ಹೈದರಾಬಾದ್ (ತೆಲಂಗಾಣ): ತಾವು ಬಂದಾಗ ಎದ್ದು ನಿಂತು ನಮಸ್ತೆ ಹೇಳಿಲ್ಲ ಎಂಬ ಕಾರಣಕ್ಕೆ ಹೈದರಾಬಾದ್ನ ಚಾರ್ಮಿನಾರ್ ಶಾಸಕ ಮುಮ್ತಾಜ್ ಅಹಮದ್ ಖಾನ್ ಸ್ಥಳೀಯನೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನಿನ್ನೆ ರಾತ್ರಿ ಚಾರ್ಮಿನಾರ್ನ ಹಳೆ ಬಸ್ ನಿಲ್ದಾಣದ ಬಳಿಯಿರುವ ತನ್ನ ಮನೆ ಮುಂದೆ ಗುಲಾಂ ಗೌಸ್ ಜಿಲಾನಿ ಎಂಬ ವ್ಯಕ್ತಿಯೊಬ್ಬ ಕುಳಿತುಕೊಂಡಿದ್ದನು. ಈ ವೇಳೆ ಶಾಸಕ ಕಾರಿನಲ್ಲಿ ತಮ್ಮ ನಿವಾಸಕ್ಕೆ ತೆರಳಲು ಬಂದಿಳಿದಿದ್ದಾರೆ. ಆದರೆ ಅಲ್ಲಿ ಕುಳಿತಿದ್ದ ಆ ವ್ಯಕ್ತಿ ಎದ್ದು ನಿಂತು ತಮಗೆ ನಮಸ್ತೆ ಹೇಳಿಲ್ಲ ಎಂದು ಕೆನ್ನೆಗೆ ಹೊಡೆದಿದ್ದಾರೆ ಎಂದು ಹೇಳಲಾಗ್ತಿದೆ.