ ಕೊಲೆಯಾದಾಗ ಅವಳು ಮರೆಯಾಗಿದ್ದಳು?" ಎಂದು ಹರಿಹಾಯ್ದಿದ್ದಾರೆ.

"ಮಮತಾ ಪ್ರತಿದಿನ ಗೂಂಡಾಗಿರಿಯಲ್ಲಿ ಪಾಲ್ಗೊಳ್ಳುತ್ತಾರೆ. ಚುನಾವಣಾ ಆಯೋಗ ಇಲ್ಲದಿದ್ದರೆ ನಾವು ಬೇರೆ ಯಾರ ಬಳಿಗೆ ಹೋಗಬೇಕು? ”ಎಂದು ಗಿರಿರಾಜ್ ಸಿಂಗ್ ಪ್ರಶ್ನಿಸಿದ್ದಾರೆ.

ABOUT THE AUTHOR

...view details