ಗಿರಿದಿಹ್ (ಜಾರ್ಖಂಡ್): ವಿಷಾಹಾರ ಸೇವಿಸಿ ಅಜ್ಜ ಮತ್ತು ಮೊಮ್ಮಗ ಮೃತಪಟ್ಟಿದ್ದು, ಕುಟುಂದದ ಉಳಿದ ಆರು ಮಂದಿ ಸ್ಥಿತಿ ಗಂಭೀರವಾಗಿರುವ ಘಟನೆ ಜಾರ್ಖಂಡ್ನ ಗಿರಿದಿಹ್ ಜಿಲ್ಲೆಯ ಜಮುವಾ ಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ.
ಮೃತರನ್ನು ಕುಲು ರಾಣಾ (60) ಹಾಗೂ ವಿಪಿನ್ ಕುಮಾರ್ (14) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಮೀನು ಊಟ ಮಾಡಿ ಮಲಗಿದ್ದ ಕುಲು ರಾಣಾ ಕುಟುಂಬದ ಎಂಟು ಮಂದಿ ಇಂದು ಬೆಳಗಾದರೂ ಎದ್ದೇಳಲೇ ಇಲ್ಲ. ಇದನ್ನು ಗಮನಿಸಿದ ನೆರೆ ಮನೆಯವರು ಹೊರಗಿನಿಂದ ಕೂಗಿದರೂ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಹೀಗಾಗಿ ಮನೆ ಬಾಗಿಲು ಒಡೆದು ಬಂದು ನೋಡಿದಾಗ ಎಲ್ಲರೂ ಅಸ್ವಸ್ಥರಾಗಿ ಬಿದ್ದಿರುವುದು ಕಂಡು ಬಂದಿದೆ.