ಕರ್ನಾಟಕ

karnataka

ETV Bharat / bharat

ಚೆನ್ನೈ ವರ್ಸಸ್​ ಹೈದರಾಬಾದ್​: ಟಾಸ್​​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಡೇವಿಡ್​ ಪಡೆ - ಐಪಿಎಲ್​ 2021

ಸೋತು ಸುಣ್ಣವಾಗಿರುವ ಸನ್​ರೈಸರ್ಸ್ ಹೈದರಾಬಾದ್ ಹಾಗೂ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್​ ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

Chennai vs Hyderabad
Chennai vs Hyderabad

By

Published : Apr 28, 2021, 7:40 PM IST

ನವದೆಹಲಿ:ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್​ನ ಇಂದಿನ 23ನೇ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗುತ್ತಿವೆ. ಟಾಸ್​ ಗೆದ್ದ ಡೇವಿಡ್​ ವಾರ್ನರ್ ಬಳಗ ಬ್ಯಾಟಿಂಗ್​ ಆಯ್ದುಕೊಂಡಿದೆ.

ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದ್ದು, ಇಂದಿನ ಪಂದ್ಯದಲ್ಲಿ ಗೆದ್ದು ಚೆನ್ನೈ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಲಗ್ಗೆ ಹಾಕುವ ಗುರಿ ಇಟ್ಟುಕೊಂಡಿದೆ. ಆದರೆ, ಆಡಿರುವ ಐದು ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಗೆದ್ದಿರುವ ಹೈದರಾಬಾದ್ ಕೊನೆ ಸ್ಥಾನದಲ್ಲಿದ್ದು, ಪ್ಲೇ-ಆಫ್​ ಹಂತಕ್ಕೇರಲು ಮುಂದಿನ ಕೆಲ ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಇದೆ. ಇದೇ ಕಾರಣಕ್ಕಾಗಿ ತಂಡದಲ್ಲಿ ಎರಡು ಬದಲಾವಣೆ ಮಾಡಿದೆ.

ಹೈದರಾಬಾದ್ ತಂಡದಲ್ಲಿ ಅಭಿಷೇಕ್​ ಶರ್ಮಾ ಹಾಗೂ ವಿರಾಟ್​ ಸಿಂಗ್​ ಸ್ಥಾನಕ್ಕೆ ಸಂದೀಪ್​ ಹಾಗೂ ಮನೀಷ್ ಪಾಂಡೆ ಕಣಕ್ಕಿಳಿಯಲಿದ್ದಾರೆ. ಇನ್ನು ಚೆನ್ನೈ ತಂಡ ಬ್ರಾವೋ ಹಾಗೂ ತಾಹೀರ್​ ಸ್ಥಾನಕ್ಕೆ ನಿಗ್ಡಿ ಹಾಗೂ ಮೊಯಿನ್​ಗೆ ಮಣೆ ಹಾಕಿದೆ.

ಆಡುವ 11ರ ಬಳಗ ಇಂತಿವೆ

ಚೆನ್ನೈ ಸೂಪರ್​ ಕಿಂಗ್ಸ್​:ಋತುರಾಜ್​ ಗಾಯಕ್ವಾಡ್​, ಫಾಫು ಡು ಪ್ಲೆಸಿಸ್​, ಮೊಯಿನ್ ಅಲಿ, ಸುರೇಶ್ ರೈನಾ, ಅಬಾಟಿ ರಾಯುಡು, ಎಂಎಸ್​ ಧೋನಿ(ಕ್ಯಾಪ್ಟನ್​, ವಿ,ಕೀ),ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್​, ಶಾರ್ದೂಲ್ ಠಾಕೂರ್​, ನಿಗ್ಡಿ, ದೀಪಕ್​ ಚಹರ್​

ಸನ್​ರೈಸರ್ಸ್ ಹೈದರಾಬಾದ್​:ಡೇವಿಡ್​ ವಾರ್ನರ್​(ಕ್ಯಾಪ್ಟನ್​), ಬೈರ್​ಸ್ಟೋವ್​(ವಿ,ಕೀ), ಕೇನ್​ ವಿಲಿಯಮ್ಸನ್​, ಮನೀಷ್ ಪಾಂಡೆ, ಕೇದಾರ್ ಜಾಧವ್, ವಿಜಯ್​ ಶಂಕರ್​, ರಾಶೀದ್ ಖಾನ್​, ಜಗದೀಶ್ ಸುಚಿತ್ರ, ಸಂದೀಪ್​ ಶರ್ಮಾ, ಖಲೀಲ್​ ಅಹ್ಮದ್​, ಸಿದ್ಧಾರ್ಥ್​ ಕೌಲ್​

ಸನ್​ರೈಸರ್ಸ್ ಹೈದರಾಬಾದ್​ ತಂಡ ತನ್ನ ಹಿಂದಿನ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಡ್ರಾ ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ, ಸೂಪರ್ ಓವರ್​ನಲ್ಲಿ ಪಂದ್ಯ ಕೈಚೆಲ್ಲಿತ್ತು. ಆದರೆ, ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಅಬ್ಬರಿಸಿ ಗೆಲುವು ಸಾಧಿಸಿದೆ.

ABOUT THE AUTHOR

...view details