ಪಲಾಮು (ಜಾರ್ಖಂಡ್):ಬಿಎಸ್‌ಎಫ್ ಯೋಧನೊಬ್ಬ ಪಿಡಿಎಸ್ ಡೀಲರ್, ಆತನ ಪತ್ನಿ ಹಾಗೂ ಇಬ್ಬರು ಗ್ರಾಮಸ್ಥರು ಸೇರಿದಂತೆ ಒಟ್ಟು ನಾಲ್ವರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಪಿಡಿಎಸ್ ಡೀಲರ್ (ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿಯವ) ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಮೇದಿನಿ ರೈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಮೀನು ವಿವಾದದ ಹಿನ್ನೆಲೆ ಕತ್ತಿಯಿಂದ ಹಲ್ಲೆ:ಇಡೀ ಘಟನೆಯು ಪಲಮುವಿನ ಪಾಡ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಗೋಲ್ಹಾನಾದಲ್ಲಿ ನಡೆದಿದೆ. ಮಾಹಿತಿಯ ಪ್ರಕಾರ, ಗೋಲ್ಹಾನಾ ನಿವಾಸಿಯಾದ ಬಿಎಸ್ಎಫ್ ಸೈನಿಕ ಉರ್ಮಿಲ್ ತಿವಾರಿ ಅಲಿಯಾಸ್ ರೂಪೇಶ್ ಹಾಗೂ ಪಿಡಿಎಸ್ ಡೀಲರ್ ಸತ್ಯದೇವ್ ತಿವಾರಿ ಅವರೊಂದಿಗೆ ಜಮೀನು ವಿವಾದ ನಡೆಯುತ್ತಿತ್ತು. ಬಿಎಸ್ಎಫ್ ಯೋಧ ಬೆಳಗ್ಗೆಯಿಂದ ಕತ್ತಿ ಹಿಡಿದು ತಿರುಗಾಡುತ್ತಿದ್ದ. ಮಂಗಳವಾರ ಎರಡು ಗಂಟೆ ಸುಮಾರಿಗೆ ಗ್ರಾಮದ ಪಿಡಿಎಸ್ ಡೀಲರ್ ಸತ್ಯದೇವ್ ತಿವಾರಿ ಅವರ ಮನೆಗೆ ನುಗ್ಗಿ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಈ ದಾಳಿಯಲ್ಲಿ ಪಿಡಿಎಸ್ ಡೀಲರ್ ಸತ್ಯದೇವ್ ತಿವಾರಿ ಮೃತಪಟ್ಟಿದ್ದಾನೆ. ತಿವಾರಿ ಪತ್ನಿ ಮತ್ತು ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲ್ಲರ ಮೇಲೆ ಕತ್ತಿ ಹಲ್ಲೆ ಮಾಡಿದ ಬಿಎಸ್ಎಫ್ ಯೋಧ ಸ್ಥಳದಿಂದ ಪರಾರಿಯಾಗಿದ್ದಾನೆ.