ಕರ್ನಾಟಕ

karnataka

By

Published : May 11, 2021, 2:08 PM IST

ETV Bharat / bharat

ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯಕ ಚಾಕೊಲೇಟ್ ಮತ್ತು ಅರಿಶಿನ ಹಾಲು

ನೈಸರ್ಗಿಕ ರೀತಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಆಹಾರ ಸಲಹೆಯನ್ನು ಭಾರತ ಸರ್ಕಾರ ಇತ್ತೀಚೆಗೆ ಟ್ವೀಟ್ ಮಾಡಿದೆ. ಅರಿಶಿನದ ಹಾಲು ಮತ್ತು ಚಾಕೊಲೇಟ್ ಅನ್ನು ಸೇವಿಸುವುದು, ವ್ಯಾಯಾಮ ಮಾಡುವುದು ಮುಂತಾದ ಸಲಹೆಗಳಿವೆ..

Chocolate and turmeric milk for boosting immunity during pandemic
ಅರಿಶಿನದ ಹಾಲಿನ

ನವದೆಹಲಿ :ಭಾರತವು ಪ್ರಸ್ತುತ ಕೋವಿಡ್​-19 ಎರಡನೇ ಅಲೆಯನ್ನು ಎದುರಿಸುತ್ತಿದೆ. ಈವರೆಗೆ, ದೇಶವು ವೈರಸ್​ನಿಂದ ತಲ್ಲಣಿಸಿದೆ. 20 ಮೇ 2021ರ ಶುಕ್ರವಾರದವರೆಗೆ, ದೇಶವು ಸುಮಾರು 4,14,188 ಹೊಸ ಪ್ರಕರಣ ಮತ್ತು 3,915 ಸಾವುಗಳನ್ನು ದಾಖಲಿಸಿದೆ.

ನಾಗರಿಕರು ಜಾಗರೂಕರಾಗಿರಬೇಕು ಮತ್ತು ನಮ್ಮನ್ನು ಹಾಗೂ ಸುತ್ತಮುತ್ತಲಿನ ಜನರನ್ನು ಸುರಕ್ಷಿತವಾಗಿಡಲು ಅಗತ್ಯ ಮುನ್ನೆಚ್ಚರಿಕೆಗಳು ಮತ್ತು ಕ್ರಮಗಳನ್ನು ತೆಗೆದುಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ.

ವೈರಸ್‌ನ ಸೋಲಿಸುವ ಪ್ರಮುಖ ಮತ್ತು ಪ್ರಾಥಮಿಕ ಹಂತವೆಂದರೆ ಆರೋಗ್ಯಕರ ರೋಗನಿರೋಧಕ ಶಕ್ತಿಯನ್ನು ನಿರ್ಮಿಸುವುದು. ನೈಸರ್ಗಿಕ ರೀತಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಆಹಾರ ಸಲಹೆಯನ್ನು ಭಾರತ ಸರ್ಕಾರ ಇತ್ತೀಚೆಗೆ ಟ್ವೀಟ್ ಮಾಡಿದೆ.

ಈ ಪಟ್ಟಿಯಲ್ಲಿ ಧಾನ್ಯಗಳು, ಪ್ರೋಟೀನ್​ಗಳು, ಅರಿಶಿನದ ಹಾಲು ಮತ್ತು ಚಾಕೊಲೇಟ್ ಸೇವಿಸುವುದು, ವ್ಯಾಯಾಮ ಮಾಡುವುದು ಮುಂತಾದ ಸಲಹೆಗಳಿವೆ.

ಚಾಕೊಲೇಟ್‌ಗಳು - ಪ್ರಯೋಜನಗಳು ಮತ್ತು ಬಳಕೆ:

  • ಇದು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದ್ದು, ಅದು ಚರ್ಮದ ಮೇಲೆ ಆರೋಗ್ಯಕರ ಪರಿಣಾಮ ಬೀರುತ್ತದೆ.
  • ದೇಹದಲ್ಲಿನ ರಕ್ತದೊತ್ತಡದ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
  • ಅರಿವಿನ ಕಾರ್ಯವನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ.
  • ಕೊಲೆಸ್ಟ್ರಾಲ್ ಅನ್ನು ನಿರ್ವಹಿಸುವಲ್ಲಿ ಪ್ರಯೋಜನಕಾರಿಯಾಗಬಹುದು.
  • ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ನೀವು ಚಾಕೊಲೇಟ್‌ಗಳನ್ನು ಹಾಗೆಯೇ ಸೇವಿಸಬಹುದು ಅಥವಾ ಅವುಗಳನ್ನು ಸ್ಪ್ರೆಡ್‌ಗಳು, ಡಿಪ್​ ಮತ್ತು ಶೇಕ್‌ಗಳ ರೂಪದಲ್ಲಿ ಬಳಸಬಹುದು.

ವಾಣಿಜ್ಯ ಉಪಯೋಗಕ್ಕೆ ತಯಾರಿಸಿದ ಚಾಕೊಲೇಟ್ ಉತ್ಪನ್ನಗಳು ಅನಾರೋಗ್ಯಕರ ಪ್ರಮಾಣದ ಸಕ್ಕರೆ ಮತ್ತು ಸಂರಕ್ಷಕಗಳನ್ನು ಒಳಗೊಂಡಿರಬಹುದು ಎಂಬ ಕಾರಣಕ್ಕೆ ನೀವು ಮನೆಯಲ್ಲಿ ಈ ಉತ್ಪನ್ನಗಳನ್ನು ತಯಾರಿಸುವುದು ಉತ್ತಮ.

ಅರಿಶಿನದ ಹಾಲಿನ - ಪ್ರಯೋಜನಗಳು ಮತ್ತು ತಯಾರಿಕೆ:

  • ಇದು ದೀರ್ಘಕಾಲದ ಉರಿಯೂತದಿಂದ ಉಂಟಾಗುವ ಪರಿಸ್ಥಿತಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
  • ಅರಿಶಿನವು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು ಅದು ಮನಸ್ಥಿತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
  • ಹಾಲು ಪ್ರೋಟೀನ್‌ನ ಮೂಲ ಎಂದು ನಂಬಲಾಗಿದೆ.
  • ನೀವು ಹಾಲನ್ನು ವಿಟಮಿನ್ ಡಿ ಮೂಲವಾಗಿ ಬಳಸಬಹುದು.
  • ಹಾಲಿನಲ್ಲಿ ಕ್ಯಾಲ್ಸಿಯಂ ಇದ್ದು ಅದು ಮೂಳೆ ಮತ್ತು ಸ್ನಾಯುಗಳ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಅರಿಶಿನ ಹಾಲನ್ನು ಗೋಲ್ಡನ್​ ಮಿಲ್ಕ್​ ಎಂದೂ ಕರೆಯುತ್ತಾರೆ. ಅರಿಶಿನ ಹಾಲನ್ನು ತಯಾರಿಸಲು, ಒಂದು ಕಪ್ ಹಾಲು ತೆಗೆದುಕೊಂಡು ಅದನ್ನು ಬಿಸಿಮಾಡಲು ಒಲೆಯ ಮೇಲೆ ಇಟ್ಟು. ½ ಚಮಚ ಅರಿಶಿನ ಸೇರಿಸಿ, ಸ್ವಲ್ಪ ಕಾಳು ಮೆಣಸಿನ ಪುಡಿ ಹಾಕಿ, ಚೆನ್ನಾಗಿ ಬೆರೆಸಿ, ಸೇವಿಸಿ

ABOUT THE AUTHOR

...view details