ನವದೆಹಲಿ:ದೇಶ ಸೇರಿದಂತೆ ವಿಶ್ವದಲ್ಲಿ ಕೊರೊನಾ ಕೇಕೆ ಕುಗ್ಗಿದೆ. ಹೀಗಾಗಿ ಕೇಂದ್ರ ಸರ್ಕಾರ ಕೊರೊನಾ ಲಸಿಕೆ ಖರೀದಿ ಮಾಡುವುದನ್ನು ನಿಲ್ಲಿಸಿದೆ. ಖರೀದಿ ನಿಂತರೂ ಇನ್ನೂ 3 ಕೋಟಿ ಡೋಸ್ ಲಸಿಕೆ ದಾಸ್ತಾನಿದೆ. ಅದರ ವಿತರಣೆ ಕಾರ್ಯಕ್ರಮ ಇನ್ನೂ ಮುಗಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ದೇಶಾದ್ಯಂತ ಮೊದಲ, ಎರಡನೇ, ಮುನ್ನೆಚ್ಚರಿಕೆ ಸೇರಿದಂತೆ 200 ಕೋಟಿಗಿಂತಲೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನ ಇನ್ನೂ ಬಹಳ ದೂರ ಸಾಗಬೇಕಿದೆ. ಸರ್ಕಾರದ ಬಳಿ ಇನ್ನೂ 3 ಕೋಟಿ ಲಸಿಕೆ ಡೋಸ್‌ಗಳ ದಾಸ್ತಾನು ಇದೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್ ಲಸಿಕೆ ಸಂಗ್ರಹ ಮತ್ತು ಖರೀದಿ ನಿಲ್ಲಿಸಲಾಗಿದೆ. ಹಾಗಂತ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮವೇ ಮುಗಿದಿಲ್ಲ. ಕೊರೊನಾ ಅಂತಿಮ ಹಂತದಲ್ಲಿದೆ. ಅಗತ್ಯ ಬಿದ್ದಲ್ಲಿ ಲಸಿಕಾ ಡೋಸ್‌ಗಳ ವಿತರಣೆ ಅಭಿಯಾನ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.