ಬೆಂಗಳೂರು :ಭಾರತದ ಚಂದ್ರಯಾನ-2 ಬಾಹ್ಯಾಕಾಶ ನೌಕೆ ಚಂದ್ರನ ಸುತ್ತ 9,000ಕ್ಕಿಂತ ಹೆಚ್ಚು ಕಕ್ಷೆಗಳನ್ನು ಪೂರ್ಣಗೊಳಿಸಿದೆ. ಇಮೇಜಿಂಗ್ ಮತ್ತು ವೈಜ್ಞಾನಿಕ ಉಪಕರಣಗಳು ಅತ್ಯುತ್ತಮ ಡೇಟಾ ಒದಗಿಸುತ್ತಿವೆ ಎಂದು ಇಸ್ರೋ ಸೋಮವಾರ ಹೇಳಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರನ ಕಕ್ಷೆಯ ಸುತ್ತ ಚಂದ್ರಯಾನ-2 ಬಾಹ್ಯಾಕಾಶ ನೌಕೆಯ ಎರಡು ವರ್ಷಗಳ ಕಾರ್ಯಾಚರಣೆ ಪೂರ್ಣಗೊಳಿಸಿದ ನೆನಪಿಗಾಗಿ ಸೋಮವಾರದಿಂದ ಆರಂಭವಾದ ಎರಡು ದಿನಗಳ ಚಂದ್ರ ವಿಜ್ಞಾನ ಕಾರ್ಯಾಗಾರ-2021 ಅನ್ನು ನಡೆಸುತ್ತಿದೆ.
ಚಂದ್ರಯಾನ-2 ಬಾಹ್ಯಾಕಾಶ ನೌಕೆಯಲ್ಲಿರುವ ಎಂಟು ಪೇಲೋಡ್‌ಗಳು ಚಂದ್ರನ ಮೇಲ್ಮೈಯಿಂದ ಸುಮಾರು 100 ಕಿ.ಮೀ ಎತ್ತರದಲ್ಲಿ ಚಂದ್ರನ ದೂರಸ್ಥ ಸಂವೇದನೆ ಮತ್ತು ಅವಲೋಕನಗಳನ್ನು ನಡೆಸುತ್ತಿವೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು.
ಈವರೆಗೆ, ಚಂದ್ರಯಾನ-2 ಚಂದ್ರನ ಸುತ್ತ 9,000ಕ್ಕೂ ಹೆಚ್ಚು ಕಕ್ಷೆಗಳನ್ನು ಪೂರ್ಣಗೊಳಿಸಿದೆ ಎಂದು ಬಾಹ್ಯಾಕಾಶ ಇಲಾಖೆಯ (ಡಿಒಎಸ್) ಕಾರ್ಯದರ್ಶಿ ಶಿವನ್ ಹೇಳಿದರು. ಬೆಂಗಳೂರು ಪ್ರಧಾನ ಕಚೇರಿಯ ಇಸ್ರೋ ಪ್ರಕಾರ, ಚಂದ್ರಯಾನ-2 ಆರ್ಬಿಟರ್ ಪೇಲೋಡ್‌ಗಳ ದತ್ತಾಂಶದೊಂದಿಗೆ ಡೇಟಾ ಉತ್ಪನ್ನ ಮತ್ತು ವಿಜ್ಞಾನ ದಾಖಲೆಗಳನ್ನು ಶಿವನ್ ಬಿಡುಗಡೆ ಮಾಡಿದ್ದಾರೆ.
ಚಂದ್ರಯಾನ-2 ಮಿಷನ್‌ನಿಂದ ಹೆಚ್ಚಿನ ವೈಜ್ಞಾನಿಕ ಮಾಹಿತಿ ಹೊರತರಲು ಸೈನ್ಸ್ ಡೇಟಾವನ್ನು ಅಕಾಡೆಮಿ ಮತ್ತು ಸಂಸ್ಥೆಗಳ ವಿಶ್ಲೇಷಣೆಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ ಎಂದು ಇಸ್ರೋ ಹೇಳಿದೆ.
ಚಂದ್ರಯಾನ-2 ಉಪಗ್ರಹದಲ್ಲಿರುವ ಚಿತ್ರಣ ಮತ್ತು ವೈಜ್ಞಾನಿಕ ಉಪಕರಣಗಳು ಅತ್ಯುತ್ತಮ ಡೇಟಾವನ್ನು ಒದಗಿಸುತ್ತಿವೆ ಎಂದು ಅಪೆಕ್ಸ್ ಸೈನ್ಸ್ ಬೋರ್ಡ್, ಇಸ್ರೋ ಮಾಜಿ ಅಧ್ಯಕ್ಷ ಎ ಎಸ್ ಕಿರಣ್ ಕುಮಾರ್ ಹೇಳಿದ್ದಾರೆ.