ಕರ್ನಾಟಕ

karnataka

ETV Bharat / bharat

ಒಮಿಕ್ರೋನ್​ ಎದುರಿಸಲು ದೆಹಲಿ ಸರ್ಕಾರ ಸರ್ವ ಸನ್ನದ್ಧ.. ಮಹತ್ವದ ನಿರ್ಧಾರ ಕೈಗೊಂಡ ಕೇಜ್ರಿವಾಲ್​..

ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರೋನ್ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅರವಿಂದ್​ ಕೇಜ್ರಿವಾಲ್​, ವಿದೇಶಿ ವಿಮಾನಯಾನ ಹಾರಾಟ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಅಲ್ಲಿಂದ ಬರುವ ಪ್ರವಾಸಿಗರ ಮೇಲೆ ತೀವ್ರ ನಿಗಾವಹಿಸುವಂತೆ ತಿಳಿಸಿದ್ದಾರೆ..

CM Kejriwal Important meeting
CM Kejriwal Important meeting

By

Published : Nov 30, 2021, 5:25 PM IST

ನವದೆಹಲಿ :ರೂಪಾಂತರ ವೈರಸ್​ ಒಮಿಕ್ರೋನ್​​ ಈವರೆಗೆ ಭಾರತದಲ್ಲಿ ಕಾಣಿಸಿಲ್ಲ. ಆದರೆ, ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಇದರ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಂಡಿವೆ. ವಿದೇಶಿ ಪ್ರವಾಸಿಗರ ಮೇಲೆ ಹದ್ದಿನ ಕಣ್ಣು ಇಟ್ಟಿವೆ. ದೆಹಲಿ ಕೇಜ್ರಿವಾಲ್​ ಸರ್ಕಾರ ಕೂಡ ಕೆಲವೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

ಒಮಿಕ್ರೋನ್​​ಗೆ ಸಂಬಂಧಿಸಿದಂತೆ ವಿವಿಧ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಇಂದು​ ಮಹತ್ವದ ಸಭೆ ನಡೆಸಿದರು. ಇದಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾಹಿತಿ ನೀಡಿರುವ ಅವರು, ಭಾರತಕ್ಕೆ ಈವರೆಗೆ ರೂಪಾಂತರ ಒಮಿಕ್ರೋನ್​ ಲಗ್ಗೆ ಹಾಕಿಲ್ಲ.

ಆದರೆ, ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕಾಗಿರುವುದು ಸರ್ಕಾರಗಳ ಕರ್ತವ್ಯವಾಗಿದೆ. ದೆಹಲಿಯಲ್ಲಿ 30,000 ಆಮ್ಲಜನಕ​ ಹಾಸಿಗೆ ಸಿದ್ಧಗೊಂಡಿವೆ. ಅದರಲ್ಲಿ 10,000 ಐಸಿಯು ಹಾಸಿಗೆ ಸೇರಿವೆ ಎಂದಿದ್ದಾರೆ.

ಇದನ್ನೂ ಓದಿರಿ:Twitter CEO ಆಗಿ ನೇಮಕಗೊಂಡ ಪರಾಗ್​​ ಅಗರವಾಲ್​ ತಿಂಗಳ ಸ್ಯಾಲರಿ ಎಷ್ಟು?

ಇದಲ್ಲದೆ, 6,800 ಐಸಿಯು ಹಾಸಿಗೆಗಳ ಕಟ್ಟಡ ನಿರ್ಮಾಣ ಹಂತದಲ್ಲಿವೆ. ಫೆಬ್ರವರಿ ವೇಳೆಗೆ ಬಳಕೆಗೆ ಸಿದ್ಧಗೊಳ್ಳಲಿವೆ ಎಂದರು. ಪ್ರತಿ ಮುನ್ಸಿಪಾಲ್​​​ ವಾರ್ಡ್​​​ ಆಸ್ಪತ್ರೆಯಲ್ಲಿ 100 ಆಕ್ಸಿಜನ್​ ಬೆಡ್​​​​​ ಸಿದ್ಧಗೊಳಿಸಲು ಸೂಚನೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ 27,000 ಆಕ್ಸಿಜನ್​ ಬೆಡ್​​ ಸಿದ್ಧಗೊಳ್ಳಲಿವೆ ಎಂದರು.

ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರೋನ್ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅರವಿಂದ್​ ಕೇಜ್ರಿವಾಲ್​, ವಿದೇಶಿ ವಿಮಾನಯಾನ ಹಾರಾಟ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಅಲ್ಲಿಂದ ಬರುವ ಪ್ರವಾಸಿಗರ ಮೇಲೆ ತೀವ್ರ ನಿಗಾವಹಿಸುವಂತೆ ತಿಳಿಸಿದ್ದಾರೆ.

ABOUT THE AUTHOR

...view details