ಬೀಜಿಂಗ್: ಸುರಕ್ಷಿತ ಹಾಗೂ ಪರಿಣಾಮಕಾರಿಯಾದ ಮತ್ತೊಂದು ಕೋವಿಡ್-19 ಲಸಿಕೆಯನ್ನು ದೇಶದಲ್ಲಿ ತುರ್ತು ಬಳಕೆಗೆ ಅನುಮೋದಿಸಿರುವುದಾಗಿ ಚೀನಾ ತಿಳಿಸಿದೆ.
ಚೀನಾ ಅಕಾಡೆಮಿ ಆಫ್ ಸೈನ್ಸಸ್ ಅಡಿಯಲ್ಲಿ ಬರುವ ಮೈಕ್ರೋಬಯಾಲಜಿ ಸಂಸ್ಥೆ ಹಾಗೂ ಅನ್ಹುಯಿ ಝಿಪೈ ಲಾಂಗ್ಕಾಮ್ ಎಂಬ ಬಯೋಫಾರ್ಮಾಸ್ಯುಟಿಕಲ್ ಕಂಪನಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆ ಇದಾಗಿದೆ.
ಇದನ್ನೂ ಓದಿ: ಮತ್ತೆ ಕೊರೊನಾ ಅಬ್ಬರ: ನಿನ್ನೆ ದೇಶದಲ್ಲಿ 35 ಸಾವಿರ ಸೋಂಕಿತರು ಪತ್ತೆ.. ಒಟ್ಟು 3.71 ಕೋಟಿ ಮಂದಿಗೆ ಲಸಿಕೆ
ಈ ವ್ಯಾಕ್ಸಿನ್ನ ಮೊದಲ ಹಾಗೂ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳು 2020ರ ಅಕ್ಟೋಬರ್‌ನಲ್ಲೇ ಪೂರ್ಣಗೊಂಡಿವೆ. ಚೀನಾ, ಉಜ್ಬೇಕಿಸ್ತಾನ್, ಪಾಕಿಸ್ತಾನ ಮತ್ತು ಇಂಡೋನೇಷ್ಯಾದಲ್ಲಿ ನವೆಂಬರ್‌ನಿಂದ ಈ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ.
ಲಸಿಕೆಯು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದ್ದು, ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಯಾವುದೇ ತೀವ್ರವಾದ ಅಡ್ಡಪರಿಣಾಮ ಉಂಟಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ. ಚೀನಾದಲ್ಲಿ ತುರ್ತು ಬಳಕೆಗಾಗಿ ಅನುಮೋದಿಸಲಾದ ನಾಲ್ಕನೇ ಕೋವಿಡ್ ಲಸಿಕೆ ಇದಾಗಿದೆ.