ನವದೆಹಲಿ: ಮೇಕೆದಾಟು ಯೋಜನೆಯ ಕುರಿತು ಹೇಳಿಕೆ ನೀಡಿದ್ದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಅಣ್ಣಾಮಲೈ ಉಪವಾಸ ಕೂರುವುದು ಬಿಡುವುದು ನನಗೆ ಸಂಬಂಧಿಸಿಲ್ಲ. ಮೇಕೆದಾಟು ಮೇಲೆ ನಮ್ಮ ಹಕ್ಕಿದೆ ಎಂದಿದ್ದಾರೆ.
ಯಾರಾದರೂ ಉಪವಾಸ ಕೂರಲಿ..ಮೇಕೆದಾಟು ಮಾಡಿಯೇ ತೀರುತ್ತೇವೆ: ಅಣ್ಣಾಮಲೈಗೆ ಬೊಮ್ಮಾಯಿ ತಿರುಗೇಟು - ಬೊಮ್ಮಾಯಿ ದೆಹಲಿ ಪ್ರವಾಸ
ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ಪ್ರಾರಂಭಿಸಲು ಕರ್ನಾಟಕ ಬಿಜೆಪಿ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಿ ತಮಿಳುನಾಡು ಬಿಜೆಪಿ ಆಗಸ್ಟ್ 5ರಂದು ಕಾವೇರಿ ಪ್ರದೇಶದಲ್ಲಿ ಒಂದು ದಿನದ ಉಪವಾಸ ಪ್ರತಿಭಟನೆ ನಡೆಸಲು ಯೋಜಿಸಿದೆ ಎಂದು ಅಣ್ಣಾಮಲೈ ತಿಳಿಸಿದ್ದರು.
ಬೊಮ್ಮಾಯಿ
ದೆಹಲಿಯಲ್ಲಿ ಮಾತನಾಡಿದ ಅವರು, ಆ ಯೋಜನೆಗೆ ಡಿಪಿಆರ್ ಮಾಡಲಾಗಿದೆ. ಡಿಪಿಆರ್ಗೆ ಅನುಮೋದನೆ ಪಡೆದು ಆ ಯೋಜನೆ ಮಾಡಿಯೇ ತೀರುತ್ತೇವೆ, ಯಾರಾದರೂ ಉಪವಾಸ ಕುಳಿತುಕೊಳ್ಳಲಿ, ಯಾರಾದರೂ ಊಟಮಾಡಲಿ ಎಂದು ತಿರುಗೇಟು ನೀಡಿದ್ದಾರೆ.
ಓದಿ:ಮೇಕೆದಾಟು ಯೋಜನೆ : ಬಿಜೆಪಿ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಪ್ರತಿಭಟಿಸಲು ಕರೆ