ಕರ್ನಾಟಕ

karnataka

ETV Bharat / bharat

ಕೋವಿಡ್​ ಔಷಧಿ; ಫಾವಿಟೋನ್​ ಉತ್ಪಾದನೆ ಮೂರು ಪಟ್ಟು ಹೆಚ್ಚಿಸಿದ ಬ್ರಿಂಟನ್ ಫಾರ್ಮಾ

ಸದ್ಯ ಬ್ರಿಂಟನ್​ ಈ ಮಾತ್ರೆಗಳ ಉತ್ಪಾದನೆ ಪ್ರಮಾಣವನ್ನು 15 ಲಕ್ಷದಿಂದ 50 ಲಕ್ಷಕ್ಕೆ ಹೆಚ್ಚಿಸಲಿದೆ. ಇದರ ಜೊತೆಗೆ ಇತರ ಜೀವರಕ್ಷಕ ಔಷಧಿಗಳ ಉತ್ಪಾದನೆಯನ್ನು ಸಹ ಕಂಪನಿ ಹೆಚ್ಚಿಸಲಿದೆ. ಸದ್ಯ ಮಾರುಕಟ್ಟೆಯಲ್ಲಿ 10 ಫಾವಿಟೋನ್​ ಮಾತ್ರೆಗಳ ಬೆಲೆ 790 ರೂಪಾಯಿಗಳಾಗಿದೆ.

brinton-pharmaceuticals-ramps-production-of-anti-covid-drug
ಕೋವಿಡ್​ ಔಷಧಿ; ಫಾವಿಟೋನ್​ ಉತ್ಪಾದನೆ ಮೂರು ಪಟ್ಟು ಹೆಚ್ಚಿಸಿದ ಬ್ರಿಂಟನ್ ಫಾರ್ಮಾ

By

Published : May 12, 2021, 5:56 PM IST

ನವದೆಹಲಿ: ಬ್ರಿಂಟನ್ ಫಾರ್ಮಾಸ್ಯೂಟಿಕಲ್ ಕಂಪನಿಯು ತಾನು ತಯಾರಿಸುವ ಸಣ್ಣ ಹಾಗೂ ಮಧ್ಯಮ ಗತಿಯ ಕೋವಿಡ್​-19 ಸೋಂಕು ನಿವಾರಣೆಗೆ ಬಳಸಲಾಗುವ ಫಾವಿಟೋನ್ (ಫಾವಿಪಿರಾವಿರ್ 400 ಮಾತ್ರೆ) ಮಾತ್ರೆಗಳ ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸಿದೆ. ಈ ಕುರಿತು ಕಂಪನಿಯ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಫಾವಿಟೋನ್ ಬ್ರ್ಯಾಂಡ್​ ಹೆಸರಿನಲ್ಲಿ ಫಾವಿಪಿರಾವಿರ್​ 400 ಎಂಜಿ ಮಾತ್ರೆಗಳ ಉತ್ಪಾದನೆಗೆ ಕಳೆದ ಆಗಸ್ಟ್​ನಲ್ಲಿ ಕೇಂದ್ರ ಔಷಧ ನಿಯಂತ್ರಕ ಪ್ರಾಧಿಕಾರ ಅನುಮತಿ ನೀಡಿತ್ತು.

ಸದ್ಯ ಬ್ರಿಂಟನ್​ ಈ ಮಾತ್ರೆಗಳ ಉತ್ಪಾದನೆ ಪ್ರಮಾಣವನ್ನು 15 ಲಕ್ಷದಿಂದ 50 ಲಕ್ಷಕ್ಕೆ ಹೆಚ್ಚಿಸಲಿದೆ. ಇದರ ಜೊತೆಗೆ ಇತರ ಜೀವರಕ್ಷಕ ಔಷಧಿಗಳ ಉತ್ಪಾದನೆಯನ್ನು ಸಹ ಕಂಪನಿ ಹೆಚ್ಚಿಸಲಿದೆ. ಸದ್ಯ ಮಾರುಕಟ್ಟೆಯಲ್ಲಿ 10 ಫಾವಿಟೋನ್​ ಮಾತ್ರೆಗಳ ಬೆಲೆ 790 ರೂಪಾಯಿಗಳಾಗಿದೆ.

"ಕೋವಿಡ್​ ಎರಡನೇ ಅಲೆಯೊಂದಿಗೆ ದೇಶ ಹೋರಾಡುತ್ತಿರುವುದು ದುಃಖದ ಸಂಗತಿ. ಕೊನೆಯ ಗ್ರಾಹಕ ಅಥವಾ ರೋಗಿಯು ಈ ಬಿಕ್ಕಟ್ಟಿನಿಂದ ಅತಿ ಹೆಚ್ಚು ಬಾಧಿತನಾಗಿದ್ದು, ಆತ ತನ್ನ ಆರೋಗ್ಯದತ್ತ ಗಮನಹರಿಸಬೇಕಿದೆ. ಈ ಸ್ಥಿತಿಯಲ್ಲಿ ನಾವು ಕೈಲಾದ ಮಟ್ಟಿಗೆ ಸಹಾಯ ಮಾಡಲು ಯತ್ನಿಸುತ್ತಿದ್ದೇವೆ. ಹೀಗಾಗಿ ನಮ್ಮ ಔಷಧ ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸುವ ಮೂಲಕ ಕೊನೆಯ ಗ್ರಾಹಕ ಅಥವಾ ರೋಗಿಗೆ ಈ ಔಷಧಿಯು ಸುಲಭವಾಗಿ ಸಿಗುವಂತೆ ಮಾಡುತ್ತಿದ್ದೇವೆ. ಇದರಿಂದ ಬಹುದೊಡ್ಡ ಸಮುದಾಯಕ್ಕೆ ಸಹಾಯವಾಗಲಿದೆ ಎಂದು ನಿರೀಕ್ಷಿಸುತ್ತೇವೆ." ಎಂದು ಬ್ರಿಂಟನ್ ಫಾರ್ಮಾ ಕಂಪನಿಯ ಸಿಎಂಡಿ ರಾಹುಲ್ ದರ್ದಾ ಹೇಳಿದ್ದಾರೆ.

ಕಂಪನಿಯು ಸ್ಕ್ಯಾಬೊವೇರ್ ಮತ್ತು ಐವರಬಾಂಡ್​ (ಐವರಮೆಕ್ಟಿನ್ 12ಎಂಜಿ) ಹಾಗೂ ಡಾಕ್ಸಿಬಾಂಡ್ ಎಲ್​ಬಿ ಮತ್ತು ಬ್ರಿಯೊಡಾಕ್ಸ್​ (ಡಾಕ್ಸಿಸೈಕ್ಲಿನ್​) ಮಾತ್ರೆಗಳ ಉತ್ಪಾದನೆಯನ್ನು ಸಹ ಹೆಚ್ಚಿಸಿದೆ.

ABOUT THE AUTHOR

...view details