ನವದೆಹಲಿ: ಪ್ರಸ್ತುತ ಸುಮಾರು 2 ಕೋಟಿ ಡೋಸ್ಗಳಷ್ಟು ಕೊರೊನಾ ವ್ಯಾಕ್ಸಿನ್ ರಾಜ್ಯಗಳ ಬಳಿ ಲಭ್ಯವಿದೆ. ಮುಂದಿನ ಮೂರು ದಿನಗಳಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತೆ 26 ಲಕ್ಷ ಡೋಸ್ಗಳಷ್ಟು ಲಸಿಕೆ ಪೂರೈಕೆಯಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಮುಂದಿನ ಮೂರು ದಿನಗಳಲ್ಲಿ ರಾಜ್ಯಗಳಿಗೆ 26 ಲಕ್ಷ ಡೋಸ್ ಲಸಿಕೆ ಪೂರೈಕೆ
ಸುಮಾರು 2 ಕೋಟಿ ಡೋಸ್ ಲಸಿಕೆ (1,97,70,555) ರಾಜ್ಯ ಮತ್ತು ಕೇಂದ್ರಾಡಳಿತಗಳ ಬಳಿ ಲಭ್ಯವಿದೆ. ಮುಂದಿನ ಮೂರು ದಿನಗಳಲ್ಲಿ 25,98,760 ಡೋಸ್ ಲಸಿಕೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಉಚಿತವಾಗಿ ಮತ್ತು ನೇರವಾಗಿ ಲಸಿಕೆ ಪೂರೈಕೆ ವೈವಸ್ಥೆಯ ಅಡಿಯಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ 21 ಕೋಟಿಗೂ ಅಧಿಕ ಡೋಸ್ಗಳಷ್ಟು (21,07,31,130) ಕೋವಿಡ್ ಲಸಿಕೆ ನೀಡಿದೆ. ಈ ಪೈಕಿ ವ್ಯರ್ಥವಾಗಿರುವ ಡೋಸ್ಗಳ ಸಹಿತ ಒಟ್ಟು 19,09,60,575 ಡೋಸ್ಗಳಷ್ಟು ಲಸಿಕೆ ಬಳಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಈಗಾಗಲೇ ಸುಮಾರು 2 ಕೋಟಿ ಡೋಸ್ ಲಸಿಕೆ (1,97,70,555) ರಾಜ್ಯ ಮತ್ತು ಕೇಂದ್ರಾಡಳಿತಗಳ ಬಳಿ ಲಭ್ಯವಿದೆ. ಮುಂದಿನ ಮೂರು ದಿನಗಳಲ್ಲಿ 25,98,760 ಡೋಸ್ ಲಸಿಕೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗುವುದು ಎಂದು ತಿಳಿಸಿದೆ.