ಚಂಡೀಗಢ :ಕಾಂಗ್ರೆಸ್ ಹೈಕಮಾಂಡ್ ನವಜೋತ್ ಸಿಂಗ್ ಸಿಧು ಅವರನ್ನು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಘೋಷಿಸಿದ ನಂತರವೂ ಪಂಜಾಬ್ ಕಾಂಗ್ರೆಸ್‌ನಲ್ಲಿ ಅಸಮಾಧಾನ ತಣಿಯುವಂತೆ ಕಾಣ್ತಿಲ್ಲ.
ಸಿಧು ನೇಮಕಾತಿಯ ನಂತರ ತಮ್ಮ ಪ್ರಭಾವವನ್ನು ಬಲ ಪಡಿಸಿಕೊಳ್ಳಲು ಕಾಂಗ್ರೆಸ್ ಶಾಸಕರು ಹಾಗೂ ಪಕ್ಷದ ಮುಖಂಡರನ್ನು ಭೇಟಿಯಾಗುತ್ತಿದ್ದಾರೆ. ಏತನ್ಮಧ್ಯೆ, ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೂಡ ತಮ್ಮ ಬೆಂಬಲಿಗರಿಗೆ ನಿರಾಶೆ ಮಾಡಿಲ್ಲ. ಸಿಧು ಅಮೃತಸರದಲ್ಲಿ ಶಾಸಕರೊಂದಿಗೆ ಸಭೆ ನಡೆಸಬೇಕೆಂದು ಕರೆ ನೀಡಿದರೆ, ಸಿಎಂ ಅಮರೀಂದರ್ ಅವರು ಇಂದು ಚಂಡೀಗಢದಲ್ಲಿ ಪಂಜಾಬ್ ಸಂಸದರೊಂದಿಗೆ ಸಭೆ ಕರೆದಿದ್ದಾರೆ.
ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಅಂಗದ್ ಸೈನಿ, ಕ್ಷಮಿಸುವುದು ಅಥವಾ ಕ್ಷಮಿಸದಿರುವುದು ವಿಷಯವಲ್ಲ. ಸೋನಿಯಾ ಗಾಂಧಿಯವರ ಆದೇಶದಂತೆ ಕಾಂಗ್ರೆಸ್ ಪಕ್ಷ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.
ಶಾಸಕ ಇಂದರ್‌ಬೀರ್ ಸಿಂಗ್ ಬುಲಾರಿಯಾ, ಪಿರ್ಮಲ್ ಸಿಂಗ್, ಮದನ್ ಲಾಲ್ ಜಲಾಲ್‌ಪುರ್, ಹರ್ಜೋತ್ ಕಮಲ್, ಬೃಂದರ್ ಧಿಲ್ಲಾನ್, ಅಮೃತಸರ ಮೇಯರ್‌ರಿಂಟು ಹಿಡಿದು ಅನೇಕ ನಾಯಕರು ಸಿಧು ಅವರ ಮನೆಗೆ ಆಗಮಿಸಿದ್ದಾರೆ. ಶಾಸಕ ಜೋಗಿಂದರ್‌ಪಾಲ್ ಭೋವಾ, ಪರಗತ್ ಸಿಂಗ್, ತಾರ್ಸೆಮ್ ಸಿಂಗ್ ಡಿಸಿ, ಕಾರ್ಯಾಧ್ಯಕ್ಷರಾದ ಪವನ್ ಗೋಯೆಲ್, ಶೇರ್ ಸಿಂಗ್ ಗುಬಯಾ, ಶಾಸಕ ಅಂಗದ್ ಸೈನಿ ಕೂಡ ಬ್ಯಾಂಡ್‌ವ್ಯಾಗನ್ ಕೂಡ ಸಿಧು ಟೀಂ ಸೇರಿದ್ದಾರೆ.