ನವದೆಹಲಿ:ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ನೀಲಗಿರಿಯ ಕನೂರ್ ಬಳಿ ಪತನಗೊಂಡಿದ್ದು, ಈ ವೇಳೆ ಸೇನಾ ಮುಖ್ಯಸ್ಥ ರಾವತ್, ಅವರ ಪತ್ನಿ ಸೇರಿದಂತೆ 11 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ಗೆ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಶೌರ್ಯಚಕ್ರ ಪುರಸ್ಕೃತ ಕ್ಯಾಪ್ಟನ್ ವರುಣ್ ಸಿಂಗ್, 2020ರಲ್ಲಿ ತೇಜಸ್ ಯುದ್ಧ ವಿಮಾನ ರಕ್ಷಣೆ ಮಾಡಿದ್ದಕ್ಕಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿರಿ:Bipin Rawat chopper crash: ಮರಕ್ಕೆ ಡಿಕ್ಕಿ ಹೊಡೆದು, ಹೆಲಿಕಾಪ್ಟರ್ಗೆ ಬೆಂಕಿ; ಪ್ರತ್ಯಕ್ಷದರ್ಶಿ ಮಾಹಿತಿ
ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ವೆಲಿಂಗ್ಟನ್ನಲ್ಲಿ ಉಪನ್ಯಾಸ ನೀಡಲು ರಾವತ್ ತಮ್ಮ ಪತ್ನಿ ಹಾಗೂ ಸೇನಾ ಸಿಬ್ಬಂದಿ ಜೊತೆ ತೆರಳುತ್ತಿದ್ದರು. ಈ ವೇಳೆ, ನೀಲಗಿರಿ ಕನೂರ್ ಸಮೀಪ ವಿಮಾನ ಪತನಗೊಂಡಿತ್ತು. ಇದರಲ್ಲಿ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯ್ತೇಜ್, ಹವಲ್ದಾರ್ ಸತ್ಪಾಲ್ ರಷ್ಯಾ ನಿರ್ಮಿತ Mi-17V5 ಹೆಲಿಕಾಪ್ಟರ್ನಲ್ಲಿ ಪ್ರಯಾಣ ಮಾಡುತ್ತಿದ್ದರು.