ಹೊಸದಿಲ್ಲಿ: ಆಫ್ರಿಕಾದ ಯಾವ ದೇಶಗಳಲ್ಲಿ ಕೋವಿಡ್ ರೂಪಾಂತರ 'ಒಮಿಕ್ರೋನ್ ' ಉಲ್ಭಣಗೊಂಡಿದೆಯೋ ಆ ದೇಶಗಳಿಗೆ ಭಾರತ ಸರ್ಕಾರ 'ಮೇಡ್ ಇನ್ ಇಂಡಿಯಾ' ಲಸಿಕೆ ಪೂರೈಕೆ ಮತ್ತು ಇತರ ನೆರವನ್ನು ಒದಗಿಸಲು ಸಜ್ಜಾಗಿದೆ.
"ಮೇಡ್ ಇನ್ ಇಂಡಿಯಾ" ಲಸಿಕೆಗಳ ಪೂರೈಕೆ ಸೇರಿದಂತೆ ಆಫ್ರಿಕಾದ ದೇಶಗಳಿಗೆ ಬೆಂಬಲ ನೀಡಲು ಭಾರತ ಸರ್ಕಾರ ಸಿದ್ಧವಾಗಿದೆ. ಕೋವಾಕ್ಸ್ ಮೂಲಕ ಅಥವಾ ದ್ವಿಪಕ್ಷೀಯವಾಗಿ ಸರಬರಾಜುಗಳನ್ನು ಕೈಗೊಳ್ಳಬಹುದು ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿದೆ.
ಭಾರತವು ಅಗತ್ಯ ಔಷಧಗಳು, ಪರೀಕ್ಷಾ ಕಿಟ್‌ಗಳು, ಕೈಗವಸುಗಳು, ಪಿಪಿಇ ಕಿಟ್‌ಗಳು ಮತ್ತು ವೆಂಟಿಲೇಟರ್‌ಗಳಂತಹ ವೈದ್ಯಕೀಯ ಉಪಕರಣಗಳನ್ನು ನೀಡಲು ಸಜ್ಜಾಗಿದೆ. ಕೋವಾಕ್ಸ್ ಮೂಲಕ ಯಾವುದೇ ಹೊಸ ಅವಶ್ಯಕತೆಗಳನ್ನು ತ್ವರಿತವಾಗಿ ಪೂರೈಸಲು ಪರಿಗಣಿಸಲಾಗುವುದು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:Omicron Fear: ಆಫ್ರಿಕಾದ ರಾಷ್ಟ್ರಗಳಿಂದ ಬಂದ ನೂರು ಮಂದಿ ಬಿಹಾರದಲ್ಲಿ ನಾಪತ್ತೆ
ಕೇಂದ್ರ ಸರ್ಕಾರವು ಈವರೆಗೆ 25 ಮಿಲಿಯನ್ ಡೋಸ್ ಮೇಡ್ ಇನ್ ಇಂಡಿಯಾ ಲಸಿಕೆಗಳನ್ನು ಆಫ್ರಿಕಾದ 41 ದೇಶಗಳಿಗೆ ಪೂರೈಸಿದೆ.