ಕರ್ನಾಟಕ

karnataka

ETV Bharat / bharat

ನಿಷೇಧಿತ ಸಂಘಟನೆ ಉಗ್ರರ ದಾಳಿ: ತ್ರಿಪುರಾದಲ್ಲಿ ಬಿಎಸ್​ಎಫ್​ ಯೋಧ ಹುತಾತ್ಮ

ಉತ್ತರ ತ್ರಿಪುರಾ ಜಿಲ್ಲೆಯಲ್ಲಿ ಗಸ್ತಿನಲ್ಲಿದ್ದ ಯೋಧರ ಮೇಲೆ ನಿಷೇಧಿತ ಎನ್‌ಎಲ್‌ಎಫ್‌ಟಿ ಉಗ್ರರು ನಡೆಸಿದ ಹೊಂಚಿನ ದಾಳಿಯಲ್ಲಿ ಬಿಎಸ್​ಎಫ್​ ಯೋಧರೊಬ್ಬರು ಹುತಾತ್ಮರಾಗಿದ್ಧಾರೆ.

bsf-jawan-killed-in-ambush-by-extremists-in-tripura
ನಿಷೇಧಿತ ಸಂಘಟನೆಯ ಉಗ್ರರ ಹೊಂಚಿನ ದಾಳಿ: ಬಿಎಸ್​ಎಫ್​ ಯೋಧ ಹುತಾತ್ಮ

By

Published : Aug 19, 2022, 8:18 PM IST

ಅಗರ್ತಲಾ (ತ್ರಿಪುರ): ತ್ರಿಪುರದಲ್ಲಿ ಗಡಿ ಭದ್ರತಾ ಪಡೆ (ಬಿಎಸ್​ಎಫ್​) ಯೋಧರ ಮೇಲೆ ನಿಷೇಧಿತ ಸಂಘಟನೆಯ ಉಗ್ರರು ಹೊಂಚು ಹಾಕಿ ದಾಳಿ ಮಾಡಿದ್ದು, ಇದರಲ್ಲಿ ಓರ್ವ ಹೆಡ್​ ಕಾನ್‌ಸ್ಟೇಬಲ್ ಹುತಾತ್ಮರಾಗಿದ್ದಾರೆ. ಇಲ್ಲಿನ ಸಿಮ್ನಾಪುರ ಗಡಿ ಪ್ರದೇಶದಲ್ಲಿ ಯೋಧರು ಗಸ್ತಿನಲ್ಲಿದ್ದಾಗ ಈ ದಾಳಿ ನಡೆಸಲಾಗಿದೆ.

ಉತ್ತರ ತ್ರಿಪುರಾ ಜಿಲ್ಲೆಯ ಆನಂದಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂದಿನಂತೆ ಇಂದು ಬೆಳಗ್ಗೆ ಕೂಡ ಬಿಎಸ್‌ಎಫ್ ಯೋಧರು ಗಸ್ತಿನಲ್ಲಿದ್ದರು. ಈ ವೇಳೆ ನಿಷೇಧಿತ ನ್ಯಾಶನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರಾ (ಎನ್‌ಎಲ್‌ಎಫ್‌ಟಿ) ಸಂಘಟನೆಯ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಮುಳ್ಳುತಂತಿ ಬೇಲಿಯಲ್ಲಿ ಅವಿತುಕೊಂಡು ಏಕಾಏಕಿ ಮನಬಂದಂತೆ ದಾಳಿ ಮಾಡಿದ್ದಾರೆ.

ಆಗ ಇದಕ್ಕೆ ಯೋಧರು ಪ್ರತಿದಾಳಿ ನಡೆಸಿದ್ದಾರೆ. ಆದಾಗ್ಯೂ, ಬಿಎಸ್‌ಎಫ್‌ನ 145 ಬೆಟಾಲಿಯನ್‌ನ ಹೆಡ್ ಕಾನ್‌ಸ್ಟೇಬಲ್ ಆಗಿದ್ದ ಗ್ರಿಜೇಶ್ ಕುಮಾರ್ ಅವರಿಗೆ ನಾಲ್ಕು ಗುಂಡುಗಳು ತಾಗಿ ಹುತಾತ್ಮರಾಗಿದ್ದಾರೆ. ಯೋಧರು ಗುಂಡಿನ ದಾಳಿಯನ್ನು ತೀವ್ರಗೊಳಿಸಿದಾಗ ಉಗ್ರರು ಸ್ಥಳದಿಂದ ತಪ್ಪಿಸಿಕೊಂಡು ಬಾಂಗ್ಲಾದೇಶದ ದಟ್ಟ ಅರಣ್ಯದತ್ತ ಓಡಿಹೋದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಯಾವ ಸಿನಿಮಾ ಸ್ಕ್ರಿಪ್ಟ್​​ಗೂ ಕಮ್ಮಿ ಇಲ್ಲ ಕೆಎಲ್‌ಒ ಉಗ್ರಗಾಮಿ ಕೈಲಾಶ್​​​ ಪ್ರೇಮ ಕಹಾನಿ

ABOUT THE AUTHOR

...view details