ಧನ್ಬಾದ್:ಚಲಿಸುತ್ತಿದ್ದ ಪಾಟ್ನಾ - ರಾಂಚಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಇಂಜಿನ್ ಚಕ್ರದ ಅಡಿಗೆ ಹಸು ಸಿಲುಕಿಕೊಂಡ ಕಾರಣ ಧನ್ಬಾದ್ ರೈಲ್ವೆ ವಿಭಾಗದ ರಾಮಗಢದ ಕುಜು ನಿಲ್ದಾಣದಿಂದ ಅರ್ಧ ಗಂಟೆ ತಡವಾಗಿ ರೈಲು ಚಲಿಸಿದ ಘಟನೆ ನಡೆದಿದೆ.
ಪಾಟ್ನಾ- ರಾಂಚಿ ವಂದೇ ಭಾರತ್ ಎಕ್ಸ್ಪ್ರೆಸ್ ನಿಗದಿಯಂತೆ ಪಾಟ್ನಾದಿಂದ ಹೊರಟಿದ್ದು, ಕುಜು ನಿಲ್ದಾಣಕ್ಕೆ ತಲುಪುವ ವೇಳೆ ರೈಲಿನ ಇಂಜಿನ್ ಚಕ್ರದಲ್ಲಿ ಹಸು ಸಿಲುಕಿಕೊಂಡಿದೆ. ರೈಲು ವೇಗವಾಗಿದ್ದ ಕಾರಣ ರೈಲಿನಡಿಗೆ ಸಿಲುಕಿದ್ದ ಹಸು ಸಾವನ್ನಪ್ಪಿದೆ. ಮುಂದೆ ಕುಜು ನಿಲ್ದಾಣದಲ್ಲಿ ನಿಂತಿದ್ದು, ವಿಷಯ ತಿಳಿಯುತ್ತಿದ್ದಂತೆ ರೈಲ್ವೇ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಇಂಜಿನ್ ಚಕ್ರದಲ್ಲಿ ಸಿಲುಕಿ ಮೃತಪಟ್ಟಿದ್ದ ಹಸುವನ್ನು ಹೊರತೆಗೆದಿದ್ದಾರೆ. ಹಸುವನ್ನು ಹೊರತೆಗೆದ ಬಳಿಕ ವಂದೇ ಭಾರತ್ ರೈಲು ರಾಂಚಿಗೆ ಪ್ರಯಾಣ ಮುಂದುವರಿಸಿದೆ.
ಅರ್ಧ ಗಂಟೆ ನಿಂತಿದ್ದ ರೈಲು: ಈಟಿವಿ ಭಾರತ ಜೊತೆಗೆ ಮಾತನಾಡಿದ ಧನ್ಬಾದ್ ರೈಲ್ವೆ ವಿಭಾಗದ ಡಿಆರ್ಎಂ ಅಮರೇಶ್ ಕುಮಾರ್, ಬರ್ಕಾಕಾನಾದ ಮೊದಲು ಕುಜು ನಿಲ್ದಾಣಕ್ಕೆ ರೈಲು ತಲುಪುವ ವೇಳೆ ವಂದೇ ಭಾರತ್ ರೈಲು ಇಂಜಿನ್ ಚಕ್ರದ ಅಡಿಗೆ ಹಸು ಸಿಲುಕಿಕೊಂಡಿದೆ. ನಿಲ್ದಾಣದಲ್ಲಿ ರೈಲು ನಿಲ್ಲಿಸಿದ ನಂತರ ಹಸುವನ್ನು ಹೊರತೆಗೆಯುವ ಕೆಲಸವನ್ನು ಸಿಬ್ಬಂದಿ ಮಾಡಿದ್ದಾರೆ. 11.20 ಕ್ಕೆ ನಿಲ್ದಾಣದಲ್ಲಿ ನಿಂತ ರೈಲು ದನಗಳನ್ನು ಬಿಡುಗಡೆ ಮಾಡಿದ ನಂತರ 12.50ಕ್ಕೆ ಹೊರಟಿದೆ. ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಘಟನೆಯಲ್ಲಿ ಹಸುಗಳು ಸಾವನ್ನಪ್ಪಿವೆ ಎಂದು ತಿಳಿಸಿದ್ದಾರೆ.
ಈ ಹಿಂದೆಯೂ ರೈಲಿಗೆ ಅಡ್ಡ ಬಂದಿತ್ತು ಹಸು: ಈ ಹಿಂದೆ ಜೂನ್ 27 ರಂದು ಪಾಟ್ನಾ - ರಾಂಚಿ ವಂದೇ ಭಾರತ್ ಎಕ್ಸ್ಪ್ರೆಸ್ನ ಪ್ರಾಯೋಗಿಕ ಓಡಾಟದ ವೇಳೆ ಹಸು ಹಳಿಯ ಮೇಲೆ ಬಂದಿತ್ತು. ಆ ವೇಳೆ ಲೋಕೋಪೈಲಟ್ ಸಮಯಪ್ರಜ್ಞೆಯಿಂದ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದ ಕಾರಣ ಅಪಾಯ ತಪ್ಪಿತ್ತು. ಆ ವೇಲೆ ರೈಲಿನ ವೇಗ ಕಡಿಮೆ ಇದ್ದ ಕಾರಣ ಯಾವುದೇ ಅವಘಡ ಸಂಭವಿಸಿರಲಿಲ್ಲ. ಆ ಘಟನೆಯಲ್ಲಿ ರೈಲು ಟ್ರ್ಯಾಕ್ ಏರಿದ್ದ ಹಸು ಹಳಿಯಿಂದ ಹಿಂದೆ ಸರಿಯುತ್ತಿರಲಿಲ್ಲ. ಆಗ ನಾಲ್ವರುಇ ಸಿಬ್ಬಂದಿ ಹಸುವನ್ನು ಟ್ರ್ಯಾಕ್ನಿಂದ ಕೆಳಗೆ ತಂದು ರೈಲು ಹಾದುಹೋಗುವವರೆಗೂ ಹಿಡಿದಿಟ್ಟುಕೊಂಡಿದ್ದರು.
ಇದನ್ನೂ ಓದಿ :Vande Bharat Train: ವಂದೇ ಭಾರತ್ ರೈಲು ಪ್ರಯಾಣಿಕನ ತಿಂಡಿಯಲ್ಲಿ ಜಿರಳೆ: ಪರವಾನಗಿದಾರರಿಗೆ ಎಚ್ಚರಿಕೆ ನೀಡಿದ IRCTC