ಕೊಚ್ಚಿ (ಕೇರಳ): ಮಹಿಳಾ ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ, ಕಾಂಗ್ರೆಸ್ ಸಂಸದರಾದ ಅಡೂರ್ ಪ್ರಕಾಶ್, ಹಿಬಿ ಈಡನ್ ಮತ್ತು ಕಾಂಗ್ರೆಸ್ ಶಾಸಕ ಎ.ಪಿ. ಅನಿಲ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ. ಎಫ್ಐಆರ್ನಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ ಎ.ಪಿ. ಅಬ್ದುಲ್ಲಕುಟ್ಟಿ ಹೆಸರೂ ಇದೆ.
ಸೋಲಾರ್ ಹಗರಣ ಕೇಸ್ಗೆ ಸಂಬಂಧಿಸಿದಂತೆ ಮಹಿಳಾ ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಸಿಬಿಐ ಈ ಕ್ರಮ ಕೈಗೊಂಡಿದೆ. ತಿರುವನಂತಪುರಂ ಮತ್ತು ಕೊಚ್ಚಿಯ ಮುಖ್ಯ ನ್ಯಾಯಾಲಯಗಳಿಗೆ ಸಿಬಿಐ, ಎಫ್ಐಆರ್ ಪ್ರತಿಗಳನ್ನು ಸಲ್ಲಿಸಿದೆ.